Home Interesting ಸಿಲಿಕಾನ್ ಸಿಟಿಯಲ್ಲಿ ಮೇಳೈಸಿದ ಓಲ್ಡ್ ಗೋಲ್ಡ್ ಮಾಡೆಲ್ ಕಾರುಗಳು| ವಿಂಟೇಜ್ ಕಾರುಗಳನ್ನು ನೋಡಿ ಫಿದಾ ಆದ್ರೂ...

ಸಿಲಿಕಾನ್ ಸಿಟಿಯಲ್ಲಿ ಮೇಳೈಸಿದ ಓಲ್ಡ್ ಗೋಲ್ಡ್ ಮಾಡೆಲ್ ಕಾರುಗಳು| ವಿಂಟೇಜ್ ಕಾರುಗಳನ್ನು ನೋಡಿ ಫಿದಾ ಆದ್ರೂ ಪ್ಯಾಟೆ ಮಂದಿ

Hindu neighbor gifts plot of land

Hindu neighbour gifts land to Muslim journalist

ಹಳೆಯ ವಸ್ತುಗಳು ಯಾವತ್ತಿಗೂ ಮಾಣಿಕ್ಯ ಇದ್ದಂತೆ. ಯಾಕೆಂದರೆ ಹಿಂದಿನ ಕಾಲದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ವಾಹನದ ಬಗ್ಗೆ ಹೇಳುವುದಾದರೆ ಎಷ್ಟೇ ಸಾವಿರಾರು ಕಾರುಗಳ ಬಿಡುಗಡೆ ಆದರೂ ಸಹ ಹಳೇ ಕಾರುಗಳ ಗತ್ತು ಕಮ್ಮಿ ಆಗಲ್ಲ.

ಸದ್ಯ ಜನವರಿ 29 ರಂದು ಭಾನುವಾರ ವಿಂಟೇಜ್ ಬ್ಯೂಟೀಗಳು ಹವಾ ಎಬ್ಬಿಸಿದೆ. ಒಂದಕ್ಕಿಂತ ಒಂದು ತಾನು ಮೇಲು ತಾನು ಮೇಲು ಎಂದು ಬೀಗುತ್ತಿದ್ದವು. ಪ್ರಸ್ತುತ ಇಲ್ಲಿ 1935 ರ ಮಾಡೆಲ್‌ಗಳಿಂದ ಹಿಡಿದು 1980ರ ತನಕ ಎಲ್ಲಾ ರೀತಿಯ ಟೂ ವೀಲರ್ ಹಾಗೂ ಫೋರ್​ ವೀಲರ್ ಗಾಡಿಗಳಿದ್ವು. ವಿವಿಧ ಮಾದರಿಯ 30 ಕಾರುಗಳು, ಹಳೆ ಮಾದರಿಯ 25 ಬೈಕ್‌ಗಳು ಎಲ್ಲರ ಗಮನ ಸೆಳೆದ್ವು.
1935 ರ ಮಾಡೆಲ್‌ಗಳಿಂದ ಹಿಡಿದು 1980ರ ತನಕ ಎಲ್ಲಾ ರೀತಿಯ ಟೂ ವೀಲರ್ ಹಾಗೂ ಫೋರ್​ ವೀಲರ್ ವಾಹನಗಳಿದ್ದವು. ವಿವಿಧ ಮಾದರಿಯ 30 ಕಾರುಗಳು, ಹಳೆ ಮಾದರಿಯ 25 ಬೈಕ್‌ಗಳು ಎಲ್ಲರ ಗಮನ ಸೆಳೆದಿದೆ.

ಸದ್ಯ ರೋಲ್ಸ್ ರಾಯ್, ಮರ್ಸಿಡಿಸ್, ಅಂಬಾಸಿಡರ್ ಈ ಓಲ್ಡ್ಡ್ ಬ್ಯೂಟಿಗಳು ಇಷ್ಟು ದಿನ ಎಲಿದ್ವೋ ಗೊತ್ತಿಲ್ಲ. ಒಂದೇ ಸಮನೆ ಒಂದರ ಹಿಂದೆ ಒಂದ್ರಂತೆ ಎಂಟ್ರಿ ಕೊಟ್ಟಿದ್ವು. ಹೀಗಾಗಿ ಜನ ಗಾಡಿಗಳಲ್ಲಿ ಕೂತು ಸಖತ್ ಸವಾರಿ ಹೊಡೆದರು.

ಸದ್ಯ ವಿಂಟೇಜ್ ಕಾರು ಝಲಕ್ ಯಾವತ್ತಿಗೂ ಕಮ್ಮಿ ಆಗಲ್ಲ. ಇದೀಗ ಬೆಂಗಳೂರಿನ ಗಾಲ್ಫ್‌ ರಸ್ತೆಯಲ್ಲಿ ಹಳೇ ಮಾಡೆಲ್​ನ ಟೂ ವೀಲರ್ ಹಾಗೂ ಕಾರುಗಳನ್ನ ಪ್ರದರ್ಶನ ಏರ್ಪಡಿಸಲಾಗಿತ್ತು. ಐತಿಹಾಸಿಕ ವಾಹನಗಳ ಫೆಡರೇಷನ್ ಇಂತಹದೊಂದು ಕಾರ್ ಹಾಗೂ ಬೈಕ್ ಶೋ ಆಯೋಜನೆ ಮಾಡಿತ್ತು.

ಇನ್ನು ಬೈಕ್ ಪ್ರಿಯರಿಗಾಗಿ ಈ ಪ್ರದರ್ಶನದಲ್ಲಿ 50-60ರ ದಶಕದಲ್ಲಿ ಬೈಕ್‌ ರೇಸರ್‌ಗಳ ಕ್ರೇಜ್ ಆಗಿದ್ದ ಕಾಂಟಿನೆಂಟಲ್ ಜಿಟಿ ಬೈಕ್, ರಾಯಲ್ ಎನ್‌ಫಿಲ್ಡ್ , RX-100 ಹೀಗೆ ಹಲವು ಬೈಕ್‌ಗಳು ಬೈಕ್ ಪ್ರಿಯರ ಮನಸೆಳೆದ್ವು. ಈ ಗುಂಪು ಗುಂಪು ಬೈಕ್ ಗಳನ್ನು ನೋಡಿ ಮೈ ರೋಮಾಂಚನ ಗೊಳ್ಳುವುದು ಖಂಡಿತಾ.

ಒಟ್ಟಿನಲ್ಲಿ ಈ ಓಲ್ಡ್ ಗೋಲ್ಡ್ ಡಿಮ್ಯಾಂಡ್ ತರ ಈ ವಾಹನಗಳಿಗೆ ಭರ್ಜರಿ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಕಣ್ಣು ಮಿಟುಕಿಸುತ್ತ ನೋಡಿದ್ದೇ ನೋಡಿದ್ದು, ವಾವ್ ಅಂದಿದ್ದೇ ಅಂದಿದ್ದು. ಅಂತೂ ಓಲ್ಡ್ ಸ್ಟಾಕ್ ವಾಹನ ನೋಡಿ ಜನರು ಫುಲ್ ಖುಷಿಗೊಂಡಿದ್ದಾರೆ.