Home Karnataka State Politics Updates BJP Manifesto: ಮಹಿಳೆಯರಿಗೆ ಇಷ್ಟೊಂದು ಸೌಲಭ್ಯಗಳಾ ? BJP ಪ್ರಣಾಳಿಕೆಯಲ್ಲಿ ಮಹಿಳೆಯರ ಮತಗಳ ಮೇಲೆ ನೆಟ್ಟಿದೆ...

BJP Manifesto: ಮಹಿಳೆಯರಿಗೆ ಇಷ್ಟೊಂದು ಸೌಲಭ್ಯಗಳಾ ? BJP ಪ್ರಣಾಳಿಕೆಯಲ್ಲಿ ಮಹಿಳೆಯರ ಮತಗಳ ಮೇಲೆ ನೆಟ್ಟಿದೆ ಬಿಜೆಪಿ ಕಣ್ಣು !

BJP Manifesto
Image source: daily mail

Hindu neighbor gifts plot of land

Hindu neighbour gifts land to Muslim journalist

BJP Manifesto: ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷ ‘ಬಿಜೆಪಿ ಪ್ರಜಾ ಪ್ರಣಾಳಿಕೆ 2023’ ಹೆಸರಿನಲ್ಲಿ ಹಲವಾರು ಭರವಸೆಗಳನ್ನು ಜನರಿಗೆ ನೀಡಿದೆ.

ಹೌದು, ಪ್ರಸ್ತುತ ಭಾರತೀಯ ಜನತಾ ಪಕ್ಷ (ಬಿಜೆಪಿ) ತಮ್ಮ ಪ್ರಣಾಳಿಕೆಯನ್ನು (BJP Manifesto) ಬಿಡುಗಡೆ ಮಾಡಿದೆ. ಈಗಾಗಲೇ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿವಿ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಕೆ ಸುಧಾಕರ್ ಸಮ್ಮುಖದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮುಂತಾದವರು ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.

ಸದ್ಯ ಈ ಬಾರಿಯ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಅವರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಮಹಿಳೆಯರಿಗಾಗಿ ಈ ಕೆಳಗಿನ ಯೋಜನೆ ಪ್ರಸ್ತಾಪ ಮಾಡಲಾಗಿದೆ. 30 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ವಿಧವೆಯರಿಗೆ ಮಾಸಿಕ ಪಿಂಚಣಿ 800 ರೂಪಾಯಿಂದ 2000ಕ್ಕೆ ಹೆಚ್ಚಿಸುವ ಭರವಸೆ ನೀಡಲಾಗಿದೆ. ಒನಕೆ ಒಬವ್ವ ಯೋಜನೆಡಿ 10 ಸಾವಿರ ರೂಪಾಯಿ ನೀಡಲಾಗುವುದು. ಅಲ್ಲದೆ 5 ವರ್ಷದ ಭವಿಷ್ಯ ನಿಧಿ ನೀಡಲಾಗುವುದು. ಗರ್ಭಿಣಿಯರಿಗೆ ಸುರಕ್ಷಾ ಜನನಿ ಭರವಸೆ ನೀಡಲಾಗಿದೆ. ಇನ್ನು ಕಿಟ್ ವಿತರಣೆ ಹಾಗೂ ಮಹಿಳಾ ಸುರಕ್ಷತೆಗೆ ಎಲ್ಲಾ ಬೀದಿಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದಾಗಿ ತಿಳಿಸಲಾಗಿದೆ.

ಅದಲ್ಲದೇ ಮುಂದಿನ ಪೀಳಿಗೆಗಾಗಿ ಬೆಂಗಳೂರಿನ ಅಭಿವೃದ್ಧಿ, ಕೈಗಾರಿಕಾ ವಲಯದ ಅಭಿವೃದ್ಧಿ, ಬೆಂಗಳೂರಿನ ಹೊರಗೆ ಉದ್ಯೋಗಗಳ ಸೃಷ್ಟಿಗೆ ಅಗತ್ಯ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಬಿಜೆಪಿ ಹೇಳಿದೆ. ಜೊತೆಗೆ ಕೃಷಿ, ಕೈಗಾರಿಕೆ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳ ಜೊತೆಗೆ ಕರಾವಳಿ ಪ್ರದೇಶ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ ಹೀಗೆ ವಲಯವಾರು ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Courtney Tilia: ನಾನು ಪೋರ್ನ್ ಸ್ಟಾರ್ ಆಗಲು ಆ ದೇವರೆ ಕಾರಣ! ದೇವರು ಹೇಳಿದ್ರಿಂದ ನಾನು ನೀಲಿ ತಾರೆಯಾದೆ ಎಂದ ಸ್ಕೂಲ್ ಟೀಚರ್!