Home News Tragedy: ಮನೆಗೆ ನುಗ್ಗಿದ ನಾಗರಹಾವನ್ನು ಹೊಗೆ ಹಾಕಿ ಓಡಿಸಲು ಯತ್ನ- ಕೆಲವೇ ಹೊತ್ತಲ್ಲಿ ಮನೆಯೇ ಸುಟ್ಟು...

Tragedy: ಮನೆಗೆ ನುಗ್ಗಿದ ನಾಗರಹಾವನ್ನು ಹೊಗೆ ಹಾಕಿ ಓಡಿಸಲು ಯತ್ನ- ಕೆಲವೇ ಹೊತ್ತಲ್ಲಿ ಮನೆಯೇ ಸುಟ್ಟು ಸಂಪೂರ್ಣ ಭಸ್ಮ !!

Uttarpradesh
Image source: ಉದಯವಾಣಿ

Hindu neighbor gifts plot of land

Hindu neighbour gifts land to Muslim journalist

Uttarpradesh: ಉತ್ತರಪ್ರದೇಶದಲ್ಲಿ (Uttarpradesh)ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು (Cobra) ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದು, ಆದರೆ ಈ ಹೊಗೆಯಿಂದ ಇಡೀ ಮನೆಯೇ(Home)ಭಸ್ಮವಾದ ಘಟನೆ ವರದಿಯಾಗಿದೆ.

ಉತ್ತರಪ್ರದೇಶದ ಬಂದ ಎಂಬಲ್ಲಿ ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್‍ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ನೆಲೆಸಿದ್ದರು. ಬೆಳಗ್ಗೆ 10 ಗಂಟೆಯ ವೇಳೆಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು(Snake)ಸೇರಿಕೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಮನೆ ಮಂದಿಗೆ ಈ ವಿಚಾರ ತಿಳಿಸಿದ್ದು, ಎಲ್ಲರೂ ಸೇರಿ ಹಾವನ್ನು ಓಡಿಸುವುದಕ್ಕೆ ಹರಸಾಹಸಪಟ್ಟಿದ್ದಾರೆ.

ಆದರೂ ಕೂಡ ಹಾವು ಮಾತ್ರ ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರಂತೆ. ಆದರೆ, ಈ ಹೊಗೆಯಿಂದ ಇಡೀ ಮನೆ ಸಂಪೂರ್ಣ ಬೆಂಕಿ ಹಬ್ಬಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದು ಖಾಕಿ ಪಡೆ, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದು, ಆದರೆ ಅಷ್ಟರಲ್ಲಿ ಮನೆಯಲ್ಲಿದ್ದ ನಗದು, ಚಿನ್ನಾಭರಣ ಮಾತ್ರವಲ್ಲದೇ ಹಲವಾರು ಕ್ವಿಂಟಾಲ್ ಇದ್ದ ಧಾನ್ಯಗಳು ಭಸ್ಮವಾಗಿಬಿಟ್ಟಿದೆ.

ಇದನ್ನೂ ಓದಿ: Mangaluru: ಡಾ.ಮೋಹನ ಆಳ್ವರಿಗೆ ಪಿತೃವಿಯೋಗ! ಮಿಜಾರುಗುತ್ತು ಆನಂದ ಆಳ್ವ (106) ನಿಧನ!