Home Karnataka State Politics Updates DK Shivakumar: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಡಿ.ಕೆ ಶಿವಕುಮಾರ್‌ ಟೆಂಪಲ್‌ ರನ್;‌ ಕೊಲ್ಲೂರು ಮೂಕಾಂಬಿಕೆಯಲ್ಲಿ...

DK Shivakumar: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಡಿ.ಕೆ ಶಿವಕುಮಾರ್‌ ಟೆಂಪಲ್‌ ರನ್;‌ ಕೊಲ್ಲೂರು ಮೂಕಾಂಬಿಕೆಯಲ್ಲಿ ಕುಟುಂಬ ಸಮೇತ ಚಂಡಿಕಾಯಾಗ

DK Shivakumar
Iamge Source: Tv9

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ರ ಬರುತ್ತಿದ್ದಂತೆ ರಾಜಕೀಯ ನಾಯಕರ ಚುನಾವಣೆ ಅಬ್ಬರ ಜೋರಾಗಿದ್ರೆ, ಇತ್ತ ಕೆಲ ನಾಯಕರು ಟೆಂಪಲ್‌ ರನ್‌ ಶುರು ಮಾಡಿದ್ದಾರೆ. ಇನ್ನೊಂದು ಕಾಂಗ್ರೆಸ್‌ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇತ್ತ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೆಂಪಲ್‌ ರನ್‌ ಮುಂದುವರಿಸಿದ್ದಾರೆ.

ಧರ್ಮಸ್ಥಳದಲ್ಲಿ ಪೂಜೆಸಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶೃಂಗೇರಿಯಲ್ಲಿ ಚಂಡಿಕಾ ಯಾಗ ಮಾಡಿಸಿದ್ದರು ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಚಂಡಿಕಾಯಾಗ ಮಾಡಿಸಿದ್ದಾರೆ. ಯಾಗದ ಮೂಲಕ ಹೊಸ ಸಂಕಲ್ಪ ಮಾಡಿದ್ದಾರೆ.

ಹೌದು ಕುಟುಂಬ ಸೇಮತ ಧರ್ಮಸ್ಥಳಕ್ಕೆ ಹೋಗಿದ್ದ ಡಿಕೆ ಶಿವಕುಮಾರ್‌ ಅವರು ಮಂಜುನಾಥನ ದರ್ಶನ ಪಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಆಗಮಿಸಿದ್ರು. ಶಾರದೆಯ ದರ್ಶನ ಪಡೆದು, ಕಿರಿಯ ಜಗದ್ಗುರು ವಿಧುಶೇಖರ ಭಾರತೀ ಆಶೀರ್ವಾದ ಪಡೆದಿದ್ದಾರೆ.

ಇನ್ನು ಶೃಂಗೇರಿ ಶಾರದಾಂಬೆ ದೇವಸ್ಥಾನದ ಜಗದ್ಗುರು ಅಭಿನವ ವಿಧ್ಯಾತೀರ್ಥ ಅವರ ಯಾಗ ಶಾಲೆಯಲ್ಲಿ ನಡೆದ ಚಂಡಿಕಾ ಯಾಗದಲ್ಲಿ ಸತತ ಮೂರುವರೆಗಂಟೆ ಭಾಗಿಯಾಗಿದ್ರು.ಈ ಯಾಗದಿಂದ ಕಾರ್ಯಕರ್ತರಿಗೆ ಸ್ಪೂರ್ತಿ, ದೇವರ ಅನುಗ್ರಹದಿಂದ ಕಾಂಗ್ರೆಸ್‌ಗೆ ಶಕ್ತಿ ಬಂದಿದೆ. ಈ ಬಾರಿ 141 ಸೀಟ್ ಗೆಲ್ಲುತ್ತೇವೆ ಎಂದು ಡಿಕೆಶಿ ವರುಣ ಕ್ಷೇತ್ರಕ್ಕೂ ಪ್ರಚಾರಕ್ಕೆ ಹೋಗ್ತೀನಿ ಅಂದ್ರು.

ಮತ್ತೊಂದೆಡೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಇಂದು ಚಂಡಿಕಾಯಾಗ ಮಾಡಿಸಿದ್ದಾರೆ. ನವಚಂಡಿಕಾಯಾಗ ಪೂರ್ಣಾಹುತಿಯಲ್ಲಿ ಡಿಕೆಶಿ ದಂಪತಿ ಭಾಗಿಯಾಗಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇಗುಲದ ಪ್ರಾಂಗಣದಲ್ಲಿ ನರಸಿಂಹ ಆಡಿಗ ನೇತೃತ್ವದಲ್ಲಿ ಇಷ್ಟಾರ್ಥ ಸಿದ್ದಿಗಾಗಿ ನಡೆಯುವ ಈ ನವಚಂಡಿಕಾಯಾಗ ನೆರವೇರಿದೆ.

ಇದನ್ನೂ ಓದಿ: D.K Shivakumar: ತಂದೆಗೆ ವಯಸ್ಸಾಯಿತು ಅಂತ ಬಿಸಾಕಲು ಆಗುತ್ತಾ, ಹಿಂದುತ್ವ ಯಾರಪ್ಪನ ಸ್ವತ್ತಲ್ಲ !