Home Karnataka State Politics Updates ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ನಾಪತ್ತೆ

ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ನಾಪತ್ತೆ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ಪ್ರಮುಖ ಆರೋಪಿ ಎನ್ನಲಾದ ಶ್ರೀಕೃಷ್ಣಗೆ ಜೀವ ಬೆದರಿಕೆ ದೂರಿನ ಹಿನ್ನೆಲೆ ಪೊಲೀಸರು ಭದ್ರತೆ ನೀಡಲು ಮುಂದಾಗಿದ್ದರೂ ಆತ ಮಾತ್ರ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಆತನಿಗೆ ಪೊಲೀಸರು ಭದ್ರತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದರು. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆಯ ಮೇರೆಗೆ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರನ್ನು ಶ್ರೀಕೃಷ್ಣ ಭದ್ರತೆಗೆ ನಿಯೋಜಿಸಲಾಗಿದೆ.

ಭದ್ರತೆ ನೀಡಲೆಂದು ಶ್ರೀಕೃಷ್ಣ ಮನೆಯವರನ್ನು ಸಂಪರ್ಕಿಸಿದರೂ ಅಜ್ಞಾತ ಸ್ಥಳದಲ್ಲಿದ್ದಾನೆ. ಜತೆಗೆ ಎಲ್ಲಿದ್ದಾನೆ. ಎಂಬುದು ನಮಗೂ ಗೊತ್ತಿಲ್ಲ. ಮನೆಯಿಂದ ಹೊರಗೆ ಹೋಗಿರುವ ಆತ ಮರಳಿ ಬಂದಿಲ್ಲ. ಮೊಬೈಲ್ ಕೂಡ ಬಳಸುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.