Home Karnataka State Politics Updates ಮುಖ್ಯಮಂತ್ರಿ ಬದಲಾವಣೆ ಮಾತಿಗೆ ಪುಷ್ಟಿ ನೀಡಿದ ಬೊಮ್ಮಾಯಿ ಹೇಳಿಕೆ

ಮುಖ್ಯಮಂತ್ರಿ ಬದಲಾವಣೆ ಮಾತಿಗೆ ಪುಷ್ಟಿ ನೀಡಿದ ಬೊಮ್ಮಾಯಿ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲಿದ್ದಾರೆ ಎಂಬ ವದಂತಿಯ ನಡುವೆ ಅವರ ಹೇಳಿಕೆ ಬದಲಾವಣೆಗೆ ಪುಷ್ಟಿ ನೀಡಿದೆ.

ತನ್ನ ವಿಧಾನಸಭೆ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿದ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ನಮ್ಮ ಜೀವನದಲ್ಲಿ ಯಾವುದೂ ಕೂಡಾ ಶಾಶ್ವತವಲ್ಲ. ಯಾವುದೇ ಸ್ಥಾನ, ಹುದ್ದೆ ಶಾಶ್ವತವಲ್ಲ. ಸಿಎಂ ಸ್ಥಾನದಲ್ಲಿ ಎಲ್ಲಿಯವರೆಗೆ ಇರಲಿದ್ದೇನೆ ಎಂದು ತಿಳಿದಿಲ್ಲ,” ಎಂದು ಹೇಳುವ ಮೂಲಕ ಈ ವದಂತಿಗೆ ತುಪ್ಪ ಸುರಿದಿದ್ದಾರೆ.

“ಈ ವಿಶ್ವದಲ್ಲಿ ಯಾವುದೂ ಕೂಡಾ ಶಾಶ್ವತವಲ್ಲ. ಈ ಜೀವನವೇ ಶಾಶ್ವತವಲ್ಲ. ನಾವು ಇಂತಹ ಸಂದರ್ಭದಲ್ಲಿ ಎಲ್ಲಿಯವರೆಗೆ ಇಲ್ಲಿ ಇರಲಿದ್ದೇವೆ ಎಂಬುವುದು ನಮಗೆ ತಿಳಿದಿಲ್ಲ. ಈ ಹುದ್ದೆ, ಈ ಮುಖ್ಯಮಂತ್ರಿ ಸ್ಥಾನದಲ್ಲಿ ನಾವು ಎಷ್ಟು ಸಮಯ ಇರಲಿದ್ದೇವೆ ತಿಳಿದಿಲ್ಲ, ಅಧಿಕಾರವೂ ಕೂಡಾ ಎಂದಿಗೂ ಶಾಶ್ವತವಲ್ಲ. ನಾನು ಈ ಬಗ್ಗೆ ಸರಿಯಾಗಿ ತಿಳಿದಿದ್ದೇನೆ,” ಎಂದು ತಮ್ಮ ವಿಧಾನಸಭೆ ಕ್ಷೇತ್ರದಲ್ಲಿ ಭಾವುಕರಾಗಿ ನುಡಿದಿದ್ದಾರೆ.