Home News Rahul Gandhi ಯಾವಾಗಲೂ ಬಿಳಿ ಟಿ ಶರ್ಟ್ ಧರಿಸೋ ಸೀಕ್ರೇಟ್ ಏನು ?! ಬಯಲಾಯ್ತು ನೋಡಿ...

Rahul Gandhi ಯಾವಾಗಲೂ ಬಿಳಿ ಟಿ ಶರ್ಟ್ ಧರಿಸೋ ಸೀಕ್ರೇಟ್ ಏನು ?! ಬಯಲಾಯ್ತು ನೋಡಿ ಸತ್ಯ

Rahul Gandhi

Hindu neighbor gifts plot of land

Hindu neighbour gifts land to Muslim journalist

Rahul Gandhi: ಕಾಂಗ್ರೆಸ್ ನಾಯಕ, 54 ವರ್ಷದ ಯುವ ನೇತಾರ ರಾಹುಲ್ ಗಾಂಧಿ(Rahul Ghandi) ಡ್ರೆಸ್ ಕೋಡ್ ಯಾವತರದ್ದು ಎಂದು ಬಹುಶಃ ಎಲ್ಲರಿಗೂ ಗೊತ್ತಿದೆ. ರಾಜಕೀಯಕ್ಕೆ ಬಂದ ಆದರಂಭದ ದಿನಗಳಲ್ಲಿ ಜುಬ್ಬ, ಪೈಜಾಮ್ ಧರಿಸುತ್ತಿದ್ದ ರಾಹುಲ್ ಇತ್ತೀನ ಕೆಲ ವರ್ಷಗಳಲ್ಲಿ ಕೇವಲ ಬಿಳಿ ಟಿ ಶರ್ಟ್(White T Shirt) ಹಾಗೂ ಕಪ್ಪು ಪ್ಯಾಂಟ್ ಅನ್ನು ಮಾತ್ರ ಧರಿಸುತ್ತಾರೆ. ದೇಶದ ಯಾವುದೇ ಮೂಲೆಗೆ ಹೋಗಲಿ, ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಥವಾ ಯಾವುದೇ ವಿದೇಶಕ್ಕೆ ಹೋಗಲಿ ಅಲ್ಲೆಲ್ಲಾ ರಾಹುಲ್ ಡ್ರೆಸ್ ಕೋಡ್ ಒಂದೇ. ಹಾಗಿದ್ರೆ ಏನಿದರ ರಹಸ್ಯ? ಇದನ್ನು ಸ್ವತಃ ರಾಹುಲ್ ಗಾಂಧಿ ಅವರೇ ರಿವಿಲ್ ಮಾಡಿದ್ದಾರೆ.

https://x.com/RahulGandhi/status/1803449805638885440?t=RORaf-f51QTclkWQo87MNA&s=08

ರಾಹುಲ್ ಗಾಂಧಿ ಅವರು ಬುಧವಾರ ತಮ್ಮ 54 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿ ಕಾರ್ಜುನ್‌ ಖರ್ಗೆ ಅವರು ಕೇಕ್‌ ಕಟ್‌ ಮಾಡಿಸುವ ಮೂಲಕ ರಾಹುಲ್‌ ಗಾಂಧಿಯವರ ಬರ್ತ್‌ ಡೇಯನ್ನು ಆಚರಿಸಲಾಯಿತು. ಈ ಬೆನ್ನಲ್ಲೇ ರಾಹುಲ್‌ ಗಾಂಧಿಯವರು #WhiteTshirtArmy ಎಂಬ ಅಭಿಯಾನವನ್ನು ಕೂಡ ಆರಂಭಿಸಿದ್ದಾರೆ. ಇದರೊಂದಿಗೆ ರಾಹುಲ್ ತಾವು ಯಾವಾಗಲೂ ಧರಿಸುವ ಬಿಳಿ ಬಣ್ಣದ ಟೀ ಶರ್ಟ್‌ ಹಿಂದಿನ ಸೀಕ್ರೆಟ್‌ ರಿವೀಲ್‌ ಮಾಡಿದ್ದಾರೆ.

ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾದ ಹೇಳಿ ಟ್ವೀಟ್ ಮಾಡಿದ ರಾಹುಲ್ ಇದೇ ವೇಳೆ ಬಿಳಿ ಶರ್ಟ್‌ ಕುರಿತು ಕೂಡ ಪ್ರತಿಕ್ರಿಯಿಸಿದ್ದಾರೆ. ‘ನಾನು ಯಾವಾಗಲೂ ‘ಬಿಳಿ ಟಿ-ಶರ್ಟ್’ ಅನ್ನು ಏಕೆ ಧರಿಸುತ್ತೇನೆ ಎಂದು ಜನರು ಆಗಾಗ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಟಿ-ಶರ್ಟ್ ನನಗೆ ಪಾರದರ್ಶಕತೆ, ಘನತೆ ಮತ್ತು ಸರಳತೆಯನ್ನು ಸಂಕೇತಿಸುತ್ತದೆ. ಹೀಗಾಗಿ ನಾನು ಹೆಚ್ಚಾಗಿ ಬಿಳಿ ಬಣ್ಣದ ಟೀ-ಶರ್ಟ್‌ಗಳನ್ನೇ ಧರಿಸಲು ಇಷ್ಟಪಡುತ್ತೇನೆ’ ಎಂದು ತಿಳಿಸಿದ್ದಾರೆ.

ಜೋಡೋ ಯಾತ್ರೆ ವೇಳೆ ಪೋಸ್ಟ್ ಹಾಕಿದ್ದ ರಾಹುಲ್ :
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಬಿಳಿ ಬಣ್ಣದ ಬಟ್ಟೆ ‘ಪಾರದರ್ಶಕತೆ’ ಮತ್ತು ‘ಸರಳತೆ’ ಯನ್ನು ಸೂಚಿಸುತ್ತದೆ ಎಂದಿದ್ದಾರೆ. ಜೊತೆಗೆ ತಾವು ಬಟ್ಟೆಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನಾನು ಸರಳವಾಗಿರಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಈ ವಿಡಿಯೋಗಳನ್ನು ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿತ್ತು.

Muzzaffarnagar: ನಿದ್ರಿಸುತ್ತಿದ್ದಾಗ ಯುವಕನ ಲಿಂಗ ಬದಲಾವಣೆ; ಹುಡುಗನಿಂದ ಹುಡುಗಿಯಾಗಿ ಬದಲಾವಣೆ