Home News ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯಲ್ಲಿ ಟಿಪ್ಪು ಸುಲ್ತಾನ್ ಅವಹೇಳನ : ಟಿಪ್ಪು ಸುಲ್ತಾನ್ ಅಭಿಮಾನಿ ಬಳಗ...

ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯಲ್ಲಿ ಟಿಪ್ಪು ಸುಲ್ತಾನ್ ಅವಹೇಳನ : ಟಿಪ್ಪು ಸುಲ್ತಾನ್ ಅಭಿಮಾನಿ ಬಳಗ ಬೆಳ್ಳಾರೆ ಖಂಡನೆ

Hindu neighbor gifts plot of land

Hindu neighbour gifts land to Muslim journalist

ಬೆಳ್ಳಾರೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ತನ್ನ ಇಬ್ಬರು ಮಕ್ಕಳನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಒತ್ತೆಯಿಟ್ಟ ಟಿಪ್ಪು ಸುಲ್ತಾನ್ ಕುರಿತು ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿರುವ ಕೃತ್ಯವನ್ನು ಟಿಪ್ಪು ಸುಲ್ತಾನ್ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸುತ್ತದೆ ಎಂದು ಸಮಿತಿಯ ಅದ್ಯಕ್ಷರಾದ ಹೈದರ್ ಬೆಳ್ಳಾರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಟಿಪ್ಪುಸುಲ್ತಾನರ ಕೊಡುಗೆಗಳನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ ಕನ್ನಡ ಪ್ರೇಮಿಯಾಗಿದ್ದ ಮೈಸೂರು ಪ್ರಾಂತ್ಯದ ದಲಿತರು ರೈತರು ಮತ್ತು ಜನಸಾಮಾನ್ಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಸಂಪತ್ಬರಿತ ಸಾಮ್ರಾಜ್ಯವನ್ನು ನಿರ್ಮಿಸಿದ ಮತ್ತು ಸ್ವತಹ ರಾಜನಾಗಿದ್ದು ಕೊಂಡೆ ಬ್ರಿಟಿಷರ ವಿರುದ್ಧ ಯುದ್ಧದ ಮೈದಾನದಲ್ಲಿ ಹೋರಾಟವನ್ನು ನಡೆಸಿ ವೀರಮರಣವನ್ನಪ್ಪಿದ ಟಿಪ್ಪು ಸುಲ್ತಾನರ ಕುರಿತು ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಕೊಡುಗೆಗಳನ್ನು ನೀಡಲು ಸಾಧ್ಯವಾಗದೆ ಬ್ರಿಟಿಷರ ಪಾದ ಸೇವೆ ಮಾಡಿದ ಸಂಘಪರಿವಾರದವರು ಟಿಪ್ಪು ವಿನ ಬಗ್ಗೆ ಕೇವಲವಾಗಿ ಮಾತನಾಡಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಅಸ್ಪೃಶ್ಯತೆಯನ್ನು ಪೋಷಣೆ ಮಾಡಿ ದಲಿತ ಮತ್ತು ದಮನಿತ ಸಮುದಾಯ ಗಳನ್ನು ತಮ್ಮ ಗುಲಾಮರಂತೆ ನೋಡಿಕೊಳ್ಳುತ್ತಿದ್ದ ಸಂಘಪರಿವಾರದ ಪೂರ್ವಜರ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಎಂಬ ಕಾರಣಕ್ಕೆ ಟಿಪ್ಪು ಸುಲ್ತಾನ ರನ್ನು ದೇಶದ್ರೋಹಿ ಎಂದು ಸಂಘಪರಿವಾರವು ಚಿತ್ರೀಕರಿಸುತ್ತಿದ್ದಾರೆಂದು ದೇಶದ ಜನ ಚೆನ್ನಾಗಿ ಅರಿತಿದ್ದಾರೆ.

ಚರಿತ್ರೆಯನ್ನು ತಿರುಚುವುದರಲ್ಲಿ. ನಿಸ್ಸೀಮ ರಾಗಿರುವ ಸಂಘಪರಿವಾರದ ಸುಳ್ಳು ಪ್ರಚಾರ ಗಳನ್ನು ಮುಂದಿನ ದಿನಗಳಲ್ಲಿ ಜನಜಾಗೃತಿಯ ಮೂಲಕ ಟಿಪ್ಪುವಿನ ನೈಜ ಚರಿತ್ರೆಯನ್ನು ಜನರ ಮುಂದಿಡಲು ಟಿಪ್ಪು ಸುಲ್ತಾನ್ ಅಭಿಮಾನಿ ಬಳಗ ಬೆಳ್ಳಾರೆ ಯೋಜನೆ ರೂಪಿಸುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.