Home Karnataka State Politics Updates `ಬಿಜೆಪಿ’ಯವರು ‘ಅನ್ನಭಾಗ್ಯ’ದವರಲ್ಲ ‘ಕನ್ನ ಭಾಗ್ಯ’ದವರು – ಕಾಂಗ್ರೆಸ್

`ಬಿಜೆಪಿ’ಯವರು ‘ಅನ್ನಭಾಗ್ಯ’ದವರಲ್ಲ ‘ಕನ್ನ ಭಾಗ್ಯ’ದವರು – ಕಾಂಗ್ರೆಸ್

Hindu neighbor gifts plot of land

Hindu neighbour gifts land to Muslim journalist

ಬಿಜೆಪಿಯ ಜನಸ್ಪಂದನ ( BJP Janaspandana Program ) ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ( Congress ) ವ್ಯಂಗ್ಯವಾಡಿದೆ. ಕಾಂಗ್ರೆಸ್ ಪ್ರಕಾರ, ಜನರಿಗೆ ಸರ್ಕಾರದ ಸ್ಪಂದನೆ ಇಲ್ಲದಿರುವಾಗ, ಸಮಾವೇಶಕ್ಕೂ ಜನರ ಸ್ಪಂದನೆ ಇಲ್ಲದಾಗಿದೆ. ಜನರಿಲ್ಲದೆ ಖಾಲಿ ಹೊಡೆಯುತ್ತಿರುವ ಊಟದ ಕೌಂಟರ್‌ಗಳು ಬಿಜೆಪಿಯ ವೈಫಲ್ಯದ ಕತೆ ಹೇಳುತ್ತಿವೆ! ಜನತೆಗೂ ತಿಳಿದಿದೆ ಬಿಜೆಪಿಯವರು ಅನ್ನಭಾಗ್ಯದವರಲ್ಲ, ಕನ್ನ ಭಾಗ್ಯದವರೆಂದು ಎಂದು ಹೇಳಿದೆ. ಎಂಬುದಾಗಿ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್

ಈ ಕುರಿತಂತೆ ಸರಣಿ ಟ್ವೀಟ್ ( Twitter ) ಮಾಡಿದ್ದು, PSI ಅಕ್ರಮದಲ್ಲಿ ಬಿಜೆಪಿ ಶಾಸಕರ, ಸಚಿವರ ನೇರ ಕೈವಾಡವಿದ್ದರೂ ವಿಚಾರಣೆಯಿಂದ ವಿನಾಯಿತಿ ಅವರಿಗೆ! PSI ಅಭ್ಯರ್ಥಿಯಿಂದ ಬಿಜೆಪಿ ಶಾಸಕ ಹಣ ಪಡೆದಿರುವುದು ಬೆಳಕಿಗೆ ಬಂದರೂ, ಶಾಸಕರೇ ಒಪ್ಪಿಕೊಂಡರೂ ತನಿಖೆ ನಡೆಸದೆ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಿರುವುದೇ ನಿಮ್ಮ ಸಾಧನೆಯೇ ಬಸವರಾಜ ಬೊಮ್ಮಾಯಿ ಅವರೇ? #BJPBrashtotsava ದಲ್ಲಿ ಅಕ್ರಮವೆಲ್ಲ ಸಕ್ರಮವೇ? ಎಂದು ಕಿಡಿಕಾರಿದೆ.