Home News ಉಪ್ಪಿನಂಗಡಿ | ತೋಟದಲ್ಲಿ ಅಡಿಕೆ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ, ಕಳ್ಳನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಉಪ್ಪಿನಂಗಡಿ | ತೋಟದಲ್ಲಿ ಅಡಿಕೆ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ, ಕಳ್ಳನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

Hindu neighbor gifts plot of land

Hindu neighbour gifts land to Muslim journalist

ತೋಟವೊಂದರಲ್ಲಿ ಅಡಿಕೆ ಕದಿಯುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿದ ಕಳ್ಳನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿಗೆ ಸಮೀಪದ ಬಾರ್ಯ ಗ್ರಾಮದ ಸರಳಿಕಟ್ಟೆಯಲ್ಲಿ ನಡೆದಿದೆ.

ಕಳ್ಳನನ್ನು ಪುತ್ತೂರು ಮೂಲದ ಪ್ರಕಾಶ್ ಎಂದು ಗುರುತಿಸಲಾಗಿದೆ. ಸರಳಿಕಟ್ಟೆಯ ಉಸ್ಮಾನ್ ಎಂಬವರ ತೋಟದಿಂದ ಅಡಿಕೆಗಳನ್ನು ಕದಿಯುತ್ತಿದ್ದಾಗ, ಅಡಿಕೆ ಸಮೇತ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ತಿಂಗಳ ಹಿಂದೆ ಇದೇ ಪರಿಸರದಲ್ಲಿ ಮನೆಯೊಂದರಲ್ಲಿ ದರೋಡೆ ಮಾಡಿ ಲಕ್ಷಾಂತರ ಬೆಳೆ ಬಾಳುವ ಚಿನ್ನ ಮತ್ತು ಹಣವನ್ನು ದೋಚಿದ ಕಳ್ಳರ ಕೃತ್ಯದಿಂದ ಭಯಭೀತರಾಗಿದ್ದಂತಹ ಸಂದರ್ಭದಲ್ಲಿಯೇ, ಅಡಿಕೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸೆರೆಹಿಡಿಯುವ ಮೂಲಕ ಸಾರ್ವಜನಿಕರು ಕೊಂಚ ನಿಟ್ಟುಸಿರುಬಿಟ್ಟಂತಾಗಿದೆ.

ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.