Home Karnataka State Politics Updates Chaitra kundapura case: ವಿಚಾರಣೆ ವೇಳೆ ಎಲ್ಲಾ ಸತ್ಯ ಬಾಯಿ ಬಿಟ್ಟ ಚೈತ್ರಾ ಕುಂದಾಪುರ- ಬಿಜೆಪಿ...

Chaitra kundapura case: ವಿಚಾರಣೆ ವೇಳೆ ಎಲ್ಲಾ ಸತ್ಯ ಬಾಯಿ ಬಿಟ್ಟ ಚೈತ್ರಾ ಕುಂದಾಪುರ- ಬಿಜೆಪಿ ಟಿಕೆಟ್ ವಂಚನೆ ಪ್ರಕರಣಕ್ಕೆ ರೋಚಕ ತಿರುವು !!

Hindu neighbor gifts plot of land

Hindu neighbour gifts land to Muslim journalist

Chaitra kundapura case: ಉದ್ಯಮಿಯೊಬ್ಬರಿಗೆ ಬಿಜೆಪಿ MLA ಟಿಕೆಟ್ ಕೊಡಿಸುವುದಾಗಿ ಕೋಟಿಗಟ್ಟೆಲೆ ಯಾಮಾರಿಸಿರುವ ಚೈತ್ರಾ ಕುಂದಾಪುರ(Chaitra kundapura) ಹಾಗೂ ಆಕೆಯ ಗ್ಯಾಂಗ್ ಸಿಸಿಬಿ ಪೋಲೀಸರ ಬಂಧನದಲ್ಲಿದ್ದಾರೆ. ಇದೀಗ ವಿಚಾರಣೆ ವೇಳೆ ಚೈತ್ರಾ ಎಲ್ಲಾ ಸತ್ಯವನ್ನು ಹೊರಹಿಕಿದ್ದು ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

ಹೌದು, ರಾಜ್ಯದಲ್ಲಿ ಚೈತ್ರಾ ಕುಂದಾಪುರ ಪ್ರಕರಣ ಇದೀಗ ಭಾರೀ ಸದ್ಧುಮಾಡುತ್ತಿದ್ದು, ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ವಂಚನೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಬೆಂಗಳೂರಿನ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗ್ ಎಲ್ಲಾ ಸತ್ಯ ಬಾಯ್ಬಿಟ್ಟಿದೆ. ಉದ್ಯಮಿ ಗೋವಿಂದ್​ ಬಾಬು ಅವರಿಂದ ಹಣ ಪಡೆದುಕೊಂಡು ಬಂದಿದ್ಯಾರು? ಬಳಿಕ ಆ ಹಣವನ್ನು ಯಾರಿಗೆ ಮುಟ್ಟಿಸಲಾಯ್ತು? ಈ ಎಲ್ಲಾ ಅಂಶಗಳನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದರಿಂದ ಈ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.

ಚೈತ್ರಾ ಮತ್ತು ಗ್ಯಾಂಗ್ ಹೇಳಿದ್ದೇನು?
ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಹಣ ಪಡೆದಿದ್ದಾಗಿ ಚೈತ್ರಾ ಕುಂದಾಪುರ ಬಾಯ್ಬಿಟ್ಟಿದ್ದಾಳೆ. ಆದರೆ 5 ಕೋಟಿ ರೂ. ಅಲ್ಲ 3 ಕೋಟಿ ರೂ. ಪಡೆದಿರುವ ಬಗ್ಗೆ ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್​ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಜೊತೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಹಣ ಪಡೆದಿರುವುದಾಗಿ ವಂಚನೆ ಪ್ರಕರಣದ ಏಳನೇ ಆರೋಪಿ ಶ್ರೀಕಾಂತ್ ಒಪ್ಪಿಕೊಂಡಿದ್ದಾನೆ. ಗೋವಿಂದ್ ಬಾಬು ಅವರಿಂದ ನಾನೇ ಹಣ ಪಡೆದುಕೊಂಡು ಬಂದು ಚೈತ್ರಾ ಕುಂದಾಪುರ, ಗಗನ್​​ಗೆ ನೀಡಿದ್ದೇನೆ ಸತ್ಯ ಒಪ್ಪಿಕೊಂಡಿದ್ದಾನೆ. ಆದರೀಗ ಆರೋಪಿಗಳು ಈಗ ಆ ಹಣ ಎಲ್ಲಿದೆಯೋ ಗೊತ್ತಿಲ್ಲ ಎನ್ನುತ್ತಿದ್ದಾರೆ.

ಚೈತ್ರಾ ಹೇಳೋದೇನು?
ನಿನ್ನೆ ತಾನೆ ವಿಚಾರಣೆಗಾಗಿ ಜೀಪಿನಿಂದ ಬಂದಿಳಿದ ಚೈತ್ರಾ ಮಾಧ್ಯಮಗಳ ಮುಂದೆ ಸ್ವಾಮೀಜಿ ಸಿಕ್ಕಿಬೀಳಲಿ ಎಲ್ಲಾ ಗೊತ್ತಾಗತ್ತೆ. ಸ್ವಾಮೀಜಿ ಅರೆಸ್ಟ್ ಆದ್ರೆ ದೊಡ್ಡವರ ಹೆಸರು ಬಯಲಾಗುತ್ತೆ. ಇದು ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಇರೋದಕ್ಕೆ ಷಡ್ಯಂತ್ರ ನಡೆಯುತ್ತಿದೆ ಎಂದು ಹೊಸ ಟ್ವಿಸ್ಟ್‌ ಕೊಟ್ಟಿದ್ದರು. ಅಷ್ಟಕ್ಕೂ 2017 ರಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸ್ತಿರೋ ಗೋವಿಂದ್‌ಬಾಬುಗೆ ಸರ್ಕಾರದಿಂದ 35 ಕೋಟಿ ಹಣ ಬರಬೇಕಿದೆ. ಆ ಹಣಕ್ಕಾಗಿಯೇ ಈ ರೀತಿ ಆರೋಪ ಮಾಡಿದ್ದಾರೆ ಅನ್ನೋದು ಚೈತ್ರಾ ಆರೋಪ. ಆದ್ರೆ ಇದನ್ನ ತಳ್ಳಿಹಾಕಿರೋ ಗೋವಿಂದ್‌ ಬಾಬು, ಇದ್ರಲ್ಲಿ ಯಾರ ಪಾತ್ರವೂ ಇಲ್ಲ. ಯಾವ ಷಡ್ಯಂತ್ರ ಇಲ್ಲ. ಈಕೆಯೇ ಹಣ ನುಂಗಿದ್ದಾಳೆ. ಇಂದಿರಾ ಕ್ಯಾಂಟೀನ್‌ಗೂ ಇದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

Chaitra kundapura case: ವಿಚಾರಣೆ ವೇಳೆ ಎಲ್ಲಾ ಸತ್ಯ ಬಾಯಿ ಬಿಟ್ಟ ಚೈತ್ರಾ ಕುಂದಾಪುರ- ಬಿಜೆಪಿ ಟಿಕೆಟ್ ವಂಚನೆ ಪ್ರಕರಣಕ್ಕೆ ರೋಚಕ ತಿರುವು !!