Home Latest Health Updates Kannada Vastu Tips : ಮನೆ, ಆಫೀಸ್ ನ ಈ ದಿಕ್ಕಿನಲ್ಲಿ ಕಂಪ್ಯೂಟರ್ ಇಟ್ಟರೆ, ಯಶಸ್ಸು ಸಿಗುತ್ತೆ!

Vastu Tips : ಮನೆ, ಆಫೀಸ್ ನ ಈ ದಿಕ್ಕಿನಲ್ಲಿ ಕಂಪ್ಯೂಟರ್ ಇಟ್ಟರೆ, ಯಶಸ್ಸು ಸಿಗುತ್ತೆ!

vastu tips, tv, office tv, home tv

Hindu neighbor gifts plot of land

Hindu neighbour gifts land to Muslim journalist

ಮನೆ ಕಟ್ಟಬೇಕಾದರೆ ಬಾಗಿಲು ಈ ದಿಕ್ಕಿನಲ್ಲಿರಬೇಕು. ಕೋಣೆಗಳು ಈ ದಿಕ್ಕಿಗೆ ಇರಬೇಕು ಎಂದು ಯೋಜನೆ ಹಾಕಿ ಮನೆಕಟ್ಟುತ್ತಾರೆ. ಯಾಕಂದ್ರೆ ವಾಸಿಸುವ ಜನರಿಗೆ ಒಳಿತಾಗಲೆಂದು, ನೆಮ್ಮದಿ, ಐಶ್ವರ್ಯ, ಸಂತೋಷ ನೆಲೆಸಲೆಂದು. ಹಾಗೆಯೇ ಮನೆ ಅಥವಾ ಕಛೇರಿಯಲ್ಲಿ ಕಂಪ್ಯೂಟರ್ ಇಡುವಾಗ ಕೆಲವೊಂದು ದಿಕ್ಕಿನಲ್ಲಿ ಮಾತ್ರ ಇಡಬೇಕು. ಆ ದಿಕ್ಕಿನಲ್ಲಿ ಇಟ್ಟರೆ ಮಾತ್ರ ನಿಮಗೆ ಯಶಸ್ಸು ಲಭಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಕೆಲವೊಂದು ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಒಳಿತು. ಹಾಗೆಯೇ ಇನ್ನೂ ಕೆಲವೊಂದು ದಿಕ್ಕಿನಲ್ಲಿ ಕೆಲವು ವಸ್ತುಗಳಿಟ್ಟರೆ ಭಾರೀ ನಷ್ಟ ಸಂಭವಿಸುತ್ತದೆ ಎಂದಿದೆ. ಹಾಗೆಯೇ ಕಂಪ್ಯೂಟರ್ ಅನ್ನು ಈ ದಿಕ್ಕಿನಲ್ಲಿಟ್ಟರೆ ನಿಮಗೆ ಒಳಿತಾಗಲಿದೆ. ಯಾವ ದಿಕ್ಕು? ಇಲ್ಲಿದೆ ಮಾಹಿತಿ.

ನಿಮ್ಮ ಮನೆ ಅಥವಾ ಆಫೀಸ್ ನಲ್ಲಿ ಕಂಪ್ಯೂಟರ್ ಅನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಇದರಿಂದ ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಕಂಪ್ಯೂಟರ್ ವೃತ್ತಿಯಲ್ಲಿರುವವರಿಗೆ ಇದು ತುಂಬಾ ಅವಶ್ಯಕ. ಉತ್ತರ ದಿಕ್ಕಿನಲ್ಲಿ ಇರಿಸಿ ಕೆಲಸ ಮಾಡುವುದರಿಂದ
ಏಕಾಗ್ರತೆ ಹಾಗೂ ವೃತ್ತಿ ಜೀವನ ಚೆನ್ನಾಗಿರುತ್ತದೆ. ಅಲ್ಲದೆ, ಕೆಲಸಕ್ಕೆ ಯಾವುದೇ ಅಡೆತಡೆಗಳು ಉಂಟಾಗೋದಿಲ್ಲ.

ಇನ್ನು ಕಂಪ್ಯೂಟರ್ ಅನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬಹುದು. ಇಲ್ಲಿ ಇಟ್ಟರೂ ಯಶಸ್ಸು ನಿಮ್ಮ ಪಾಲಿಗೆ ಒದಗುತ್ತದೆ.
ಈ ದಿಕ್ಕಿನ ಪ್ರದೇಶವು ಮಕ್ಕಳಿಗೆ ಕಂಪ್ಯೂಟರ್ ಅಧ್ಯಯನಕ್ಕೆ ಉತ್ತಮವಾಗಿದೆ. ಇಲ್ಲಿ ಮಾಡುವ ಕೆಲಸ ಮಕ್ಕಳಲ್ಲಿ ಧ್ಯಾನದ ಒಲವನ್ನು ಹೆಚ್ಚಿಸುತ್ತದೆ. ಏಕಾಗ್ರತೆ ವೃದ್ಧಿಯಾಗುತ್ತದೆ. ಇದು ಕಂಪ್ಯೂಟರ್ ಕೆಲಸ ಮಾಡಲು ಉತ್ತಮ ದಿಕ್ಕಾಗಿದೆ.

ನೀವು ಕಂಪ್ಯೂಟರ್ ಅನ್ನು ಸಂಗೀತಕ್ಕಾಗಿ ಅಥವಾ ಮನೆ, ಕಚೇರಿಯಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ ಬಳಸುತ್ತಿದ್ದರೆ, ಪೂರ್ವದಿಂದ ಈಶಾನ್ಯದ ದಿಕ್ಕಿನ ಪ್ರದೇಶವು ಉತ್ತಮ. ಪೂರ್ವ ಮತ್ತು ಈಶಾನ್ಯದ ದಿಕ್ಕಿನಲ್ಲಿ ಕಂಪ್ಯೂಟರ್ ಇಟ್ಟರೆ
ತುಂಬಾ ಪ್ರಯೋಜನ ಒದಗಲಿದೆ. ವೃತ್ತಿ ಜೀವನ ಸುಗಮವಾಗಲಿದೆ. ಹಾಗೂ ಸಂಗೀತದ ಆಸಕ್ತಿ ಒಲಿದು ಬರುತ್ತದೆ.

ಕಂಪ್ಯೂಟರ್‌ನಲ್ಲಿ ಧಾರ್ಮಿಕ ಅಥವಾ ಸಂಬಂಧಿತ ಕೆಲಸ ಮಾಡುವವರಿಗೆ, ದಕ್ಷಿಣ ದಿಕ್ಕು ಒಳಿತು. ದಕ್ಷಿಣ ದಿಕ್ಕಿನಲ್ಲಿ ಕಂಪ್ಯೂಟರ್ ಇರಿಸಿ ಕೆಲಸ ಮಾಡಿದರೆ ತುಂಬಾ ಒಳ್ಳೆಯದು.
ಈ ದಿಕ್ಕಿನ ಕ್ಷೇತ್ರವು ಅವರಲ್ಲಿ ಸಾಂತ್ವನದ ಜೊತೆಗೆ ಅರಿವನ್ನು ತರುತ್ತದೆ. ಸಮಾಜದಲ್ಲಿ ಘನತೆ, ಗೌರವ ಒದಗಿಸುತ್ತದೆ. ಈ ದಿಕ್ಕಿನಲ್ಲಿ ಇಟ್ಟರೆ ಜೀವನದಲ್ಲಿ ಒಳಿತಾಗಲಿದೆ.