Home latest ವಾಟ್ಸಪ್ ನಿಂದ ಬಿಗ್ ಶಾಕಿಂಗ್ ಮಾಹಿತಿ !

ವಾಟ್ಸಪ್ ನಿಂದ ಬಿಗ್ ಶಾಕಿಂಗ್ ಮಾಹಿತಿ !

Hindu neighbor gifts plot of land

Hindu neighbour gifts land to Muslim journalist

ಮೆಸೇಜಿಂಗ್ ಪ್ಲಾಟ್ಫಾರ್ಮ್ ಆದ ವಾಟ್ಸಾಪ್ ಮೇ ತಿಂಗಳ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ಅಡಿಯಲ್ಲಿ ಮಾಸಿಕ ವರದಿಯನ್ನ ಬಿಡುಗಡೆ ಮಾಡಿದೆ. ಇನ್ನು ಇತ್ತೀಚಿನ ವರದಿಯು 1 ಮೇ 2022 ರಿಂದ 31 ಮೇ 2022 ರವರೆಗಿನ ಅವಧಿಯ ಮಾಹಿತಿಯನ್ನು ಒಳಗೊಂಡಿದೆ.

ಇದರ ಪ್ರಕಾರ, ಮೆಸೇಜಿಂಗ್ ಅಪ್ಲಿಕೇಶನ್ ಒಂದು ತಿಂಗಳಲ್ಲಿ 19 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿಷೇಧಿಸಿದೆ. ಈ ಬಳಕೆದಾರರು ಮುಖ್ಯವಾಗಿ ಪ್ಲಾಟ್ಫಾರ್ಮ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ವಾಟ್ಸಾಪ್‌ ತಿಳಿಸಿದೆ.

ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳು ಮತ್ತು ವಾಟ್ಸಾಪ್ ತೆಗೆದುಕೊಂಡ ಸಂಬಂಧಿತ ಕ್ರಮ ಮತ್ತು ನಮ್ಮ ಪ್ಲಾಟ್ಫಾರ್ಮ್‌ಗಳಲ್ಲಿ ದುರುಪಯೋಗವನ್ನು ಎದುರಿಸಲು ವಾಟ್ಸಾಪ್‌ನ ಸ್ವಂತ ತಡೆಗಟ್ಟುವ ಕ್ರಮಗಳನ್ನ ಒಳಗೊಂಡಿದೆ. ಇತ್ತೀಚಿನ ಮಾಸಿಕ ವರದಿಯಲ್ಲಿ ಸೆರೆಯಾಗಿರುವಂತೆ, ಮೇ ತಿಂಗಳಲ್ಲಿ ವಾಟ್ಸಾಪ್ 1.9 ಮಿಲಿಯನ್ ಖಾತೆಗಳನ್ನ ನಿಷೇಧಿಸಲಾಗಿದೆ.

ಅಂದ್ಹಾಗೆ, ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಸೇವೆಗಳಲ್ಲಿ ದುರುಪಯೋಗವನ್ನು ತಡೆಗಟ್ಟುವಲ್ಲಿ ವಾಟ್ಸಾಪ್ ಉದ್ಯಮದ ಮುಂಚೂಣಿಯಲ್ಲಿದೆ. ನಮ್ಮ ಪ್ಲಾಟ್ಫಾರ್ಮ್‌ನಲ್ಲಿ ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿಡಲು ನಾವು ವರ್ಷಗಳಿಂದ ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು ಮತ್ತು ತಜ್ಞರು ಮತ್ತು ಪ್ರಕ್ರಿಯೆಗಳಲ್ಲಿ ನಿರಂತರವಾಗಿ ಹೂಡಿಕೆ ಮಾಡಿದ್ದೇವೆ” ಎಂದು ವಕ್ತಾರರು ಹೇಳಿದರು.