Home Karnataka State Politics Updates H.D Kumaraswami: ದತ್ತಮಾಲೆ ಹಾಕುತ್ತೇನೆ ಎಂದ ಎಚ್‌ಡಿಕೆ: ಬಜರಂಗದಳ ವಿಶ್ವಹಿಂದು ಪರಿಷತ್ ನಿಂದ ಎಚ್‌ಡಿಕೆಗೆ...

H.D Kumaraswami: ದತ್ತಮಾಲೆ ಹಾಕುತ್ತೇನೆ ಎಂದ ಎಚ್‌ಡಿಕೆ: ಬಜರಂಗದಳ ವಿಶ್ವಹಿಂದು ಪರಿಷತ್ ನಿಂದ ಎಚ್‌ಡಿಕೆಗೆ ಅಮೋಘ ಬೆಂಬಲ !

H.D Kumaraswami

Hindu neighbor gifts plot of land

Hindu neighbour gifts land to Muslim journalist

H.D Kumaraswami: ಕುಮಾರಸ್ವಾಮಿ ಅವರು ಆಶ್ಚರ್ಯಕರ ಹೇಳಿಕೆ ಒಂದನ್ನು ನೀಡಿ, ಕಾಂಗ್ರೆಸ್ ಚಿಂತೆ ಮಾಡುವಂತೆ ಆಗಿದೆ. ಹೌದು, ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ ಎಂಬ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (H.D Kumaraswami) ಹೇಳಿಕೆಯನ್ನು ಬಜರಂಗದಳ, ವಿಶ್ವಹಿಂದು ಪರಿಷತ್ ಸ್ವಾಗತಿಸಿದೆ.

ವಿಶ್ವಹಿಂದು ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಡಿಸೆಂಬರ್ 17 ರಿಂದ 26 ರವರೆಗೂ ನಡೆಯುಲಿರುವ ದತ್ತಮಾಲಾ ಅಭಿಯಾನಕ್ಕೆ ವಿಶ್ವಹಿಂದು ಪರಿಷತ್‌ನಿಂದ ಎಚ್ಡಿಕೆಗೆ ಆಹ್ವಾನ ನೀಡುವ ಸಾಧ್ಯತೆಯಿದೆ. ಸಂಘಟನೆಯ ಮುಖಂಡರು ಖದ್ದು ಹೆಚ್ ಡಿಕೆ ಯನ್ನು ಭೇಟಿಯಾಗಿ 1 ದಿನಗಳ ಕಾಲ ನಡೆಯುವ ಅಭಿಯಾನದಲ್ಲಿ ಭಾಗವಹಿಸುವಂತೆ ಕೋರಿ ಆಹ್ವಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಶ್ವ ಹಿಂದು ಪರಿಷತ್ ನ ಕಾರ್ಯಕಾರಣಿ ಸದಸ್ಯ ಸಕಲೇಶಪುರ ರಘು ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ.

ಕುಮಾರ ಸ್ವಾಮಿ ಪ್ರಕಾರ, ದತ್ತಮಾಲಾ ದೇವರ ಕಾರ್ಯಕ್ರಮ. ಹಾಕೋ ಸಮಯ ಬಂದ್ರೆ ದತ್ತ ಮಾಲೆ ಹಾಕ್ತೀನಿ, ದತ್ತಮಾಲೆ ಏಕೆ ಹಾಕಬಾರದು? ಕಾನೂನು ಬಾಹಿರವಾಗಿ ಅಲ್ಲ, ಕಾನೂನು ಬಾಹಿರವಾಗಿ ಯಾವುದನ್ನೂ ಮಾಡಲ್ಲ, ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ.

ಇನ್ನು ಜಾತ್ಯತೀತತೆ ಅಂದ್ರೆ ಏನು? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ, ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿಯಬೇಕು ಅಂತ, ಇದು ಜಾತ್ಯಾತೀತತೇನಾ? ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆಯೇ ಎಂದು ಎಚ್‌ಡಿ ಕುಮಾರಸ್ವಾಮಿ ಖಡಕ್ ಆಗಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿದ್ದರು.

 

ಇದನ್ನು ಓದಿ: Fire accident: ಮೀನುಗಾರಿಕಾ ಬಂದರಿನಲ್ಲಿ 40 ಬೋಟ್ ಗಳು ಬೆಂಕಿಗಾಹುತಿ!! ಬೆಂಕಿ ಕಾಣಿಸಿಕೊಳ್ಳಲು ಕಾರಣ?!