Home Karnataka State Politics Updates Bhagirathi murulya : ಜನರ ಸಮಸ್ಯೆಗಳಿಗೆ ಸ್ಪಂದನೆಯ ಜತೆಗೆ ಇಲಾಖೆಗಳಲ್ಲಿ ಲಂಚ ನೀಡದೆ ಕೆಲಸವಾಗುವಂತೆ ನೋಡಿಕೊಳ್ಳುವೆ-ಭಾಗೀರಥಿ...

Bhagirathi murulya : ಜನರ ಸಮಸ್ಯೆಗಳಿಗೆ ಸ್ಪಂದನೆಯ ಜತೆಗೆ ಇಲಾಖೆಗಳಲ್ಲಿ ಲಂಚ ನೀಡದೆ ಕೆಲಸವಾಗುವಂತೆ ನೋಡಿಕೊಳ್ಳುವೆ-ಭಾಗೀರಥಿ ಮುರುಳ್ಯ

Hindu neighbor gifts plot of land

Hindu neighbour gifts land to Muslim journalist

Bhagirathi murulya : ನಾನು ಶಾಸಕಿಯಾಗಿ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಇಲಾಖೆಗಳಲ್ಲಿ ಲಂಚ ನೀಡದೇ ಕೆಲಸ ಆಗುವಂತೆ ನೋಡಿಕೊಳ್ಳುವೆ ಎಂದು ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ (Bhagirathi murulya) ಹೇಳಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನನಗೆ ಪಕ್ಷ ಮತ್ತು ಸಂಘಟನೆ ಈ ಅವಕಾಶ ನೀಡಿದೆ. ಎಲ್ಲರ ಆಶೀರ್ವಾದದಿಂದ ಸುಳ್ಯದಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಹೇಳಿದ ಭಾಗೀರಥಿಯವರು, ನಾನು ಜನರ ಸಮಸ್ಯೆಗೆ ಸ್ಪಂದಿಸುವೆ ಎಂದರು.

ಮೂಲಭೂತ ಅವಶ್ಯಕತೆಗೆ ಆದ್ಯತೆ ನೀಡುತ್ತೇನೆ. ಸರಕಾರಿ ಇಲಾಖೆಯಲ್ಲಿ ಲಂಚ ನೀಡದೇ ಕೆಲಸ ಆಗುವಂತೆ ನೋಡಿಕೊಳ್ಳುವೆ. ಆ ರೀತಿಯ ಜಾಗೃತಿಯನ್ನು ಕೈಗೊಳ್ಳುವೆ ಎಂದು ಭಾಗೀರಥಿ ಮುರುಳ್ಯ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಎಸ್.ಅಂಗಾರ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.