Home News ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ...

ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಪುತ್ತೂರಿನಲ್ಲಿ ಪ್ರತಿಭಟನೆ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಪುತ್ತೂರು ಮಿನಿ ವಿಧಾನ ಸೌಧ ಮುಂಭಾಗದಲ್ಲಿ ನಡೆಯಿತು.

ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬೀರ್ ಅರಿಯಡ್ಕ ರವರು ಮಾತನಾಡಿ ಬಾಂಗ್ಲಾ ದೇಶದ ಘಟನೆಯನ್ನು ನೆಪವಾಗಿಟ್ಟುಕೊಂಡು ತ್ರಿಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರ ವಿರುದ್ಧ ವಾಗಿ ಸಂಘಪರಿವಾರದ ಹಿಂಸಾತ್ಮಕ ಕೃತ್ಯಗಳು ಮರುಕಳಿಸುತ್ತಿದ್ದು, ರಾಜ್ಯದಲ್ಲಿಯೂ ತ್ರಿಶೂಲ ಧೀಕ್ಷೆ ನೀಡುವ ಮುಖಾಂತರ ಹಿಂಸಾಚಾರಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿಯೂ ಅಂತಹ ಘಟನೆಗಳು ಮುಂದುವರಿದರೆ ಸಂವಿಧಾನವು ನಮ್ಮ ಆತ್ಮ ರಕ್ಷಣೆಗಾಗಿ ನೀಡಿದ ಪ್ರತಿರೋಧದ ಮೂಲಕ ಸಂಘಪರಿವಾರವನ್ನು ಹಿಮ್ಮೆಟ್ಟಿಸುವೆವು. ಪೋಲಿಸ್ ವರಿಷ್ಠಾಧಿಕಾರಿಗಳಿಗೆ ತ್ರಿಶೂಲ ವಿತರಣೆ ಕಾನೂನಿಗೆ ವಿರುದ್ದವೇ ಎಂಬ ಕನಿಷ್ಠ ಜ್ಞಾನ ಇಲ್ಲದಿದ್ದರೆ ನಾವು ಕಾನೂನು ಹೇಳಿ ಕೊಡುತ್ತೇವೆ,
ಪ್ರತಿಭಟನೆಗಳು, ರ‌್ಯಾಲಿಗಳಿಗೆ ನಿಮ್ಮ ನ್ಯಾಯ ಪಾಲನೆಗಳು ಸಂಘಟನೆಯ ಮತ್ತು ಪಕ್ಷಗಳ ಮುಖ, ಬ್ಯಾನರ್ ನೋಡಿಯಾದರೆ ನಿಮ್ಮ ಅನುಮತಿಯ ಅವಶ್ಯಕತೆ ನಮಗೆ ಇಲ್ಲ ಎಂದು ಗುಡುಗಿದರು.

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆದ ಹಿಂಸೆಯನ್ನು ಪಾಪ್ಯುಲರ್ ಫ್ರಂಟ್ ಮೊತ್ತ ಮೊದಲು ಖಂಡಿಸಿದೆ ಆದರೆ ಅಲ್ಲಿಯ ಹಿಂಸಾಚಾರದ ನೆಪದಲ್ಲಿ ನಮ್ಮ ದೇಶದಲ್ಲಿ ಮುಸಲ್ಮಾನರನ್ನು ಗುರಿಯಾಗಿಸಿದರೆ ನಾವು ಪ್ರತಿರೋಧವನ್ನು ಒಡ್ಡಲು ತಯಾರಾಗಿದ್ದೇವೆ ಎಂದು ಹೇಳಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಸಾಗರ್ ಮಾತನಾಡಿ ತ್ರಿಪುರ ಘಟನೆಯನ್ನು ಖಂಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಪಾಪ್ಯುಲರ್ ಫ್ರಂಟ್ ಸುಳ್ಯ ಡಿವಿಝನ್ ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ, ಸವಣೂರು ಡಿವಿಝನ್ ಅಧ್ಯಕ್ಷರಾದ ರಫೀಕ್ ಎಂ ಎಸ್, ಕಬಕ ಡಿವಿಝನ್ ಅಧ್ಯಕ್ಷರಾದ ಸಮೀರ್ ಮುರ, ಕುಂಬ್ರ ಡಿವಿಝನ್ ಅಧ್ಯಕ್ಷರು ಶಾಕಿರ್ ಕಟ್ಟತ್ತಾರ್ ಸಹಿತ ಹಲವಾರು ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಫೀಕ್ ಎಂ ಎ ಕಾರ್ಯಕ್ರಮ ನಿರೂಪಿಸಿದರು.