Home Karnataka State Politics Updates B Y Vijayendra : ಬಿಜೆಪಿ ರಾಜ್ಯಾಧ್ಯಕ್ಷರಾದ ಕೂಡಲೆ ಮಹತ್ವದ ಘೋಷಣೆ ಹೊರಡಿಸಿದ ವಿಜಯೇಂದ್ರ –...

B Y Vijayendra : ಬಿಜೆಪಿ ರಾಜ್ಯಾಧ್ಯಕ್ಷರಾದ ಕೂಡಲೆ ಮಹತ್ವದ ಘೋಷಣೆ ಹೊರಡಿಸಿದ ವಿಜಯೇಂದ್ರ – ಬಿಜೆಪಿ ನಾಯಕರೇ ಶಾಕ್ !!

B Y Vijayendra

Hindu neighbor gifts plot of land

Hindu neighbour gifts land to Muslim journalist

B Y Vijayendra : ಹಲವರಿಗೆ ಶಾಕ್ ಎಂಬಂತೆ, ಕೆಲವರಿಗೆ ನಿರೀಕ್ಷೆ ಎಂಬಂತೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪನವರ ಸುಪುತ್ರ ಬಿ ವೈ ವಿಜಯೇಂದ್ರ(B Y Vijayendra) ಅವರು ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಹೊತ್ತಿನಲ್ಲಿ ವಿಜಯೇಂದ್ರ ರವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಹೌದು, ರಾಜ್ಯದ ನೂತನ ಬಿಜೆಪಿಯ ಸಾರಥಿಯಾಗಿ ಆಯ್ಕೆಯಾದ ಬಿ ವೈ ವಿಜಯೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೆಲ್ಲದರ ನಡುವೆ ರಾಜ್ಯಾಧ್ಯಕ್ಷರಾದ ಕೆಲವೇ ಹೊತ್ತಲ್ಲಿ ಬಿ ವೈ ವಿಜಯೇಂದ್ರ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು ಮುಂದಿನ ಶುಕ್ರವಾರವೇ ವಿಪಕ್ಷ ನಾಯಕ ಆಯ್ಕೆ ನಡೆಯಲಿದೆ ಎಂದಿದ್ದಾರೆ.

ಅಂದಹಾಗೆ ವಿಪಕ್ಷ ನಾಯಕನಿಲ್ಲದೆ ರಾಜ್ಯದಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿತ್ತು. ಹಲವು ಟೀಕೆಗೆ ಗುರಿಯಾಗಿತ್ತು. ಆದರೀಗ ವಿಜಯೇಂದ್ರ ಅವರು ಅಧ್ಯರಾಗಿ ಆಯ್ಕೆಯಾದ ಕೂಡಲೇ ವಿಪಕ್ಷ ನಾಯಕನನ್ನೂ ಫೈನಲ್ ಮಾಡುವತ್ತ ದೃಷ್ಟಿಹರಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಮುಂದಿನ ಶುಕ್ರವಾರ(ನವೆಂಬರ್ 17) ಕೇಂದ್ರದಿಂದ ವೀಕ್ಷರು ರಾಜ್ಯಕ್ಕೆ ಆಗಮಿಸುತ್ತಾರೆ. ಇದೇ ದಿನ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲಾ ನಾಯಕರು, ಹಿರಿಯರ ಅಭಿಪ್ರಾಯ ಸಂಗ್ರಹಿಸಿ ವಿಪಕ್ಷ ನಾಯಕನ ಆಯ್ಕೆ ಅಂತಿಮಗೊಳಿಸಲಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಅಲ್ಲದೆ ಯಡಿಯೂರಪ್ಪನ ಮಗ ಎನ್ನುವ ಕಾರಣಕ್ಕೆ ನನಗೆ ಈ ಪೋಸ್ಟ್ ಕೊಟ್ಟಿಲ್ಲ. ಯಡಿಯೂರಪ್ಪ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬೀಡುವ ಯೋಚನೆಯಲ್ಲಿ ಇರೋರನ್ನು ಒಟ್ಟಿಗೆ ತಗೊಂಡು ಹೋಗುತ್ತೇನೆ. ದೆಹಲಿಯಿಂದ ವೀಕ್ಷಕರು ಬರಲಿದ್ದಾರೆ. ಸೋಮಣ್ಣ ಅಶೋಕ್ ಯತ್ನಾಳ್ ಬೊಮ್ಮಾಯಿ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.