Home Karnataka State Politics Updates P M Modi fasting: ಮೋದಿ ರಾಮನ ಪ್ರಾಣ ಪ್ರತಿಷ್ಠೆಗೆ ಉಪವಾಸ ಮಾಡಿದ್ದು ಸುಳ್ಳು !!...

P M Modi fasting: ಮೋದಿ ರಾಮನ ಪ್ರಾಣ ಪ್ರತಿಷ್ಠೆಗೆ ಉಪವಾಸ ಮಾಡಿದ್ದು ಸುಳ್ಳು !! ಅರೆ ಏನಿದು ಶಾಕಿಂಗ್ ನ್ಯೂಸ್?

Hindu neighbor gifts plot of land

Hindu neighbour gifts land to Muslim journalist

P M Modi Fasting: ರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಲು ಪ್ರಧಾನಿ ಮೋದಿ ಅವರು 11 ದಿನಗಳ ಕಾಲ ಉಪವಾಸ(PM Modi fasting) ಮಾಡಿದ್ದು ಸುಳ್ಳು, ಅಷ್ಟು ದಿನ ಉಪವಾಸ ಮಾಡಿದರೆ ಯಾರೂ ಬದುಕಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ(Veerappa moily) ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಹೌದು, ಶ್ರೀರಾಮ ಮಂದಿರ(Shree ram mandir)ದಲ್ಲಿನ ಬಾಲರಾಮನ ಪ್ರಾಣಪ್ರತಿಷ್ಠೆ ಸಮಾರಂಭದ ‘ಯಜಮಾನತ್ವ’ ವಹಿಸಿಕೊಂಡಿರುವ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ(PM Modi) ಅವರು11 ದಿನಗಳ ಕಾಲ ಕಠಿಣ ‘ಯಮ ನಿಯಮ’ ವ್ರತಾಚಾರಣೆ ಕೈಗೊಂಡಿದ್ದರು. ಉಪವಾಸವಿದ್ದು, ಬರೀ ಎಳನೀರು ಕುಡಿದೇ ಅವರು ರಾಮನ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿಸಿದರು. ಆದ್ರೆ, ಮೋದಿ ಅವರ 11 ದಿನಗಳ ಉಪವಾಸ ವ್ರತದ ಮೇಲೆ ಮಾಜಿ ಮುಖ್ಯಮಂತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. 11 ದಿನಗಳ‌ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ವ್ರತದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಾನು ಬೆಳಗ್ಗೆ ವಾಕಿಂಗ್ ಮಾಡಬೇಕಾದರೆ ವೈದ್ಯರ ಬಳಿ ಈ ಬಗ್ಗೆ ಚರ್ಚೆ ಮಾಡಿದೆ. ವೈದ್ಯರ ಅಭಿಪ್ರಾಯದ ಪ್ರಕಾರ ಮನುಷ್ಯ ಬದುಕೋದು ಅಸಾಧ್ಯ. ಹಾಗಾಗಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡಿರೋದು ಅನುಮಾನ. ಉಪವಾಸ ಮಾಡದೇ ಗರ್ಭಗುಡಿಗೆ ಹೋಗಿದ್ದರೆ ಅಪವಿತ್ರವಾಗುತ್ತದೆ, ಗರ್ಭಗುಡಿಗೆ ಹೋಗಿ ಪೂಜೆ ಮಾಡಿದ್ದರೆ ಆ ಸ್ಥಳ ಅಪವಿತ್ರವಾಗುತ್ತದೆ. ಅಪವಿತ್ರವಾಗಿ ಆ ಸ್ಥಳದಲ್ಲಿ ಯಾವುದೇ ಶಕ್ತಿ ಇರಲ್ಲ. ರಾಮಮಂದಿರ ಹೆಸರೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ಮುಂದೆ ಬಿಜೆಪಿಗೆ ಮಾತಾಡಲು ಬೇರೆ ವಿಚಾರವಿಲ್ಲ ಎಂದು ಹೇಳಿದರು.