Home Karnataka State Politics Updates BJP candidate from Varuna constituency: ವರುಣಾದಲ್ಲಿ ಸಿದ್ದರಾಮಯ್ಯಗೆ ಎದುರಾಗಲಿದ್ದಾರೆ ಬಿಜೆಪಿಯ ಈ ಅಭ್ಯರ್ಥಿ, ವರ್ಕ್...

BJP candidate from Varuna constituency: ವರುಣಾದಲ್ಲಿ ಸಿದ್ದರಾಮಯ್ಯಗೆ ಎದುರಾಗಲಿದ್ದಾರೆ ಬಿಜೆಪಿಯ ಈ ಅಭ್ಯರ್ಥಿ, ವರ್ಕ್ ಆಗುತ್ತಾ ಬಿಎಲ್​ ಸಂತೋಷ್ ಮಾಸ್ಟರ್ ಪ್ಲಾನ್?

BJP candidate-Varuna constituency

Hindu neighbor gifts plot of land

Hindu neighbour gifts land to Muslim journalist

BJP candidate-Varuna constituency : ಮುಂದಿನ ತಿಂಗಳು ಎದುರಾಗಲಿರುವ ವಿಧಾನಸಭಾ ಚುನಾವಣೆ(Assembly Election) ನಿಮಿತ್ತ ಕಾಂಗ್ರೆಸ್(Congress) ಪಾಳಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ಕಗ್ಗಂಟಾಗಿ, ಕೊನೆಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಎಂಬ ಉತ್ತರೊಂದಿಗೆ ಎಲ್ಲವೂ ಇತ್ಯರ್ಥವಾಗಿದೆ. ಆದರೀಗ ಈ ಬೆನ್ನಲ್ಲೇ ಬಿಜೆಪಿ(BJP) ಪಾಳಯದಲ್ಲಿ ಸಿದ್ದರಾಮಯ್ಯನವರಿಗೆ ಇದು ಕೊನೆಯ ಚುನಾವಣೆ ಆದ ಕಾರಣ ಹೇಗಾದರೂ ಮಾಡಿ ಅವರನ್ನು ಸೋಲಿಸಬೇಕೆಂಬ ಸವಾಲೊಂದು ಎದುರಾಗಿದೆ. ಇದಕ್ಕಾಗಿ ಪ್ರಭಲ ಪ್ರತಿಸ್ಪರ್ಧಿಯ ಹುಡುಕಾಟ ನಡೆದಿದ್ದು, BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santosh) ಹೊಸ ಹೆಸರನ್ನು ಕೇಂದ್ರ ಸಚಿವ ಅಮಿತ್ ಶಾ (Union Minister Amit Shah) ಅವರ ಮುಂದೆ ಇರಿಸಿದ್ದು, ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು, ಸಿದ್ದರಾಮಯ್ಯ ಇದು ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದು, ಈ ಬಾರಿ ವರುಣಾ ವಿಧಾನಸಭಾ ಕ್ಷೇತ್ರದಿಂದ (Varuna Constituency) ಸ್ಪರ್ಧೆ ಮಾಡುತ್ತಿದ್ದಾರೆ. ಕೊನೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ (BJP) ಪಣ ತೊಟ್ಟಿದೆ. ಅಂದಹಾಗೆ ಯಡಿಯೂರಪ್ಪರ ಪುತ್ರ ವಿಜಯೇಂದ್ರ (BY Vijayendra) ಅವರೇ ವರುಣಾದಲ್ಲಿ (BJP candidate-Varuna constituency) ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ವಿಜಯೇಂದ್ರ ಅವರು ಶಿಕಾರಿಪುರದಿಂದಲೇ ಸ್ಪರ್ಧೆ ಮಾಡೋದು ಅಂತ ಖಚಿತಪಡಿಸಿದ್ದಾರೆ. ಹೀಗಾಗಿ ವರುಣಾಗೆ ಬಿಜೆಪಿ ಕಡೆಯಿಂದ ಸಿದ್ದು ಸೋಲಿಸುವಂತಹ ಪ್ರಭ ಅಭ್ಯರ್ಥಿಯ ಅಗತ್ಯವಿದೆ.

ಅಂದಹಾಗೆ ಈ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santosh) ಹೊಸ ಹೆಸರನ್ನು ಕೇಂದ್ರ ಸಚಿವ ಅಮಿತ್ ಶಾ (Union Minister Amit Shah) ಅವರ ಮುಂದೆ ಇರಿಸಿದ್ದಾರಂತೆ. ಬಿ.ಎಲ್.ಸಂತೊಷ್ ಪ್ರಸ್ತಾಪಕ್ಕೆ ಅಮಿತ್ ಶಾ ಗ್ರೀನ್ ಸಿಗ್ನಲ್ ಸಹ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ(V Somanna) ಅವರನ್ನು ಕಣಕ್ಕಿಳಿಸಲು ಬಿ.ಎಲ್.ಸಂತೋಷ್ ಪ್ಲಾನ್ ಮಾಡಿದ್ದಾರಂತೆ!

ಬಲ್ಲಮೂಲಗಳಿಂದ ಬಂದ ಮಾಹಿತಿ ಪ್ರಕಾರ ವಿಜಯೇಂದ್ರ‌ ಸ್ಪರ್ಧೆ ವಿಷಯದ ಚರ್ಚೆಗೂ ಮುನ್ನವೇ ಈ ಬಗ್ಗೆ ಚರ್ಚೆ ನಡೆದಿತ್ತು ಅಂತೆ. ವರುಣಾದಲ್ಲಿ ವಿಜಯೇಂದ್ರ‌ ಸ್ಪರ್ಧೆ ಬಗ್ಗೆ ವರಿಷ್ಠರಿಗೂ ಒಪ್ಪಿಗೆ ಇರಲಿಲ್ಲವಂತೆ. ಆದರೆ ರಾಜ್ಯ ಮಟ್ಟದಲ್ಲಿ ವಿಜಯೇಂದ್ರ‌ ಸ್ಪರ್ಧೆ ಬಗ್ಗೆ ಚರ್ಚೆ ಶುರುವಾಗಿತ್ತು. ಒಂದು ವೇಳೆ ಸೋಮಣ್ಣ ಸ್ಪರ್ಧೆ ಮಾಡಿದ್ರೆ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಬಹುದು ಎಂಬುವುದು ಬಿಜೆಪಿ ಲೆಕ್ಕಾಚಾರ.

ಈ ಹಿನ್ನೆಲೆಯಲ್ಲಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿ.ಎಲ್.ಸಂತೋಷ್ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೂ ಬಿ.ಎಲ್.ಸಂತೋಷ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಚಾಣಕ್ಯ ಅಮಿತ್ ಶಾ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ನಿನ್ನ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಹಾಲಿ ಶಾಸಕರಾಗಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಇದ್ದು, ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ತಂದೆಗೆ ಬಿಟ್ಟುಕೊಡಲು ಮುಂದಾಗಿದ್ದಾರೆ.

ಇದನ್ನೂ ಓದಿ: Dr. Revanna : ಹಾಸನ ಟಿಕೆಟ್ ಫೈಟ್ ನಡುವೆ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ ರೇವಣ್ಣ!