Home International ಭಾರೀ ಟ್ರಕ್ ಪಲ್ಟಿ: ಹಾಹಾರಿ ಬಂದ 25 ಕೋಟಿ ಜೇನುನೊಣಗಳು- ಗಾಬರಿ ಜತೆ ಕುತೂಹಲ!

ಭಾರೀ ಟ್ರಕ್ ಪಲ್ಟಿ: ಹಾಹಾರಿ ಬಂದ 25 ಕೋಟಿ ಜೇನುನೊಣಗಳು- ಗಾಬರಿ ಜತೆ ಕುತೂಹಲ!

Hindu neighbor gifts plot of land

Hindu neighbour gifts land to Muslim journalist

ವಾಷಿಂಗ್ಟನ್: ಅಮೆರಿಕ-ಕೆನಡಾ ಗಡಿಯ ಬಳಿ ಟ್ರಕ್ಕೊಂದು ಪಲ್ಟಿಯಾಗಿದೆ. ಟ್ರಕ್ ಪಲ್ಟಿಯಾದ ಕೂಡಲೇ ಸುಮಾರು 250 ಮಿಲಿಯನ್ ಅಂದರೆ 25 ಕೋಟಿ ಜೇನುನೊಣಗಳು ಹಾರಿ ಬಂದಿವೆ. ಆಗಾಗಿ ಆ ಸ್ಥಳ ಅಪಾಯಕಾರಿ ವಲಯವಾಗಿ ಬದಲಾಗಿದೆ.

ವಾಸ್ತವವಾಗಿ ವಾಹನವು 31,750 ಕೆಜಿಗಿಂತ ಹೆಚ್ಚು ಸಕ್ರಿಯ ಜೇನುಗೂಡುಗಳನ್ನು ಸಾಗಿಸುತ್ತಿದ್ದಾಗ ಪಲ್ಟಿಯಾಗಿದೆ. ಆಗ ಎರಡುವರೆ ಕೋಟಿ ಅಷ್ಟು ಹೆಚ್ಚಿನ ಪ್ರಮಾಣದ ಜೇನುನೊಣಗಳು ಹೊರಕ್ಕೆ ಬಿಡುಗಡೆಯಾಗಿವೆ. ಈ

ಜೇನುನೊಣಗಳು ದಾಳಿ ನಡೆಸುವ ಸಾಧ್ಯತೆ ಇದ್ದು ಅಲ್ಲಿನ ನಿವಾಸಿಗಳಿಗೆ ಅಧಿಕಾರಿಗಳು ತತ್‌ ಕ್ಷಣವೇ ಸಾರ್ವಜನಿಕ ಎಚ್ಚರಿಕೆ ನೀಡಿದ್ದಾರೆ. 250 ಮಿಲಿಯನ್ ಜೇನುನೊಣಗಳು ಗೂಡುಗಳಿಂದ ಬಿಡುಗಡೆಯಾಗಿವೆ” ಎಂದು ಬಿಬಿಸಿ ವರದಿ ಮಾಡಿದೆ.

ಹಾಲಿವುಡ್ ದುರಂತ ಚಿತ್ರವೊಂದರಲ್ಲಿನ ದೃಶ್ಯದಂತೆ ಕಾಣುತ್ತಿದ್ದು, 25ಕ್ಕೂ ಹೆಚ್ಚು ಜೇನುಸಾಕಣೆದಾರ ಮಾಸ್ಟರ್ ಗಳ ಬೆಂಬಲದೊಂದಿಗೆ ತುರ್ತು ಸಿಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಕೈ ಮೀರುವ ಮೊದಲು ಜೇನುನೊಣಗಳನ್ನು ರಕ್ಷಿಸಿ ಮತ್ತೆ ಗೂಡು ಸೇರಿಸುವು ಪ್ರಯತ್ನ ನಡೆದಿದೆ.

https://x.com/sputnik_ar/status/192861490672061658

ಮುನ್ನೆಚ್ಚರಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರಗಳು, ಜೇನು ನೊಣಗಳು ತೀವ್ರ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ, ಈ ಪ್ರದೇಶದಲ್ಲಿ ಹಾದು ಹೋಗುವುದನ್ನು ತಡೆಗಟ್ಟಿ ಎಂದು ಜನರಿಗೆ ಅಪಾಯದ ಎಚ್ಚರಿಕೆ ನೀಡಿವೆ. 25 ಕೋಟಿ ಜೇನು ನೊಣಗಳು ಇದೀಗ ಗೂಡಿನಿಂದ ಹೊರ ಬಿದ್ದ ಸುದ್ದಿಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಗಾಬರಿಯ ಜತೆಗೆ ಕುತೂಹಲವೆರಡೂ ವ್ಯಕ್ತವಾಗುತ್ತಿವೆ.