Home News Dance: ಇಂಡಿಯಾ ಗೇಟ್‌ ಬಳಿ ತುಂಡು ಬಟ್ಟೆ ಸುತ್ತಿಕೊಂಡು ಯುವತಿಯ ಡ್ಯಾನ್ಸ್: ವಿಡಿಯೋ ವೈರಲ್

Dance: ಇಂಡಿಯಾ ಗೇಟ್‌ ಬಳಿ ತುಂಡು ಬಟ್ಟೆ ಸುತ್ತಿಕೊಂಡು ಯುವತಿಯ ಡ್ಯಾನ್ಸ್: ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Dance: ಸೋಷಿಯಲ್ ಮೀಡಿಯಾ ವೀವ್ಸ್ ಗಾಗಿ ಹೆಣ್ಣು ಮಕ್ಕಳು ಅರೆಬರೆ ಬಟ್ಟೆ ತೊಟ್ಟು ರೀಲ್ಸ್‌ ಮಾಡೋದು ಇದೇನು ಹೊಸದಲ್ಲ. ಅಂತೆಯೇ ಕೆಲವರ ಅತಿರೇಕದ ವರ್ತನೆಗೆಳು ಜನರ ಆಕ್ರೋಶಕ್ಕೆ ಕಾರಣ ಆಗುತ್ತೆ ಅನ್ನೋದಕ್ಕೆ ಇದೇ ಉದಾಹರಣೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಯುವತಿಯೊಬ್ಬಳು ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಇಂಡಿಯಾ ಗೇಟ್‌ ಬಳಿ ಬರೀ ಟವೆಲ್‌ ಸುತ್ತಿಕೊಂಡು ಬೋಲ್ಡ್‌ ಡಾನ್ಸ್‌ (Dance) ಮಾಡಿದ್ದಾಳೆ. ಈಕೆಯ ಈ ಮಿತಿಮೀರಿದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಹೌದು, ನಿನ್ನೆ ಅಂತರಾಷ್ಟ್ರೀಯ ಪುರುಷರ ದಿನದ ಅಂಗವಾಗಿ ಕೋಲ್ಕತ್ತಾ ಮೂಲದ ಮಾಡೆಲ್‌ ಸನ್ನತಿ ಮಿಶ್ರಾ ಎಂಬಾಕೆ ದೆಹಲಿಯ ಐಕಾನಿಕ್‌ ಇಂಡಿಯಾ ಗೇಟ್‌ ಬಳಿ ಬರೀ ಟವೆಲ್‌ ಸುತ್ತಿ ರೀಲ್ಸ್‌ ಮಾಡಿದ್ದಾಳೆ. ಅಲ್ಲದೇ ರೀಲ್ಸ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಸಾರ್ವಜನಿಕ ಸ್ಥಳದಲ್ಲಿ ಆಕೆ ನಡೆದುಕೊಂಡ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.

ಈ ವಿಡಿಯೋವನ್ನು ಸನ್ನತಿ ಮಿಶ್ರಾ (sannati__) ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಂತರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದು, ಈ ವಿಡಿಯೋದಲ್ಲಿ ಸನ್ನತಿ ಒಂದು ಬಿಳಿ ಟವೆಲ್‌ ಸುತ್ತಿಕೊಂಡು ಡಾನ್ಸ್‌ ಮಾಡುವ ದೃಶ್ಯವನ್ನು ಕಾಣಬಹುದು. ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಇಂಡಿಯಾ ಗೇಟ್‌ ಮುಂದೆ ಬರೀ ಟವೆಲ್‌ ಸುತ್ತಿ ನಿಂತ ಸನ್ನತಿ ಹಿಂದಿ ಹಾಡೊಂದಕ್ಕೆ ಲಿಪ್‌ ಸಿಂಕ್‌ ಮಾಡುತ್ತಾ ಡಾನ್ಸ್‌ ಮಾಡಿದ್ದಾಳೆ. ಆದ್ರೆ ಈ ವಿಡಿಯೋ ನೋಡಿದ ಹಲವು ಬಳಕೆದಾರರು ʼಮೊದಲು ಆಕೆಯನ್ನು ಅರೆಸ್ಟ್‌ ಮಾಡಿʼ ಎಂದು ಕಿಡಿ ಕಾರಿದ್ದಾರೆ.