Home Karnataka State Politics Updates Basavanagouda yatnal: ಆ ಸ್ವಾಮೀಜಿ ನಕ್ಸಲೈಟ್ ಆಗ್ಬೇಕಿತ್ತು, ಅಪ್ಪಿ ತಪ್ಪಿ ಖಾವಿ ತೊಟ್ಟಿದ್ದಾರೆ – ನಾಡಿನ...

Basavanagouda yatnal: ಆ ಸ್ವಾಮೀಜಿ ನಕ್ಸಲೈಟ್ ಆಗ್ಬೇಕಿತ್ತು, ಅಪ್ಪಿ ತಪ್ಪಿ ಖಾವಿ ತೊಟ್ಟಿದ್ದಾರೆ – ನಾಡಿನ ಪ್ರಬಲ ಸ್ವಾಮೀಜಿ ಕುರಿತು ಬಸವನಗೌಡ ಯತ್ನಾಳ್ ವ್ಯಂಗ್ಯ

Basavanagouda yatnal

Hindu neighbor gifts plot of land

Hindu neighbour gifts land to Muslim journalist

Basavanagouda yatnal: ರಾಜ್ಯದಲ್ಲಿ ಕೆಲವು ದಿನಗಳಿಂದ ಹಿಂದೂಗಳ ಆರಾಧ್ಯ ದೈವ, ಪ್ರಥಮ ಪೂಜ್ಯ ಗಣಪತಿ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ನಾಡಿನ ಖ್ಯಾತ ಸ್ವಾಮಿಗಳಾಗಿರುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು(Sanehalli panditaradhya shri) ಗಣಪತಿಯು ನಮ್ಮ ಸಂಸ್ಕೃತಿಯಲ್ಲ, ನಮ್ಮ ದೇವರಲ್ಲ ಅದು ಕಲ್ಪನಿಕ ದೇವರು ಎಂದು ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ಇದೀಗ ಈ ಸ್ವಾಮಿಗಳು ಸ್ವಾಮಿಗಳ ಕುರಿತು ಹಿಂದೂ ಫೈರ್ ಬ್ರಾಂಡ್ ಬಸವನಗೌಡ ಯತ್ನಾಳ್(Basavanagouda yatnal) ಹರಿಹಾಯ್ದಿದ್ದಾರೆ.

ಹೌದು, ಹಿಂದೂ ಧರ್ಮದ ಆಧಾರದ ಮೇಲೆ ನಾವು ವೀರಶೈವ ಲಿಂಗಾಯತರಾಗಿದ್ದೇವೆ. ಆದರೆ ನಮ್ಮ ಸ್ವಾಮಿಗಳು ನಮ್ಮ ಧರ್ಮದ ದೇವರುಗಳ ಕುರಿತು ಹೀಗೆ ಒಟ್ಟಾರೆ ಮಾತಾಡುವುದು ಖಂಡನೀಯ. ಪಾಪ ಆ ಸ್ವಾಮೀಜಿ ನಕ್ಸಲೈಟ್ (Naxalite) ಆಗಬೇಕಿತ್ತು. ಕಮ್ಯೂನಿಸ್ಟ್ (Communist) ಆಗಿದ್ದಾರೆ. ದುರ್ದೈವ ಅವರು ಖಾವಿ ಹಾಕಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.

ಅಲ್ಲದೆ ಮತ್ತೂ ವ್ಯಂಗ್ಯವಾಡಿದ ಅವರು ಈಗಾಗಲೇ ಒಬ್ಬ ಸ್ವಾಮೀಜಿಗೆ ಕೊಟ್ಟಿದ್ದಾರೆ. ಮುಂದಿನ ಬಾರಿಯಾದರೂ ಇವರಿಗೆ ಕೊಡಲಿ. ಸಿಗಬೇಕು ಎಂಬುದು ಅವರ ಉದ್ದೇಶವಾಗಿದೆ. ಪ್ರಶಸ್ತಿ, ಜೀವನ ವೆಚ್ಚ ಎಲ್ಲವನ್ನೂ ಕೊಡುತ್ತಾರೆ. ಇವರಿಗೂ ಕೊಡಲಿ ಎಂದು ಹರಿಹಾಯ್ದರು.

ಸಾಣೇಹಳ್ಳಿ ಶ್ರೀಗಳು ಹೇಳಿದ್ದೇನು?
ಕೆಲವು ದಿನಗಳ ಹಿಂದೆ ಚಾಮರಾಜನಗರ (Chamarajanagar) ಜಿಲ್ಲೆ ಬರ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಸಾಣೇಹಳ್ಳಿ ಶ್ರೀಗಳು ಗಣಪತಿ ನಮ್ಮ ಸಂಸ್ಕೃತಿಯಲ್ಲ. ಅದನ್ನು ಪೂಡಿಸುವುದು ಸರಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು ಎಂದು ಹೇಳಿದ್ದರು. ಸ್ವಾಮೀಜಿ ಹೇಳಿಕೆ ಭಾರೀ ಈಗ ಸದ್ದು ಮಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧದ ಚರ್ಚೆಗಳು ಆಗುತ್ತಿವೆ.

ಸ್ಪಷ್ಟೀಕರಣ ಕೊಟ್ಟ ಸ್ವಾಜೀಜಿ:
ನಮ್ಮ ಸಂಸ್ಕೃತಿ ಎಂದು ನಾವು ಹೇಳಿದ್ದೇವೆ. ಅಂದರೆ ಲಿಂಗಾಯತ, ಶರಣ ಸಂಸ್ಕೃತಿ. ಕೆಲ ಮಹಾನುಭಾವರು ದೊಡ್ಡ ಲೇಖನ ಬರೆದಿದ್ದಾರೆ. ಶರಣರ ವಚನಗಳಲ್ಲಿ ಗಣಪತಿ ವಿರೋಧ ನಾಡಿದ ನಿದರ್ಶನವಿದೆ. ಕಂದಾಚಾರದ ಕೂಪದಲ್ಲಿ ಮುಳುಗಿಸುವ ಪುರೋಹಿತಶಾಹಿ ಪರಂಪರೆ ಈ ನಾಡಲ್ಲಿದೆ. ದೇವಸ್ಥಾನ ನಿರ್ಮಿಸಿದಾಕ್ಷಣ ಜನ ಅಲ್ಲಿ ಸುತ್ತುವರೆಯುತ್ತಾರೆ. ಪೂಜೆ ಮಾಡಿಸಿ ಪುಣ್ಯ ಸಿಗುತ್ತದೆ ಎಂದು ಹೇಳುತ್ತಾರೆ. ನಿಜವಾಗಿಯೂ ಯಾರಿಗಾದರೂ ಪುಣ್ಯ ಲಭ್ಯ ಆಗಿದೆಯೇ? ಎಂದು ಲೇಖನ ಬರೆದ ಮಹಾನುಭಾವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.