Home latest ಒಲ್ಲದ ಗಂಡನಿಗೆ ಹುಟ್ಟಿದ ಹಬ್ಬದಂದೇ ಇಟ್ಟಳು ಮುಹೂರ್ತ | ಪ್ರಿಯಕರನ ಜೊತೆ ಸೇರಿ ನಡೆಸೇ ಬಿಟ್ಟಳು...

ಒಲ್ಲದ ಗಂಡನಿಗೆ ಹುಟ್ಟಿದ ಹಬ್ಬದಂದೇ ಇಟ್ಟಳು ಮುಹೂರ್ತ | ಪ್ರಿಯಕರನ ಜೊತೆ ಸೇರಿ ನಡೆಸೇ ಬಿಟ್ಟಳು ಮಾರಣಹೋಮ!!!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಕುರುಡು ಎಂಬ ಮಾತಿನಂತೆ ಮನೆಯವರ ಸಮಾಜದ ವಿರೋಧದ ನಡುವೆಯೂ ಮದುವೆಯಾಗಿ ಈ ನಡುವೆ ಮದುವೆಯಾದ ಬಳಿಕ ಈ ಬಂಧದ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಮನಸ್ತಾಪ ಉಂಟಾಗಿ ಬೀದಿಜಗಳಕ್ಕೆ ಕಾರಣವಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದರ ನಡುವೆ ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಲವ್ ಬರ್ಡ್ಸ್ ಗಳಂತೆ ಗುರುತಿಸಿಕೊಂಡು ನಾಲ್ಕು ದಿನ ಅಲೆದಾಡಿ ನಾನೊಂದು ತೀರ ನೀನೊಂದು ತೀರ ಎಂದು ದೂರಾಗುವ ಪ್ರಮೇಯ ಕೂಡ ಇದೆ.

ಪ್ರೀತಿಸಿ ಜೊತೆಗಿರುವ ವಾಗ್ದಾನ ಕೈಗೊಂಡು ಸಪ್ತಪದಿ ತುಳಿದು ಕೈ ಹಿಡಿದ ಮಡದಿಯೆ ತನ್ನ ಗಂಡನನ್ನು ಸಾವಿನ ಕದ ತಟ್ಟುವಂತೆ ಮಾಡಿದ ಘಟನೆ ವರದಿಯಾಗಿದೆ.ತುಮಕೂರು (Tumakuru) ಜಿಲ್ಲೆಯ ಕುಣಿಗಲ್ (Kunigal)ನಲ್ಲಿ ನೂರಾರು ವರ್ಷ ಜೊತೆಗಿರುವ ಕನಸು ಕಟ್ಟಿದ್ದ ಜೋಡಿಗಳ ನಡುವೆ ತಾಳಿ ಕಟ್ಟಿದ ಗಂಡನನ್ನು ಮಡದಿ ಸುಪಾರಿ ಕೊಟ್ಟು ಇಹಲೋಕದ ಯಾತ್ರೆ ಮುಗಿಸುವಂತೆ ಮಾಡಿದ ಘಟನೆ ನಡೆದಿದೆ.

ಫೆಬ್ರವರಿ 03 ರಂದು ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ತಾನು ಹುಟ್ಟಿದ ದಿನವೇ ಅನುಮಾನಸ್ಪದಾಗಿ ಮೃತ ಪಟ್ಟಿದ್ದರು ಎನ್ನಲಾಗಿದೆ. ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಬಂದಿದ್ದ ಮಂಜುನಾಥ್, ಮಧ್ಯರಾತ್ರಿ 12 ಸುಮಾರಿಗೆ ಯಾವುದೋ ಫೋನ್​ ಕರೆ ಬಂದ ಹಿನ್ನೆಲೆ ಮನೆಯಿಂದ ಆಚೆ ಬಂದಿದ್ದರು ಎನ್ನಲಾಗಿದೆ. ಹೀಗೆ ಹೋದವರು ಮರಳಿ ವಾಪಸ್ ಆಗಿಲ್ಲ ಎನ್ನಲಾಗಿದೆ. ಆದರೆ ಮರುದಿನ ಬೆಳಗ್ಗೆ ಆತನ ಮೃತದೇಹ ಗ್ರಾಮದಿಂದ ಒಂದು ಕಿಲೋಮೀಟರ್​ ದೂರದ ಇರುವ ಕಿತ್ನಾಮಂಗಲ ಕೆರೆಯಲ್ಲಿ ಪತ್ತೆಯಾಗಿದೆ.

ಕುಣಿಗಲ್​ ಪೊಲೀಸರು ಘಟನೆ ಕುರಿತಂತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣ ತನಿಖೆ ವೇಳೆ ಅಸಲಿ ರಹಸ್ಯ ಬಯಲಾಗಿದ್ದು, ತನಿಖೆ ಸಂದರ್ಭ ಮೃತ ಮಂಜುನಾಥ್​ ಪತ್ನಿ ಹರ್ಷಿತಾಳ ನಡೆ ಕಂಡು ಖಾಕಿ ಪಡೆಗೆ ಅನುಮಾನ ದಟ್ಟವಾಗಿ ಕಾಡಿತ್ತು ಎನ್ನಲಾಗಿದೆ.ಹೀಗಾಗಿ, ತನಿಖೆ ನಡೆಸಿದಾಗ ಪೊಲೀಸರಿಗೆ ಹರ್ಷಿತಾಳ ಸುಪಾರಿ ನಾಟಕದ ಕುರಿತು ಮಾಹಿತಿ ದೊರೆತಿದೆ. ತನ್ನ ದೊಡ್ಡಮ್ಮನ ಮಗ ರಘು, ರವಿಕಿರಣ್ ಎಂಬವರಿಗೆ ಹರ್ಷಿತಾ ಸುಪಾರಿ ನೀಡಿದ್ದಳು ಎನ್ನಲಾಗಿದೆ.

ಅಷ್ಟಕ್ಕೂ ಗಂಡನನ್ನೇ ಕೊಲೆ ಮಾಡುವಂತ ವಿಚಾರ ಏನಪ್ಪಾ ಎಂದು ಸೋಜಿಗವಾಗದೆ ಇರದು. ತನ್ನ ಅನೈತಿಕ ಸಂಬಂಧಕ್ಕೆ ತನ್ನ ಗಂಡನೇ ಅಡ್ಡಿಯಾಗುತ್ತಿದ್ದ ಎನ್ನುವ ಸಲುವಾಗಿ ತನ್ನ ಗಂಡನನ್ನು ಮುಗಿಸಲು ಸುಫಾರಿ ನೀಡಿದ್ದಳು ಎನ್ನಲಾಗಿದೆ. ಸುಪಾರಿ ಪಡೆದ ಆರೋಪಿಗಳು ಮಂಜುನಾಥ್ ಹುಟ್ಟುಹಬ್ಬದಂದೇ ಆತನನ್ನು ಕೊಲೆಗೈದು ಕೆರೆಗೆ ಬಿಸಾಕಿದ್ದರು ಎನ್ನಲಾಗಿದೆ. ಸದ್ಯ ಈ ಪ್ರಕರಣವನ್ನು ಕುಣಿಗಲ್ ಪೊಲೀಸರು (Police) ಬೇಧಿಸಿದ್ದು, ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ಪತ್ನಿ ಹರ್ಷಿತಾ, ರಘು, ರವಿಕಿರಣ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.