Home News Uttar Pradesh : ಮದುವೆಗೆ ಒಲ್ಲೆ ಎಂದ ಪ್ರಿಯತಮ – ಆತನ ಖಾಸಗಿ ಅಂಗವನ್ನೇ ಇಲ್ಲವೆನಿಸಿದ...

Uttar Pradesh : ಮದುವೆಗೆ ಒಲ್ಲೆ ಎಂದ ಪ್ರಿಯತಮ – ಆತನ ಖಾಸಗಿ ಅಂಗವನ್ನೇ ಇಲ್ಲವೆನಿಸಿದ ಪ್ರಿಯತಮೆ !!

Hindu neighbor gifts plot of land

Hindu neighbour gifts land to Muslim journalist

Uttar Pradeah: ಸುಮಾರು ಎಂಟು ವರ್ಷಗಳಿಂದ ಪ್ರೀತಿಸಿದ ಪ್ರಿಯತಮ ಮದುವೆಗೆ ಒಪ್ಪದೆ ಬೇರೊಂದು ಹುಡುಗಿಯೊಂದಿಗೆ ಮದುವೆಯಾಗಲು ಮುಂದಾದ ವಿಚಾರ ತಿಳಿಯುತ್ತಿದ್ದಂತೆ ಪ್ರಿಯತಮೆಯು ಮದುವೆಗೆ ಒಲ್ಲೆಯಿಂದ ಪ್ರಿಯತಮನ ಖಾಸಗಿ ಅಂಗವನ್ನೇ ಕತ್ತರಿಸಿ ಬಿಟ್ಟಿದ್ದಾಳೆ.

 

ಹೌದು, ಉತ್ತರ ಪ್ರದೇಶದ(Uttar Pradesh)ಮುಜಾಫರ್‌ನಗರದಲ್ಲಿ ಜೋಡಿಯೊಂದು ಎಂಟು ವರ್ಷಗಳಿಂದ ಪ್ರೀತಿಸುತ್ತಿತ್ತು. ಆದರೆ ಇದೀಗ ದಿಢೀರ್ ಆಗಿ ನನಗೆ ಬೇರೆಯವರೊಂದಿಗೆ ಮದುವೆ ಫಿಕ್ಸ್ ಆಗಿದೆ ಎಂದು ಯುವಕ ಹೇಳಿದ್ದು, ಇದರಿಂದ ಸಿಟ್ಟಾದ ಯುವತಿ ಯುವಕನೊಂದಿಗೆ ಗಲಾಟೆಯಾಡಿದ್ದಾಳೆ. ಇಷ್ಟೇ ಅಲ್ಲದೇ ನನ್ನನು ಮದುವೆಯಾಗಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಳು.

 

ಈ ವಿಚಾರಕ್ಕೆ ಕೂಡ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿದೆ. ಈ ವೇಳೆ ಯುವಕ ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಈ ವೇಳೆ ಕೋಪಗೊಂಡ ಯುವತಿ, ಯುವಕನನ್ನು ಭೇಟಿಯಾಗುವಂತೆ ತಿಳಿಸಿದ್ದಾಳೆ. ಏಕಾಂತ ಪ್ರದೇಶದಲ್ಲಿ ಭೇಟಿಯಾದ ಬಳಿಕ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಹಿನ್ನಲೆಯಲ್ಲಿ ಯುವತಿ ತಾನು ತಂದಿದ್ದ ಚಾಕುವಿನಿಂದ ಯುವಕನ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ. ಬಳಿಕ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

 

 ಮತ್ತೊಂದೆಡೆ ಆ ವ್ಯಕ್ತಿ ತನ್ನ ಖಾಸಗಿ ಅಂಗಕ್ಕೆ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿದ್ದರೂ ಗೆಳತಿಯ ಕೈ ಗಾಯಕ್ಕೆ ಬಟ್ಟೆ ತೊಡಿಸಿ ಆಕೆಯ ಪ್ರಾಣ ಉಳಿಸಿದ್ದಾನೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರದೇಶವನ್ನು ತಲುಪಿದರು. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.