Home News Viral News: ಮನೆಯ ಗೋಡೆ ಒಡೆಯುವಾಗ ಮನೆಯೊಡೆಯನ ಬೆಡ್ ರೂಂ ನಲ್ಲಿತ್ತು 5 ನಾಗರಹಾವು!!

Viral News: ಮನೆಯ ಗೋಡೆ ಒಡೆಯುವಾಗ ಮನೆಯೊಡೆಯನ ಬೆಡ್ ರೂಂ ನಲ್ಲಿತ್ತು 5 ನಾಗರಹಾವು!!

Viral News

Hindu neighbor gifts plot of land

Hindu neighbour gifts land to Muslim journalist

ಹಳೆ ಮನೆಯ ಗೋಡೆಯೊಂದನ್ನು ಒಡೆಯುವಾಗ ಕಾರ್ಮಿಕರು ಎಡವಿ ನಾಗರಹಾವಿನ ಮೇಲೆ ಬಿದ್ದಿದ್ದಾರೆ.

ಪಾಟ್ನಾ: ಹಾವು ಎಂದರೆ ಯಾರಿಗೆ ಭಯವಿಲ್ಲ ಹೇಳಿ, ಎಲ್ಲರೂ ಹಾವಿಗೆ ಹೆದರುತ್ತಾರೆ. ಅದರಲ್ಲೂ ನಾಗರಹಾವು ಭಯನಾಕವಾದದ್ದು.ಭಾರತದಲ್ಲಿ ನಾಗರಹಾವನ್ನು ಪೂಜಿಸುತ್ತಾರೆ. ಆದರೆ ನಿಜವಾಗಿ ಕಂಡರೆ ಭಯದಿಂದ ಹೆದರುತ್ತಾರೆ. ಒಂದು ಹಾವಿಗೆ ಹೆದರುವ ನಾವು ಇನ್ನೂ 5 ಹಾವುಗಳನ್ನು ಒಂದೇ ಕಡೆ ನೋಡಿದರೆ ಹೇಗಿರುತ್ತದೆ.

ಇದನ್ನೂ ಓದಿ: AC System: ಬೇಸಿಗೆ ಆರಂಭವಾಗ್ತಾ ಇದೆ, ಎಸಿ ಆನ್ ಮಾಡುವ ಮುನ್ನ ಈ ಟಿಪ್ಸ್ ಆಫ್ ಫಾಲೋ ಮಾಡಲೇಬೇಕು

ಬಿಹಾರ ರಾಜ್ಯದ ದುಮರಿ ಅಡ್ಡಾ ಪ್ರಾಂತ್ಯದ ಚಾಪ್ರಾ ಸದರ್ ಬ್ಲಾಕ್ ಎಂಬಲ್ಲಿ ಬಬನ್ ಕುಮಾರ್ ಸಿಂಗ್ ಎಂಬ ಶಿಕ್ಷಕರ ಮನೆಯಲ್ಲಿ ಬೆಡ್‌ರೂಂನಲ್ಲಿ ಐದು ನಾಗರಹಾವುಗಳು ಕಾಣಿಸಿಕೊಂಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ನಾಗರಹಾವುಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಬಬನ್ ಅವರು ತಮ್ಮ ಹಳೆಯ ಮನೆಯನ್ನು ಧ್ವಂಸ ಮಾಡಿ ಹೊಸ ಮನೆಯನ್ನು ಕಟ್ಟಲು ಕಟ್ಟಡ ಒಡೆಯುತ್ತಿದ್ದಾಗ ಕಾರ್ಮಿಕನೊಬ್ಬ ಹಾವುಗಳ ಮೇಲೆ ಎಡವಿ ಬಿದ್ದಿದ್ದಾನೆ.

ಮಲಗುವ ಕೋಣೆಯಲ್ಲಿ 5 ಹಾವು

ಇದನ್ನು ಕಂಡ ಕಾರ್ಮಿಕ ಬೆಚ್ಚಿದ್ದಾನೆ. ನಂತರ ಉಳಿದ ನಾಲ್ಕು ಹಾವುಗಳನ್ನು ನೆಲದಲ್ಲಿ ಕಾರ್ಮಿಕರು ಪತ್ತೆ ಮಾಡಿದ್ದಾರೆ. ಈ ವಿಷಯ ತಿಳಿದ ಬಬನ್ ಆತಂಕಕ್ಕೆ ಒಳಗಾಗಿದ್ದಾರೆ.

ನಾಗರಹಾವುಗಳು ಪತ್ತೆಯಾದ ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಮನೀಶ್ ಕುಮಾರ್ ಮತ್ತು ಅವರ ತಂಡ ಎಲ್ಲಾ ನಾಗರಹಾವುಗಳನ್ನು ರಕ್ಷಿಸಿತು. ನಂತರ ಅವುಗಳು ವಾಸಿಸಲು ಯೋಗ್ಯವಾದ ಸ್ಥಳಕ್ಕೆ ಬಿಟ್ಟಿದ್ದಾರೆ.

ಮನೆಯ ಸುತ್ತ ಸೇರಿದ ಜನರು

ಅರಣ್ಯ ಸಿಬ್ಬಂದಿ ಹಾವುಗಳನ್ನು ಸುರಕ್ಷಿತವಾಗಿ ನೆಲದಡಿಯಿಂದ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಮನೀಶ್ ಹಾಗೂ ಅವರ ತಂಡ ಹಾವುಗಳಿಗೆ ಹಾನಿಯಾಗದಂತೆ ರಕ್ಷಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯರೆಲ್ಲಾ ಮನೆಯ ಸುತ್ತ ಜಮಾಯಿಸಿ, ಮೊಬೈಲ್‌ನಲ್ಲಿ ಹಾವುಗಳ ರಕ್ಷಣಾ ಕಾರ್ಯದ ದೃಶ್ಯ ಸೆರೆ ಹಿಡಿದಿದ್ದಾರೆ.