Home News ಮನೆಕೆಲಸದವಳೊಂದಿಗೆ ಒಮ್ಮತದ ಸೆಕ್ಸ್‌ | ಕೆಲಸದವಳು ನಂತರ ಮಾಡಿದಳು ಬ್ಲಾಕ್‌ ಮೇಲ್‌, ಅಷ್ಟಕ್ಕೂ ಈಕೆ ಪೀಕಿಸಿದ...

ಮನೆಕೆಲಸದವಳೊಂದಿಗೆ ಒಮ್ಮತದ ಸೆಕ್ಸ್‌ | ಕೆಲಸದವಳು ನಂತರ ಮಾಡಿದಳು ಬ್ಲಾಕ್‌ ಮೇಲ್‌, ಅಷ್ಟಕ್ಕೂ ಈಕೆ ಪೀಕಿಸಿದ ದುಡ್ಡೆಷ್ಟು ಗೊತ್ತಾ? ಕೊನೆಗೆ ಆತ ಏನು ಮಾಡಿದ?

Hindu neighbor gifts plot of land

Hindu neighbour gifts land to Muslim journalist

ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೆ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮೋಸ ಸುಲಿಗೆ ಮಾಡಲು ಇಂತಹದೆ ಕಾರಣ ಇರಬೇಕು ಎಂದಿಲ್ಲ. ಮನುಷ್ಯರು ಹಣದ ದಾಹಕ್ಕೆ ಏನು ಬೇಕಾದರು ಮಾಡುತ್ತಾರೆ. ಇಲ್ಲೊಬ್ಬ ಮಹಿಳೆಯೂ ಹಣ ಪೀಕಲು ಮಾಡಿದ ಖತರ್ನಾಕ್ ಉಪಾಯ ನೋಡಿ.

ಬಟ್ಟೆವ್ಯಾಪಾರಿಯಾದ ವಿಕ್ರಂ ಪಿ.ಜೈನ್‌ ಎರಡು ವರ್ಷಗಳ ಹಿಂದೆ ಆರೋಪಿ ಮೈತ್ರಿಯನ್ನು ಬಟ್ಟೆ ಅಂಗಡಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ ಮೈತ್ರಿ, ‘ನನ್ನ ಸಹೋದರ ಕಿರಣ್‌ಗೆ ಅಪಘಾತವಾಗಿದ್ದು, ಚಿಕಿತ್ಸೆ ಗೆ ಹಣದ ಅಗತ್ಯವಿದೆ. ಮುಂಗಡವಾಗಿ 2 ಲಕ್ಷ ಕೊಡಿ’ ಎಂದು ವಿಕ್ರಂ ಪಿ.ಜೈನ್‌ ಬಳಿ ಹಣ ಪಡೆದಿದ್ದಾಳೆ. ಹಲವು ತಿಂಗಳು ಕಳೆದರೂ ಮೈತ್ರಿ ಹಣವನ್ನು ವಾಪಾಸ್‌ ನೀಡಿಲ್ಲ. ಹಣ ಕೇಳಿದಾಗ ಏನಾದರೂ ಸಮಜಾಯಿಷಿ ನೀಡುತ್ತಿದ್ದಳು. ಈ ನಡುವೆ ವಿಕ್ರಂ ಮತ್ತು ಮೈತ್ರಿ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿದೆ. ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದಾರೆ.

ಕೆಲ ದಿನಗಳ ಬಳಿಕ ವಿಕ್ರಂ ಮೊಬೈಲ್‌ಗೆ ಕರೆ ಮಾಡಿರುವ ಮೈತ್ರಿ, ‘ನನ್ನ ಅಣ್ಣ ಕಿರಣ್‌, ನಮ್ಮಿಬ್ಬರ ಬಗ್ಗೆ ನಿಮ್ಮ ಜತೆ ಮಾತನಾಡಲು ಬಯಸಿದ್ದಾನೆ. ಹೀಗಾಗಿ ಕೆ.ಜಿ.ರಸ್ತೆಯ ಬೆಂಗಳೂರು ಗೇಟ್‌ ಹೋಟೆಲ್‌ಗೆ ಬನ್ನಿ’ ಎಂದು ಹೇಳಿದ್ದಾಳೆ. ಇದಕ್ಕೆ ಒಪ್ಪಿದ ವಿಕ್ರಂ, ಹೋಟೆಲ್‌ಗೆ ತೆರಳಿದ್ದಾರೆ. ಈ ವೇಳೆ ಆರೋಪಿಗಳಾದ ಮೈತ್ರಿ, ಕಿರಣ್‌ ಹಾಗೂ ಸಿದ್ದು ಮೂವರು ಇದ್ದರು. ಈ ವೇಳೆ ಮೈತ್ರಿ, ‘ನಮಗೆ .8 ಲಕ್ಷ ಕೊಡು. ಇಲ್ಲವಾದರೆ, ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವಾಗಿರುವ ವಿಚಾರವನ್ನು ನಿನ್ನ ಕುಟುಂಬ, ಸಂಬಂಧಿಕರು ಸೇರಿದಂತೆ ಎಲ್ಲರಿಗೂ ಹೇಳಿ ಮಾನ ಮರ್ಯಾದೆ ಕಳೆಯುತ್ತೇವೆ’ ಎಂದು ಹೆದರಿಸಿದ್ದಾಳೆ. ಇದರಿಂದ ಆತಂಕಗೊಂಡ ವಿಕ್ರಂ, ಆರೋಪಿಗಳಿಗೆ .8 ಲಕ್ಷ ನೀಡಿದ್ದಾರೆ. ಇದಾದ ಬಳಿಕ ಹಲವು ಬಾರಿ ಇದೇ ವಿಚಾರ ಮುಂದಿಟ್ಟು ಆರೋಪಿಗಳು ವಿವಿಧ ಹಂತಗಳಲ್ಲಿ ವಿಕ್ರಂನಿಂದ ಒಟ್ಟು .43 ಲಕ್ಷ ಸುಲಿಗೆ ಮಾಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಪದೇ ಪದೇ ವಿಕ್ರಂ ಕರೆ ಮಾಡಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಹಣವಿಲ್ಲ ಎಂದರೂ, ನಿನ್ನ ಕುಟುಂಬ ಹಾಗೂ ಸಂಬಂಧಿಕರಿಗೆ ದೈಹಿಕ ಸಂಪರ್ಕದ ವಿಚಾರ ಹೇಳುವುದಾಗಿ ಬೆದರಿಸಿದ್ದಾರೆ. ಇವರ ಕಾಟದಿಂದ ಬೇಸತ್ತ ವಿಕ್ರಂ ಕೊನೆಗೆ ಪೊಲೀಸ್‌ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

ಪೊಲೀಸರ ಪ್ರಕಾರ ಕೆಲಸದವಳ ಒಪ್ಪಿಗೆ ಮೇರೆಗೆ ಯುವತಿ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ ಬಟ್ಟೆಅಂಗಡಿ ಮಾಲಿಕನಿಗೆ ಈ ವಿಚಾರವನ್ನು ಕುಟುಂಬದವರಿಗೆ ಹೇಳಿ ಮರ್ಯಾದೆ ಹಾಳು ಮಾಡುವುದಾಗಿ ಬೆದರಿಸಿ ಬರೋಬ್ಬರಿ .43 ಲಕ್ಷ ಸುಲಿಗೆ ಮಾಡಿದ ಆರೋಪದಡಿ ಯುವತಿ ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ನಗರ್ತಪೇಟೆ ನಿವಾಸಿ ವಿಕ್ರಂ ಪಿ.ಜೈನ್‌ ಎಂಬುವವರು ನೀಡಿದ ದೂರಿನ ಮೇರೆಗೆ ಮೈತ್ರಿ ಆಕೆಯ ಸಹೋದರ ಕಿರಣ್‌ಹಾಗೂ ಸ್ನೇಹಿತ ಸಿದ್ದು ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಸದ್ಯ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.