Home Karnataka State Politics Updates CLP meeting in Karnataka: ಶಾಸಕಾಂಗ ಸಭೆಯಲ್ಲಿ ವೀಕ್ಷಕರ ವಿರುದ್ಧವೇ ತಿರುಗಿಬಿದ್ದ ಶಾಸಕರು! ಪರಸ್ಪರ ಒಬ್ಬರ...

CLP meeting in Karnataka: ಶಾಸಕಾಂಗ ಸಭೆಯಲ್ಲಿ ವೀಕ್ಷಕರ ವಿರುದ್ಧವೇ ತಿರುಗಿಬಿದ್ದ ಶಾಸಕರು! ಪರಸ್ಪರ ಒಬ್ಬರ ಮೇಲೊಬ್ಬರು ಹರಿಹಾಯ್ದ ಸಿದ್ದು- ಡಿಕೆಶಿ!

CLP meeting in Karnataka
Image source- ETV Bharat

Hindu neighbor gifts plot of land

Hindu neighbour gifts land to Muslim journalist

CLP meeting in Karnataka: ಕಾಂಗ್ರೆಸ್‌(Congress) ಸಿಎಂ(CM) ಆಯ್ಕೆ ವಿಚಾರವಾಗಿ ನಿನ್ನೆ ದಿನ ಬೆಂಗಳೂರಿನ(Bangalore) ಶಾಂಗ್ರಿಲಾ(Shangrila) ಹೋಟೆಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆದಿದ್ದು ಮೊದಲ ಸಭೆಯಲ್ಲೇ ಅನೇಕ ಶಾಸಕರು ಗೈರಾಗಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಆದರೆ ಈ ಬೆನ್ನಲ್ಲೇ ಮತ್ತೊಂದು ವಿಚಾರ ಹೊರಬಿದ್ದಿದ್ದು, ಸಭೆಯಲ್ಲಿ ಪಾಲ್ಗೊಂಡ ಕೆಲ ಶಾಸಕರು ಕೂಡ ಎಐಸಿಸಿ ವೀಕ್ಷಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಜೊತೆಗೆ, ಸಿದ್ದರಾಮಯ್ಯ(Siddaramaiah)- ಡಿ.ಕೆ. ಶಿವಕುಮಾರ್‌(DK Shivkumar) ಅವರು ಸಿಎಂ ಪಟ್ಟಕ್ಕಾಗಿ ಪರಸ್ಪರ ವಾಗ್ವಾದ ನಡೆಸಿದ್ದಾರೆ.

ನಿನ್ನೆ ನಡೆದ ಈ ಮಹತ್ವದ ಸಭೆಯಲ್ಲಿ ಸಿಎಲ್ ಪಿ(CLP meeting in Karnataka) ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು, ಹಾಗೂ ನೂತನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಈ ಹಮತ್ವದ ಸಭೆಗೆ ಕಾಂಗ್ರೆಸ್ ನ ಅನೇಕ ಶಾಸಕರು ಗೈರಾಗಿದ್ದರು. ಅಲ್ಲದೆ ಸಿಎಂ ಆಯ್ಕೆ ವಿಚಾರವಾಗಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಎಐಸಿಸಿ(AICC) ವೀಕ್ಷಕರು ಶಾಸಕರಿಂದ ಮೌಖಿಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ವೀಕ್ಷಕರ ವಿರುದ್ಧವೇ ತಿರುಗಿಬಿದ್ದ ಶಾಸಕರು ಮೌಖಿಕ ಅಭಿಪ್ರಾಯ ಸಂಗ್ರಹ ಬೇಡವೆಂದು ಹೇಳಿದ್ದಾರೆ.

ಹೌದು, ಶಾಸಕರು ಒಮ್ಮತದ ನಿರ್ಣಯಕ್ಕೆ ಬರದ ಹಿನ್ನೆಲೆಯಲ್ಲಿ ಮೊದಲನೆಯದಾಗಿ ಎಲ್ಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಹಾಗೂ ಹೈಕಮಾಂಡ್‌ ಆಯ್ಕೆ ಮಾಡುವ ಮುಖ್ಯಮಂತ್ರಿಗೆ ನಮ್ಮ ಬೆಂಬಲವಿದೆ ಎಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಆಗಮಿಸಿದ ಎಐಸಿಸಿ ಮುಖಂಡ ಸುಶೀಲ್‌ ಕುಮಾರ್‌ ಸಿಂಧೆ(Susheel Kumar Sindhe) ಹಾಗೂ ವರಿಷ್ಠರೆಲ್ಲರೂ ಸೇರಿ ಎಲ್ಲ ಶಾಸಕರ ಮೌಖಿಕ ಅಭಿಪ್ರಾಯ ಪಡೆಯಲು ಮುಂದಾದರು. ಆದರೆ ಎಲ್ಲಾ ಶಾಸಕರು ಮೌಖಿಕ ಅಭಿಪ್ರಾಯ ಕೊಡಲೊಪ್ಪದೇ ವೀಕ್ಷಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಎಐಸಿಸಿ ವೀಕ್ಷಕರಿಂದ ಕೆಲವು ಹೊಸ ಶಾಸಕರಿಂದ ಮೌಖಿಕ ಅಭಿಪ್ರಾಯ ಸಂಗ್ರಹ ಮಾಡಿದ ನಂತರ, ಹಿರಿಯ ನಾಯಕರು ಮೌಖಿಕವಾಗಿ ಅಭಿಪ್ರಾಯ ಸಂಗ್ರಹ ಬೇಡವೆಂದು ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಕೃಷ್ಣಬೈರೇಗೌಡ(Krishna Bhiregowda) ಶಾಸಕರ ನಡುವೆ ಭಿನ್ನಾಭಿಪಗ್ರಾಯ ಮೂಡುವುದನ್ನು ತಡೆಯಬೇಕು ಎಂದು ಹೇಳಿದರು. ಆಗ, ಹೆಚ್.ಕೆ. ಪಾಟೀಲ್‌ ಅವರು ಯಾವುದೇ ಅಭಿಪ್ರಾಯ ಸಂಗ್ರಹ ಮಾಡದೇ ಹೈಕಮಾಂಡ್‌ ಆಯ್ಕೆಗೆ ಕಳಿಸಿ. ನಾವು ಅದಕ್ಕೆ ಬದ್ಧವೆಂದು ಹೇಳುತ್ತಾರೆ.

ನಂತರ ಸಿದ್ದರಾಮಯ್ಯ ಎದ್ದುನಿಂತು ಪ್ರಜಾಪ್ರಭುತ್ವದ(Democracy) ಮಾದರಿಯಲ್ಲಿ ಶಾಸಕರಿಗೆ ಗೌಪ್ಯವಾಗಿ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಾರೆ. ಆದರೆ ಆ ಕೂಡಲೇ ಡಿಕೆಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಇದ್ದಕ್ಕಿದ್ದಂತೆ ಸಿದ್ದು ಮತ್ತು ಡಿಕೆಶಿ ಪರಸ್ಪರ ಕೆಲ ಹೊತ್ತು ವಾಗ್ವಾದ ನಡೆಸಿದ್ದಾರೆ. ಆದರೆ ವಾಗ್ವಾದದ ನಂತರವೂ ಪಟ್ಟು ಬಿಡದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಅವಕಾಶ ಇರುವಂತೆ ಎಲ್ಲ ಶಾಸಕರು ಗೌಪ್ಯವಾಗಿ ಸಿಎಂ ಆಯ್ಕೆಯ ಬಗ್ಗೆ ಮತದಾನವನ್ನು ಮಾಡಲಿ. ಎಲ್ಲ ಮತಗಳನ್ನು ನಮ್ಮ ಮುಂದೆಯೇ ಎಣಿಕೆ ಮಾಡಿ, ಯಾರಿಗೆ ಎಷ್ಟು ಮತಗಳು ಬಂದಿವೆ ಎನ್ನುವುದನ್ನು ತಿಳಿಸಬೇಕು. ನಂತರ ಈ ವರದಿಯನ್ನು ಹೈಕಮಾಂಡ್‌ಗೆ ಕಳುಹಿಸಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಇಬ್ಬರ ಕಿತ್ತಾಟಕ್ಕೆ ಬೇಸತ್ತ ಕೆಲ ಹಿರಿಯ ಶಾಸಕರು ಸಭೆಯಲ್ಲಿ ಅಭಿಪ್ರಾಯ ಚೀಟಿ ಹಾಕಿ ಹೊರನಡೆದರು.

ಇದನ್ನೂ ಓದಿ:Next Chief minister in Karnataka : ಮೊದಲ ಶಾಸಕಾಂಗ ಸಭೆಗೆ ಅನೇಕ ಶಾಸಕರ ಗೈರು! ಸಿದ್ದುಗೆ 75, ಡಿಕೆಶಿಗೆ 40 ಶಾಸಕರ ಬೆಂಬಲ! ತಲೆಕೆಳಗಾಯ್ತು ಹೈಕಮಾಂಡ್ ಲೆಕ್ಕಾಚಾರ!