Home News 50 ಕೋಟಿ ಬಳಕೆದಾರರ ಡೇಟಾ ಲೀಕ್ ಬಗ್ಗೆ WhatsApp ಸಂಸ್ಥೆಯಿಂದ ಬಂತು ಮಹತ್ವದ ಹೇಳಿಕೆ!!!

50 ಕೋಟಿ ಬಳಕೆದಾರರ ಡೇಟಾ ಲೀಕ್ ಬಗ್ಗೆ WhatsApp ಸಂಸ್ಥೆಯಿಂದ ಬಂತು ಮಹತ್ವದ ಹೇಳಿಕೆ!!!

Hindu neighbor gifts plot of land

Hindu neighbour gifts land to Muslim journalist

ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ ವಾಟ್ಸಾಪ್ ಒಂದು ಉತ್ತಮ ಸಂಪರ್ಕ ಮಾಧ್ಯಮ ಎಂದರೆ ತಪ್ಪಾಗಲಾರದು.

ಆದರೆ ಪ್ರಸ್ತುತ ಅನಾಮಧೇಯ ಹ್ಯಾಕರ್ ಓರ್ವ ಭಾರತ ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಸಕ್ರಿಯ WhatsApp ಬಳಕೆದಾರರ ಮಾಹಿತಿಯನ್ನು ಹ್ಯಾಕರ್‌ಗಳ ಸಮುದಾಯದ ವೇದಿಕೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದಾನೆ. ಇದರಲ್ಲಿ 84 ದೇಶಗಳ ಪೈಕಿ ಈಜಿಪ್ಟ್‌ ಜನರ ಅತಿ ಹೆಚ್ಚು (4.5 ಕೋಟಿ) ಮಾಹಿತಿ ಸೋರಿಕೆಯಾಗಿದೆ ಎಂದು ಸುದ್ದಿ ಆಗಿತ್ತು. 60 ಲಕ್ಷ ಭಾರತೀಯರದ್ದೂ ಸೇರಿದಂತೆ ಜಗತ್ತಿನಾದ್ಯಂತ 84 ದೇಶಗಳ ಸುಮಾರು 50 ಕೋಟಿ ವಾಟ್ಸಾಪ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂಬ ಸುದ್ದಿ ಸುಳ್ಳು ಎಂದು ವಾಟ್ಸಾಪ್ ಸಂಸ್ಥೆ ಹೇಳಿದೆ.

ಅನಾಮಧೇಯ ಹ್ಯಾಕರ್ ಓರ್ವ ಭಾರತ ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಸಕ್ರಿಯ ವಾಟ್ಸಾಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕರ್‌ಗಳ ಸಮುದಾಯದ ವೇದಿಕೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದಾನೆ ಎಂದು ವೆಬ್‌ಸೈಟ್ ವರದಿ ಮಾಡಿತ್ತು. ಆದರೆ, ವರದಿಯಲ್ಲಿ ತಿಳಿಸಿರುವಂತೆ ತನ್ನ ಬಳಕೆದಾರರ ದತ್ತಾಂಶ ಎಲ್ಲಿಯೂ ಸೋರಿಕೆಯಾಗಿಲ್ಲ ಎಂದು ವಾಟ್ಸಾಪ್ ಸಂಸ್ಥೆ ತಿಳಿಸಿದೆ.

50 ಕೋಟಿ ವಾಟ್ಸಾಪ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂಬ ವರದಿಯನ್ನು ನಿರ್ಲಕ್ಷವಾಗಿ ತಳ್ಳಿಹಾಕಿರುವ ವಾಟ್ಸಾಪ್ ಸಂಸ್ಥೆ, ವಾಟ್ಸಾಪ್ ನಿಂದ ಡೇಟಾ ಸೋರಿಕೆಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಡೇಟಾವನ್ನು ವಾಟ್ಸಾಪ್ ನಿಂದಲೇ ತೆಗೆದುಕೊಳ್ಳಲಾಗಿದೆ ಎಂಬುದಕ್ಕೆ ಯಾವುದೇ ಗಟ್ಟಿಯಾದ ಆಧಾರವಿಲ್ಲ ಎಂದು ಹೇಳಿದೆ. ಇದರಿಂದ ವಾಟ್ಸಾಪ್ ಬಳಕೆದಾರರ ಮೊಬೈಲ್‌ ಸಂಖ್ಯೆ ಸೇರಿದಂತೆ ಹಲವು ಖಾಸಾಗಿ ಮಾಹಿತಿ ಲೀಕ್ ಆಗಿವೆ ಎಂಬ ಆತಂಕ ದೂರವಾಗಿದೆ.

ಆದರೆ ಕೆಲವು ವರದಿಗಳ ಪ್ರಕಾರ ವಾಟ್ಸಾಪ್ ಬಳಕೆದಾರರ ಡೇಟಾ ಎಂದು ಹ್ಯಾಕರ್ ಮಾರಾಟಕ್ಕಿಟ್ಟಿರುವ ಮಾಹಿತಿಯನ್ನು ಸ್ಕ್ರಾಪಿಂಗ್ ಮೂಲಕ ಅಂದರೆ ವಿವಿಧ ವೆಬ್‌ಸೈಟ್‌ಗಳ ಮೂಲಕ ಕದಿಯಲಾಗಿರಬಹುದು ಎಂದು ಅಂದಾಜಿಸಿದೆ. ವೆಬ್‌ಸೈಟ್‌ಗಳು ತಮ್ಮ ಬಳಕೆದಾರರ ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸಿ ದಾಖಲು ಮಾಡಿಟ್ಟುಕೊಂಡಿರುತ್ತವೆ. ಅದಕ್ಕೆ ಹ್ಯಾಕರ್ ಕನ್ನ ಹಾಕಿರಬಹುದು ಎಂದು ಹಲವು ವರದಿಗಳಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ವಾಟ್ಸಾಪ್ ಬಳಕೆದಾರರ ಮೊಬೈಲ್‌ ಸಂಖ್ಯೆ ಸೇರಿದಂತೆ ಹಲವು ಖಾಸಾಗಿ ಮಾಹಿತಿ ಲೀಕ್ ಆಗಿರುವ ವಿಚಾರ ಗೊಂದಲ ಸೃಷ್ಟಿ ಮಾಡಿತಾದರೂ ಈ ರೀತಿಯ ಘಟನೆಗಳು ನಡೆದಿಲ್ಲ ಎಂದು ವಾಟ್ಸಾಪ್ ಕಂಪನಿ ತಿಳಿಸಿದೆ.