Home News ಯೂಟ್ಯೂಬ್ ನೋಡಿ ಗರ್ಭಪಾತ ಮಾಡಿಕೊಳ್ಳಲು ಹೋಗಿ ತನ್ನ ಪ್ರಾಣವನ್ನೇ ಅಪಾಯಕ್ಕೆ ತಳ್ಳಿದ ಯುವತಿ!!| ಅಬಾರ್ಷನ್ ಗೆ...

ಯೂಟ್ಯೂಬ್ ನೋಡಿ ಗರ್ಭಪಾತ ಮಾಡಿಕೊಳ್ಳಲು ಹೋಗಿ ತನ್ನ ಪ್ರಾಣವನ್ನೇ ಅಪಾಯಕ್ಕೆ ತಳ್ಳಿದ ಯುವತಿ!!| ಅಬಾರ್ಷನ್ ಗೆ ಪ್ರಚೋದಿಸಿದ ಆಕೆಯ ಗೆಳೆಯ ಜೈಲು ಪಾಲು

Hindu neighbor gifts plot of land

Hindu neighbour gifts land to Muslim journalist

ಇದು ಗೂಗಲ್, ಯೂಟ್ಯೂಬ್ ಯುಗ. ನಮಗೆ ಬೇಕಾದ ಯಾವುದೇ ರೀತಿಯ ವೀಡಿಯೊಗಳು ಸಹ ಯೂಟ್ಯೂಬ್ನಲ್ಲಿ ದೊರೆಯುತ್ತವೆ. ಹೊಸ ಮೊಬೈಲ್, ಹೊಸ ನಳಪಾಕ, ಕಾರ್, ಬೈಕ್ ಸೇರಿದಂತೆ ವಿವಿಧ ಮಾಹಿತಿ ಪಡೆಯಲು ಯುಟ್ಯೂಬ್ ಸಹಾಯ ಪಡೆದುಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಯುವತಿ ಯುಟ್ಯೂಬ್ ನೋಡಿ ಗರ್ಭಪಾತ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಭಯಾನಕ ಘಟನೆ ನಾಗ್ಪುರದ ಯಶೋಧರ ನಗರದಲ್ಲಿ ನಡೆದಿದೆ.

ಹೌದು, 25 ವರ್ಷದ ಯುವತಿಯೊಬ್ಬಳು ಯುಟ್ಯೂಬ್ ನೋಡಿ ಅಬಾರ್ಷನ್ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾಳೆ. ಸರಿಯಾದ ಸಮಯಕ್ಕೆ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಆಕೆ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಯುಟ್ಯೂಬ್ ನೋಡಿ ಭ್ರೂಣವನ್ನು ಹೊರತೆಗೆಯಲು ಯುವತಿಗೆ ಆಕೆಯ ಗೆಳೆಯ ಸಲಹೆ ನೀಡಿದ್ದನಂತೆ. ಇನಿಯನ ಮಾತು ನಂಬಿ ಅಬಾರ್ಷನ್‍ಗೆ ಮುಂದಾಗಿ ಆಕೆ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು.

ಘಟನೆಯ ವಿವರ :
ಮಹಾರಾಷ್ಟ್ರದ ನಾಗ್ಪುರ ಮೂಲದ ಯುವತಿ, 30 ವರ್ಷದ ಶೋಯೆಬ್ ಖಾನ್ ಎಂಬಾತನನ್ನು ಪ್ರೀತಿಸುತಿದ್ದಳು. ಶೋಯೆಬ್ ಖಾನ್ ಮದುವೆಯಾಗೋದಾಗಿ ನಂಬಿಸಿ, 2016 ರಿಂದಲೂ ಯುವತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ. ಆದರೆ ಇತ್ತೀಚಿಗೆ ಆಕೆ ಗರ್ಭಿಣಿ ಎಂಬ ವಿಷಯ ತಿಳಿದು ಕೂಡಲೇ ಶೋಯೆಬ್‍ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಈ ವಿಷಯ ತಿಳಿಯುತ್ತಲೇ ಆತ ಯುಟ್ಯೂಬ್ ನಲ್ಲಿರುವ ಕೆಲ ವೀಡಿಯೋಗಳ ಮೂಲಕ ಗರ್ಭಪಾತ ಹೇಗೆ ಮಾಡಿಕೊಳ್ಳಬೇಕೆಂದು ತೋರಿಸಿದ್ದಾನೆ. ನಂತರ ಔಷಧಿಯನ್ನು ಸಹ ತಂದು ಕೊಟ್ಟಿದ್ದಾನೆ. ಯುವತಿಗೆ ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದಾನೆ.

ಬೇರೆ ದಾರಿಯಿಲ್ಲದೆ ಯುವತಿ ಗರ್ಭಪಾತ ಮಾಡಿಕೊಳ್ಳಲು ಮುಂದಾದಾಗ ಆಕೆಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಯುವತಿ ಹೇಳಿಕೆಯನ್ನಾಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.