Home latest 5 ವರ್ಷದ ಪ್ರೀತಿ, ಮದುವೆಯಾದ ನಾಲ್ಕೇ ತಿಂಗಳಿಗೆ ಅಂತ್ಯ | ಸ್ವರ್ಗಕ್ಕೆ ಕಿಚ್ಚು ಹಚ್ಚೋಣ ಹೇಳಿದ...

5 ವರ್ಷದ ಪ್ರೀತಿ, ಮದುವೆಯಾದ ನಾಲ್ಕೇ ತಿಂಗಳಿಗೆ ಅಂತ್ಯ | ಸ್ವರ್ಗಕ್ಕೆ ಕಿಚ್ಚು ಹಚ್ಚೋಣ ಹೇಳಿದ ಯುವತಿ ಮಸಣದ ಕಿಚ್ಚಲ್ಲಿ ಲೀನ |

Hindu neighbor gifts plot of land

Hindu neighbour gifts land to Muslim journalist

ಪ್ರೀತಿಸಿ ಮದುವೆಯಾದ ಯುವತಿ ಇನ್ನೂ ತನ್ನ ಕೈಯಲ್ಲಿದ್ದ ಮೆಹಂದಿ ಸಂಪೂರ್ಣವಾಗಿ ಮಾಸಿ ಹೋಗೇ ಇಲ್ಲ, ಅಷ್ಟರಲ್ಲೇ ನೇಣಿಗೆ ಶರಣಾಗಿದ್ದಾಳೆ. ಮದುವೆಯ ಹೊಂಗನಸನ್ನು ಕಣ್ಣು ತುಂಬಿಕೊಂಡು ಬಂದ ಯುವತಿ, ಮದ್ವೆಯಾದರೆ ರಾಣಿ ತರಹ ಗಂಡ ನೋಡ್ಕೋತ್ತಾನೆ ಎಂಬ ಭರವಸೆಯಿಂದ ಹಸೆಮಣೆ ಏರಿದ್ದ ಚಂದದ ಹುಡುಗಿ ನೇಣಿಗೆ ಶರಣಾಗಿರುವ ಘಟನೆ ನಗರದ ಪುಟ್ಟೇನಹಳ್ಳಿಯಲ್ಲಿ ನಡೆದಿದೆ.

ನೇಣಿಗೆ ಶರಣಾದ ಈ ಹೆಣ್ಮಗಳ ಹೆಸರು ನಿಹಾರಿಕ. ಮೈಸೂರು ಮೂಲದವಳಾದ ನಿಹಾರಿಕ ಕಳೆದ ಐದು ವರ್ಷದಿಂದ ಕಾರ್ತಿಕ್ ಎಂಬಾತನನ್ನು ಮನಸಾರೇ ಇಷ್ಟ ಪಟ್ಟಿದ್ದು, ನಂತರ ಮದುವೆಯಾಗಿದ್ದಳು. ಬಿಎಸ್ಸಿ ಪದವೀಧರೆ ಈ ಯುವತಿ. ನಿಹಾರಿಕ ಮದುವೆಯಾದ ನಂತರ ಪುಟ್ಟೇನಹಳ್ಳಿಯ ಖಾಸಗಿ ಸ್ಕೂಲ್ ಒಂದರಲ್ಲಿ ಟೀಚಿಂಗ್ ಕೆಲಸ ಮಾಡಿಕೊಂಡು ಚೆನ್ನಾಗಿಯೇ ಇದ್ದಳು. ಅದೇ ರೀತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕಾರ್ತಿಕ್ ಎಚ್ಎಸ್‌ಬಿಸಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ.

ಜೂನ್‌ನಲ್ಲಿ ಮದುವೆಯಾಗಿದ್ದ ನಿಹಾರಿಕಾ ಹಾಗೂ ಕಾರ್ತಿಕ್ ಜೋಡಿ, ಮದುವೆಯಾದ ದಿನದಿಂದಲೇ ಜಗಳ ಶುರುವಾಗಿತ್ತು. ಕಾರ್ತಿಕ್ ಸಣ್ಣ ಪುಟ್ಟ ವಿಚಾರಕ್ಕೂ ನಿಹಾರಿಕಾ ಬಗ್ಗೆ ಅನುಮಾನಪಟ್ಟು ದನಕ್ಕೆ ಹೊಡೆದ ಹಾಗೆ ಹೊಡೆಯುತ್ತಿದ್ದನಂತೆ. ನಿಹಾರಿಕ ಕಾರ್ತಿಕ್‌ನ ಸೈಕೋ ಮೆಂಟಾಲಿಟಿಯನ್ನು ನೋಡಿ ರೋಸಿ ಹೋಗಿ ಹಲವು ಬಾರಿ ತಂದೆ-ತಾಯಿಯ ಬಳಿ ನೋವನ್ನು ತೋಡಿಕೊಂಡಿದ್ದಳು. ನಿನ್ನೆ ಎಂದಿನಂತೆ ಸ್ಕೂಲ್ ಕಡೆ ಹೋಗ್ತೀನಿ ಎಂದು ಕಾರ್ತಿಕ್‌ನ ಬಳಿ ನಿಹಾರಿಕ ಕೇಳಿಕೊಂಡಿದ್ದಳು. ಸ್ಕೂಲೂ ಬೇಡ ಸ್ಕೂಲಲ್ಲಿರೋ ವ್ಯಕ್ತಿಗಳ ಜೊತೆ ಚಕ್ಕಂದವೂ ಬೇಡ ಮನೇಲೇ ಬಿದ್ದಿರು ಅಂತ ಕಾರ್ತಿಕ್ ನಿಹಾರಿಕಾಗೆ ನೋವಾಗೋ ರೀತಿಯಲ್ಲಿ ಮಾತಾಡಿದ್ದ. ಅಷ್ಟೇ ನಿಹಾರಿಕ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಳು.

ಮುದ್ದಾದ ಮಗಳು ಸುಖವಾಗಿ ಸಂತೋಷದಿಂದ ಇರಲಿ ಎಂದು ಹಾರೈಸಿದ ಪೋಷಕರು ಈಗ ಮಗಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆತಾ ಇದ್ದಾರೆ. ಈ ಪ್ರಕರಣ ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದು ಕಾರ್ತಿಕ್ ನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ.