Home News ವೀಕೆಂಡ್ ಕರ್ಫ್ಯೂ : ಮದ್ಯದಂಗಡಿ ಓಪನ್ ಇದೆಯಾ? ಇಲ್ಲವೋ | ಅಬಕಾರಿ ಸಚಿವರು ಹೇಳಿದಿಷ್ಟು….

ವೀಕೆಂಡ್ ಕರ್ಫ್ಯೂ : ಮದ್ಯದಂಗಡಿ ಓಪನ್ ಇದೆಯಾ? ಇಲ್ಲವೋ | ಅಬಕಾರಿ ಸಚಿವರು ಹೇಳಿದಿಷ್ಟು….

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ಹಿನ್ನೆಲೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮದ್ಯದಂಗಡಿ ಇರುತ್ತಾ? ಪಾರ್ಸಲ್ ಇರುತ್ತಾ ಎನ್ನುವ ಗೊಂದಲಗಳು ಇದ್ದವು. ಇದಕ್ಕೆ ಇದೀಗ ಸ್ವತಃ ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

ಇಂದು(ಶುಕ್ರವಾರ) ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹೆಚ್ಚುತ್ತಿರುವ ಕಾರಣ ಸರ್ಕಾರ ಘೋಷಿಸಿರುವ ವಾರಾಂತ್ಯದ ಲಾಕ್ ಡೌನ್ ಹಿನ್ನೆಲೆ ಇಂದು(ಶುಕ್ರವಾರ) ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದರು.