Home News D K Shivakumar: ಡಿಕೆ ಶಿವಕುಮಾರ್ ಸಿಎಂ ಆಗಲಿ – ರಂಭಾಪುರಿ ಅವರ ವೈಯಕ್ತಿಕ ಅಭಿಪ್ರಾಯ...

D K Shivakumar: ಡಿಕೆ ಶಿವಕುಮಾರ್ ಸಿಎಂ ಆಗಲಿ – ರಂಭಾಪುರಿ ಅವರ ವೈಯಕ್ತಿಕ ಅಭಿಪ್ರಾಯ – ಕೃಷಿ ಸಚಿವ ಚೆಲುವರಾಯ ಸ್ವಾಮಿ

Hindu neighbor gifts plot of land

Hindu neighbour gifts land to Muslim journalist

D K Shivakumar: ರಂಭಾಪುರಿ ಶ್ರೀ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂಬ ಹೇಳಿಕೆ ವಿಚಾರ ಸಂಬಂಧ ದೆಹಲಿಯಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಬ್ಲೆಸಿಂಗ್ ಮಾಡುವುದಾಗಲಿ ಅಭಿಪ್ರಾಯ ತಿಳಿಸುವುದು ಅದು ಅವರ ವೈಯಕ್ತಿಕ. ನಮ್ಮ ಪಕ್ಷದಲ್ಲಿ ಆ ರೀತಿ ಪ್ರಶ್ನೆಯೇ ಇಲ್ಲ‌. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಹಳ ಅನ್ಯೋನ್ಯವಾಗಿದ್ದಾರೆ. ಬಹಳ ಕಷ್ಟ ಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದಾರೆ ಎಂದರು.

ನಾನು ಕೂಡ ನೋಡಿದ್ದೇನೆ ಅವರು ಪ್ರತಿ ಹಂತದಲ್ಲೂ ಮತ್ತೆ ಸರ್ಕಾರ ತರಬೇಕು ಜನ ಪರ ಕೆಲಸ ಮಾಡಬೇಕು ಅಂತಾ ಕೆಲಸ ಮಾಡ್ತಾ ಇದ್ದಾರೆ. ಏನೇ ತಿರ್ಮಾನ ಆದರೂ ಹೈಕಮಾಂಡ್ ಜೊತೆಗೆ ಮಾತಾಡಿ ತಿರ್ಮಾನ ಮಾಡೋ ತರ ಇಟ್ಟುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಯಾಕೆ ಹೀಗೆ ಅಂತಾ ನನಗೆ ಗೊತ್ತಿಲ್ಲ. ಸ್ವಾಮಿಜಿ ರವರ ಅಭಿಪ್ರಾಯ ಅದು ಅವರ ವೈಯಕ್ತಿಕ ಬಹಳ ಹಿಂದಿನಿಂದಲೂ ಬಹಳಷ್ಟು ಜನರು ಅಭಿಪ್ರಾಯ ಹೇಳಿದ್ದಾರೆ. ನೀವು ಯಾಕೆ ಹೇಳಿದ್ರಿ ಅಂತಾ ನಾವು ಕೇಳಲು ಆಗುತ್ತಾ? ಡಿಕೆ ಶಿವಕುಮಾರ್ ಕೇಳಲು ಆಗುತ್ತಾ ಅಥವಾ ಸಿದ್ದರಾಮಯ್ಯ ನವರು ಕೇಳಲು ಆಗುತ್ತಾ, ಸ್ವಾಮಿಜಿಗಳು ನಮಗೆ ಗುರುಗಳ ಸ್ಥಾನದಲ್ಲಿ ಇದ್ದಾರೆ ಅವರ ಅಭಿಪ್ರಾಯ ಅಷ್ಟೇ ಇದು ಹೆಚ್ಚು ಚರ್ಚೆ ಅಗತ್ಯ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಗ್ಯಾರಂಟಿ ಬೇಕಾ ರಸ್ತೆ ಬೇಕಾ ಎಂಬ ಬಸವರಾಜ್ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಗ್ಯಾರಂಟಿನೂ ಆಗುತ್ತೆ ರಸ್ತೆನೂ ಆಗುತ್ತೆ ಅದ್ಯಾಕೆ ಅವರು ಮಾತಾಡಿದ್ದಾರೋ ನನಗೆ ಗೊತ್ತಿಲ್ಲ. ಮೊನ್ನೆಲ್ಲಾ 50 ಕೋಟಿ ಕೊಟ್ಟಿದ್ದಾರೆ, ಅಲ್ಲದೆ ಇಲಾಖೆಗಳಲ್ಲೂ ಅನುದಾನ ಕೊಟ್ಟಿದ್ದಾರೆ. ಆರ್ ಡಿಪಿಆರ್, pwd ದಲ್ಲೂ ಕೊಟ್ಟಿದ್ದಾರೆ. ರಾಯರೆಡ್ಡಿ ಸೀನಿಯರ್ ಶಾಸಕ ಇದ್ದಾರೆ ಅವರು ಯಾಕೆ ಹೀಗೆ ನನಗೆ ಗೊತ್ತಿಲ್ಲ.

ನಾನು ಮಂತ್ರಿ ಜೊತೆಗೆ ಒಂದು ತಾಲೂಕಿನ ಶಾಸಕನೂ ಹೌದು, ತಾಲೂಕಿನ ಅಭಿವೃದ್ಧಿಯೂ ಆಗ್ತಿದೆ, ಗ್ಯಾರಂಟಿಯೂ ಆಗ್ತಿದೆ‌. ಸಿಎಂ ಹಾಗೂ ಡಿಸಿಎಂ ಬಳಿ ಚರ್ಚೆ ಮಾಡಿ ಅನುದಾನ ಪಡೆಯಬೇಕು. ಜನರು ರಸ್ತೆಯೂ ಬೇಕು ಅಂತಾರೆ ಗ್ಯಾರಂಟಿ ನೂ ಬೇಕು ಅಂತಾರೆ ಎರಡು ಆಗ್ತಿದೆ ಎಂದು ಹೇಳಿದರು.

ರಣದೀಪ್ ಸುರ್ಜೆವಾಲ ಸಭೆ ವಿಚಾರವಾಗಿ ಹೇಳಿಕೆ ನೀಡಿದ ಅವರು ಯಾವುದೇ ಗೊಂದಲ ಇಲ್ಲ, ಪ್ರತಿ ಎರಡು ವರ್ಷಗಳಿಗೊಮ್ಮೆ ಸಭೆ ಮಾಡಬೇಕು ಮಾಡ್ತಿದ್ದಾರೆ. ಇದರಲ್ಲಿ ಎಐಸಿಸಿ ನಿರ್ದೇಶನ ಹಾಗೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಸಭೆ ಅಷ್ಟೇ ಯಾವುದೇ ಗೊಂದಲ ಇಲ್ಲ.

ಇನ್ನು ದೆಹಲಿಗೆ ಹೈಕಮಾಂಡ್ ವರಿಷ್ಠರ ಭೇಟಿ ಮಾಡಲು ಬಂದ ಇವಚಾರವಾಗಿ ಮಾತನಾಡಿದ ಕೃಷಿ ಸಚಿವರು ಇಲಾಖೆ ಸಂಬಂಧ ಬಂದಿದ್ದೇನೆ, ಇಂದು ನಮ್ಮ ಇಲಾಖೆ ಸಂಬಂಧಿಸಿದಂತೆ ಸಭೆ ಇದೆ. ಕೇಂದ್ರ ಕೃಷಿ ಸಚಿವರ ಸಮಯವೂ ಕೇಳಿದ್ದೇನೆ ಭೇಟಿ ಮಾಡ್ತಿನಿ. ನಾಳೆ ಮಲ್ಲಿಕಾರ್ಜುನ ಖರ್ಗೆ ವೇಣುಗೋಪಾಲರನ್ನ ಭೇಟಿ ಮಾಡುವ ಪ್ರಯತ್ನ ಮಾಡ್ತಿನಿ ಎಂದರು.

ಇದನ್ನೂ ಓದಿ: Puttur: ಪುತ್ತೂರಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಗೋಮಾಳ ಜಾಗ ಒದಗಿಸುವಂತೆ ಪುತ್ತಿಲ ಪರಿವಾರದಿಂದ ಜಿಲ್ಲಾಧಿಕಾರಿಗೆ ಮನವಿ!