

UPI payment: ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ( UPI payment) ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ (PhonePe), ಗೂಗಲ್ ಪೇ (Google Pay), ಪೇಟಿಎಂ (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ. ಆದರೆ ಇದೀಗ RBI ಯುಪಿಐ ಬಳಕೆದಾರರಿಗೆ ಮಹತ್ವದ ಸಂದೇಶವೊಂದನ್ನು ನೀಡಿದ್ದು, ಗೂಗಲ್ ಪೇ, ಫೋನ್ ಪೇ ಬಳಕೆದಾರರೇ ನಿಮ್ಮ ದುಡ್ಡಿಗೆ ನೀವೇ ಜವಾಬ್ದಾರಿ ಎಂಬ ಸೂಚನೆಯನ್ನು ಹೊರಡಿಸಿದೆ.
ಹೌದು, ಆರ್ ಬಿ ಐ ನೀಡಿರುವ ಸೂಚನೆಯ ಪ್ರಕಾರ ಆನ್ ಲೈನ್ ನಲ್ಲಿ ಹಣ ಕಳುಹಿಸುವಾಗ ತಪ್ಪುಗಳಾದರೆ ಅದಕ್ಕೆ ನೀವೇ ಜವಾಬ್ದಾರರು. ಹೇಳಿ ಕೇಳಿ ಇದು ಡಿಜಿಟಲ್ ಯುಗ. ಹೆಚ್ಚಿನ ಜನರು ಆನ್ಲೈನ್ ಮೂಲಕವೇ ತಮ್ಮ ಹಣಕಾಸಿನ ವ್ಯಾಪಾರ ವಹಿವಾಟನ್ನು ನಿರ್ವಹಿಸುತ್ತಾರೆ. ಆನ್ಲೈನ್ ಮೂಲಕ ಹಣವನ್ನು ವರ್ಗಾಯಿಸುವಾಗ ಕೆಲವೊಮ್ಮೆ ಗೊತ್ತಿಲ್ಲದೆ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಏನು ಮಾಡಬೇಕು? ಎಂಬ ಬಗ್ಗೆ ಆರ್ ಬಿ ಐ ಇಲ್ಲಿ ತಿಳಿಸಿದೆ.
ನಿಮ್ಮ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿದೆ ಎಂದು ತಿಳಿದ ತಕ್ಷಣ ನೀವು ನಿಮ್ಮ ಬ್ಯಾಂಕ್ ನ ಬ್ರಾಂಚ್ ಗೆ ಕರೆ ಮಾಡಿ ಸಂಪೂರ್ಣ ವಿಷಯ ತಿಳಿಸಬೇಕು. ಈ ವೇಳೆ ಅವರು ಕಂಪ್ಲೇಟ್ ರೈಸ್ ಮಾಡಿ ನಿಮಗೆ ನೀಡಬಹುದು ಅಥವಾ ಗ್ರಾಹಕ ದೂರವಾಣಿಗೆ ಕರೆ ಮಾಡಿ ನಡೆದಿರುವ ಘಟನೆಯ ಬಗ್ಗೆ ವಿವರಿಸಬಹುದು.
ನೀವು ಕಳುಹಿಸಿದ ಹಣ ಆಕ್ಟಿವ್ ಇಲ್ಲದೇ ಇರುವ ಬ್ಯಾಂಕ್ ಅಕೌಂಟ್ ಗೆ ಹೋದರೆ ವಾಪಸ್ ಬರುತ್ತದೆ. ಆದರೆ ಆಕ್ಟಿವ್ ಇರುವ ಖಾತೆಗೆ ಹಣ ಹೋದರೆ ಇದಕ್ಕೆ ನೀವೇ ಜವಾಬ್ದಾರಿ ಆರ್ ಬಿ ಐ ಹೇಳುತ್ತದೆ. ಯಾವುದೇ ಖಾತೆಗೆ ಹಣ ಹಾಕುವ ಮುನ್ನ ಖಾತೆ ಸಂಖ್ಯೆ, ಐಎಫ್ ಸಿ ಸಂಖ್ಯೆ ಸರಿಯಾಗಿ ಪರಿಶೀಲನೆ ಮಾಡಿ ಹಣ ವರ್ಗಾಯಿಸಬೇಕು. ಯಾವುದೋ ಬಿಡುವಿನಲ್ಲಿ ಅಥವಾ ಅಪ್ಪಿ ತಪ್ಪಿ ಸಂಖ್ಯೆಗಳನ್ನು ಸರಿಯಾಗಿ ನಮೂದಿಸದೆ ಯಾರದ್ದೋ ಖಾತೆಗೆ ಹಣ ಹೋದರೆ ಇದು ನಿಮ್ಮದೇ ತಪ್ಪು. ಇದರ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.
ಇಂತಹ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮ ಹಣವನ್ನು ವಾಪಸ್ ನಿಮ್ಮ ಕೈಗೆ ಸೇರುವಂತೆ ಮಾಡಲು ಪ್ರಯತ್ನ ಮಾಡುತ್ತದೆಯಾದರೂ, ಇದರ ಸಂಪೂರ್ಣ ಜವಾಬ್ದಾರಿಯನ್ನು ಬ್ಯಾಂಕ್ ತೆಗೆದುಕೊಳ್ಳುವುದಿಲ್ಲ ಎಂದು RBI ನಿಯಮ ಹೇಳುತ್ತದೆ.













