Home News Women: ಮಹಿಳೆಯರು ವ್ಯಾನಿಟಿ ಬ್ಯಾಗ್ ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ,ಚುಡಾಯಿಸಿದರೆ ಚುಚ್ಚಿ ಬಿಡಿ : ಪ್ರಮೋದ್ ಮುತಾಲಿಕ್...

Women: ಮಹಿಳೆಯರು ವ್ಯಾನಿಟಿ ಬ್ಯಾಗ್ ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ,ಚುಡಾಯಿಸಿದರೆ ಚುಚ್ಚಿ ಬಿಡಿ : ಪ್ರಮೋದ್ ಮುತಾಲಿಕ್ ಕರೆ

Pramod Mutalik

Hindu neighbor gifts plot of land

Hindu neighbour gifts land to Muslim journalist

Women: ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಹುಬ್ಬಳ್ಳಿಯ ಶಿವಕೃಷ್ಣ ಮಂದಿರದಲ್ಲಿ ಮಾತನಾಡಿ ಮಹಿಳೆಯರು (Women) ತ್ರಿಶೂಲವನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ, ಯಾರಾದರು ಚುಡಾಯಿಸಿದರೆ ಅಥವಾ ಅತ್ಯಾಚಾರ ಮಾಡಲು ಬಂದ್ರೆ ಚುಚ್ಚಿಬಿಡಿ. ಎಲ್ಲಿ ಒದಿಬೇಕು ಅಂತ ಗೊತ್ತಿದೆ ಅಲ್ವಾ, ಅಲ್ಲಿಗೆ ಒದ್ದುಬಿಡಿ ಎಂದು ಕಿವಿಮಾತು ಹೇಳಿದರು.

ಶ್ರೀರಾಮ ಸೇನೆವತಿಯಿಂದ ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಿದ ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್, ಆಯುಧ ಪೂಜೆ ದಿನ ಮನೆಯಲ್ಲಿ ತಲವಾರ ಪೂಜೆ ಮಾಡಬೇಕು. ಆದರೆ, ಇಂದು ಪುಸ್ತಕ ಪೆನ್ನು ಇಟ್ಟು ಪೂಜೆ ಮಾಡುತ್ತಿದ್ದೇವೆ. ದುರ್ಗಾಮಾತೆಯ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ಕೊಡುತ್ತಿದ್ದೇವೆ. ಮುಂದಿನ ಆಯುಧ ಪೂಜೆ ದಿನ ಹರಿತವಾದ ತಲವಾರ ಇಟ್ಟು ಪೂಜೆ ಮಾಡಿ ಎಂದು ಹೇಳಿದರು. ನಾವು ನೀಡುತ್ತಿರುವ ತ್ರಿಶೂಲ ಬಗ್ಗೆ ಯಾರು ಭಯಪಡಬೇಡಿ. ಹಿಡಿಕೆ ಬಿಟ್ಟು ಆರು ಇಂಚು ಉದ್ದ ಇದ್ದರೇ ಅದು ಆಯುಧವಾಗುತ್ತದೆ. ಆದರೆ, ನಾವು ನೀಡುತ್ತಿರುವುದು ಮೂರು ಇಂಚಿನ ತ್ರಿಶೂಲ. ಯಾರಾದರು ಕೇಳಿದರೆ, ಮೊದಲು ಅವರಿಗೆ ಚುಚ್ಚಿಬಿಡಿ. ಪೊಲೀಸರು ಬಂದೂಕಿಗೆ ಪೂಜೆ ಮಾಡುತ್ತಾರೆ. ಹೀಗಾಗಿ, ನಾವು ಯಾಕೆ ತ್ರಿಶೂಲ ಇಟ್ಟುಕೊಳ್ಳಲು ಭಯ ಪಡಬೇಕು ಎಂದು ಹೇಳಿದರು.