Home National ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ | ಜನವರಿ 1 ಕ್ಕೆ 10 ವರ್ಷ ಪೂರೈಸುವ ಎಲ್ಲಾ...

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ | ಜನವರಿ 1 ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು !!?

Hindu neighbor gifts plot of land

Hindu neighbour gifts land to Muslim journalist

ವಾಹನ ಸವಾರರಿಗೊಂದು ದೆಹಲಿ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರುತ್ತಿರುವುದರಿಂದಾಗಿ ಇದನ್ನು ತಡೆಗಟ್ಟಲು ದೆಹಲಿ ಸರ್ಕಾರ ಮುಂದಾಗಿದ್ದು, ಜನವರಿ 1 ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯ ನಿರ್ದೇಶನದ ಪ್ರಕಾರ, ದೆಹಲಿ ಸರ್ಕಾರ ಜನವರಿ 1, 2022 ರಂದು 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ತಯಾರಿ ನಡೆಸಿದೆ. ಆದರೆ ಈ ವಾಹನಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ (NOC) ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಹಾಗಾಗಿ ಈ ವಾಹನಗಳನ್ನು ಬೇರೆ ಕಡೆಗಳಲ್ಲಿ ನೋಂದಣಿ ಮಾಡಿಕೊಂಡು ಬಳಸಬಹುದಾಗಿದೆ.

ಎನ್‍ಜಿಟಿ ಪ್ರಕಾರ, ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ನೋಂದಣಿ ಮತ್ತು ಓಡಾಟದ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದೆ. ಜುಲೈ 2016 ರಲ್ಲಿ ಎನ್‍ಜಿಟಿ ನೀಡಿದ ಆದೇಶದಲ್ಲಿ, 10 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸುವ ನಿರ್ದೇಶನವನ್ನು ತಪ್ಪದೆ ಜಾರಿಗೊಳಿಸಬೇಕು ಎಂದು ಮತ್ತೊಮ್ಮೆ ತಾಕೀತು ಮಾಡಿದೆ.