Home News Electric scooter offer : ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ ಆಫರ್ | ಫುಲ್...

Electric scooter offer : ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ ಆಫರ್ | ಫುಲ್ ಚಾರ್ಜ್‌ನಲ್ಲಿ 137 ಕಿಮೀ ಮೈಲೇಜ್ ನೀಡುತ್ತೇ ಈ ಸ್ಕೂಟರ್ !!

Hindu neighbor gifts plot of land

Hindu neighbour gifts land to Muslim journalist

ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಹೆಚ್ಚಿದೆ. ಎಲೆಕ್ಟ್ರಿಕ್ ಕಾರು, ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಅಂತೆಯೇ ಕಂಪನಿಗಳು ಕೂಡ ವಿಭಿನ್ನ ವಿನ್ಯಾಸದ, ಆಕರ್ಷಣೀಯವಾದ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ನೀಡಲಾಗುತ್ತಿದೆ. ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಕಿನಾವಾ ಆಟೋಟೆಕ್ ತನ್ನ ಗ್ರಾಹಕರಿಗೆ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಸ್ಕೂಟರ್ ಖರೀದಿಸಲು ಬಯಸುವವರಿಗೆ ಇದು ಉತ್ತಮ‌ ಅವಕಾಶವಾಗಿದೆ.

ಓಕಿನಾವಾ ಆಟೋಟೆಕ್ ಕಂಪನಿಯು ತನ್ನ ಆಯ್ದ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಭರ್ಜರಿ ಆಫರ್ ನೀಡುತ್ತಿದೆ. ಈ ವ್ಯಾಲೆಂಟೈನ್ಸ್ ಡೇ ಆಫರ್ ಅಡಿಯಲ್ಲಿ, ಕಂಪನಿಯ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು 12,500 ರೂ.ವರೆಗಿನ ಡಿಸ್ಕೌಂಟ್ ನಲ್ಲಿ ಗ್ರಾಹಕರು ಖರೀದಿಸಬಹುದು. ಈ ಡಿಸ್ಕೌಂಟ್ ಆಫರ್ ಫೆಬ್ರವರಿ 15 ರವರೆಗೆ ಮಾತ್ರ ಲಭ್ಯವಾಗಲಿದೆ. ಹಾಗಾಗಿ ಸ್ಕೂಟರ್ ಖರೀದಿಸಲು ಬಯಸುವವರು ಇಂದೇ ನಿಮ್ಮದಾಗಿಸಿ.

ಓಕಿನಾವಾ ವ್ಯಾಲೆಂಟೈನ್ಸ್ ಡೇ ಆಫರ್ iPraise+, PraisePro ಮತ್ತು Ridge+ ನಂತಹ ಹೆಚ್ಚಿನ ವೇಗದ ಮಾದರಿಗಳು ಮತ್ತು R30 ಮತ್ತು Lite ನಂತಹ ಕಡಿಮೆ ವೇಗದ ಮಾದರಿಗಳ ಮೇಲೆ ಕೊಡುಗೆ ಇರಲಿದೆ ಎಂದು ಕಂಪನಿ ತಿಳಿಸಿದೆ.

iPraise+ ಎಲೆಕ್ಟ್ರಿಕ್ ಸ್ಕೂಟರ್‌ : iPraise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 145,965 ರೂ. ಆಗಿದ್ದು, ಇದು ಫುಲ್ ಚಾರ್ಜ್‌ನಲ್ಲಿ 137KM ಕ್ರಮಿಸುತ್ತದೆ. ಆದರೆ, ವ್ಯಾಲೆಂಟೈನ್ಸ್ ಡೇ ಆಫರ್ ನಲ್ಲಿ ಈ ಸ್ಕೂಟರ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. 3.6 kWh ಬ್ಯಾಟರಿ ಹೊಂದಿದ್ದು, ಇದರ ಗರಿಷ್ಠ ವೇಗ ಗಂಟೆಗೆ 50 ಕಿಮೀ. ಆಗಿದೆ. ಈ ಸ್ಕೂಟರ್ 4-5 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪನಿ ತಿಳಿಸಿದೆ.

iPraise Pro ಎಲೆಕ್ಟ್ರಿಕ್ ಸ್ಕೂಟರ್ : ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 99,645 ರೂ. ಆಗಿದ್ದು, ಆಫರ್ ನಿಂದ ಇನ್ನೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಸ್ಕೂಟರ್ 2.08 kWh ಬ್ಯಾಟರಿ ಹೊಂದಿದ್ದು, ಸಂಪೂರ್ಣ ಚಾರ್ಜ್ ಆಗಲು 2-3 ಗಂಟೆ ತೆಗೆದುಕೊಳ್ಳುತ್ತದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 50 ಕಿಮೀ. ಆಗಿದ್ದು, ಪುಲ್ ಚಾರ್ಜ್‌ನಲ್ಲಿ 81KM ಚಲಿಸಬಲ್ಲದು ಎಂದು ಕಂಪನಿ ಹೇಳಿದೆ.