Home Karnataka State Politics Updates Gruha Lakshmi Scheme: ಮಹಿಳೆಯರೇ ಇತ್ತ ಗಮನಿಸಿ, ಗುಡ್‌ನ್ಯೂಸ್‌! ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ,...

Gruha Lakshmi Scheme: ಮಹಿಳೆಯರೇ ಇತ್ತ ಗಮನಿಸಿ, ಗುಡ್‌ನ್ಯೂಸ್‌! ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ, ಏನೆಲ್ಲಾ ಡೀಟೇಲ್ಸ್ ಬೇಕು ಪೂರ್ತಿ ಓದ್ಕೊಳ್ಳಿ!!!

Gruha Lakshmi Scheme

Hindu neighbor gifts plot of land

Hindu neighbour gifts land to Muslim journalist

Gruha Lakshmi Scheme: ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರ ʻಗೃಹಲಕ್ಷ್ಮೀʼ ಯೋಜನೆ ಭೌತಿಕ ಅರ್ಜಿ ಸಲ್ಲಿಕೆಯ ಮಾದರಿಯನ್ನ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ.

ರಾಜ್ಯ ರಾಜಕೀಯದಲ್ಲಿ ಸದ್ಯ ಕಾಂಗ್ರೆಸ್ ಗ್ಯಾರಂಟಿಗಳದ್ದೇ ಚರ್ಚೆಗೆ ಗ್ರಾಸವಾಗಿದ್ದು, ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ(Gruha Lakshmi Scheme) ಪಡೆಯೋದಕ್ಕೆ ಮಹಿಳಾ ಮಣಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬೆನ್ನಲ್ಲೆ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದ್ದು, ಯಾವ ರೀತಿ ಅರ್ಜಿ ನಮೂನೆ ಇದೆ ಅನ್ನೋದನ್ನು ಮೇಲ್ನೋಟಕ್ಕೆ ನೋಡಬಹುದಾಗಿದೆ.

ಅದರಲ್ಲೂ ಮುಖ್ಯವಾಗಿ ಪ್ರತಿ ಕುಟುಂಬದ ಮಹಿಳೆ ಪ್ರತಿ ತಿಂಗಳು 2000 ಪಡೆಯಬಹುದಾಗಿದೆ ಎಂದು ಸೂಚನೆ ನೀಡಲಾಗಿದೆ. ಗೃಹಲಕ್ಷ್ಮೀʼ ಯೋಜನೆ ಅರ್ಜಿ ನಮೂನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರ ಇದೆ ಎಂದು ತಿಳಿಯಬಹುದಾಗಿದೆ.

ಗೃಹಲಕ್ಷ್ಮೀ ಯೋಜನೆ ಪಡೆಯೋದಕ್ಕೆ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗಿದೆ ಮುಖ್ಯವಾಗಿ ಫಲಾನುಭವಿಗಳು ಪತಿಯ ಆಧಾರ್‌ ಕಾರ್ಡ್‌, ವೋಟರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಹೊಂದಿರಬೇಕು. ಈ ಅರ್ಜಿ ನಮೂನೆಯನ್ನು ಸಲ್ಲಿಸಿದ್ರೆ ಮಾತ್ರ ಪ್ರತಿ ಕುಟುಂಬ ಮನೆಯೊಡತಿಗೆ 2000 ರೂಪಾಯಿ ಬ್ಯಾಂಕ್‌ ಖಾತೆಗ ಜಮೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Guaranty No.1: ಮಹಿಳೆಯರೇ ಎಚ್ಚರ….!! ಶಕ್ತಿ ಗ್ಯಾರಂಟಿ ಸ್ಕೀಮ್ ನೀಡುವ ಸ್ಮಾರ್ಟ್ ಕಾರ್ಡ್ ನಿಂದ ನಿಮ್ಮಗೌಪ್ಯತೆಗೆ ಧಕ್ಕೆ, ಹೇಗೆ ಗೊತ್ತಾ ?