Home News Triple Talaq: ಸ್ಕಾರ್ಪಿಯೋ ಕಾರು ಕೊಡದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ! ಮುಂದೇನಾಯ್ತು?

Triple Talaq: ಸ್ಕಾರ್ಪಿಯೋ ಕಾರು ಕೊಡದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ! ಮುಂದೇನಾಯ್ತು?

Triple Talaq

Hindu neighbor gifts plot of land

Hindu neighbour gifts land to Muslim journalist

Lucknow Triple Talaq: ವರದಕ್ಷಿಣೆ ರೂಪದಲ್ಲಿ ಕಾರು ನೀಡದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಆರೋಪದ ಮೇಲೆ ಪತ್ನಿ ದೂರು ದಾಖಲಿಸಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ಬಂದಾದಲ್ಲಿ ನಡೆದಿದೆ.

2015 ರಲ್ಲಿ ಮದುವೆಯಾಗಿದ್ದಾಗ ವರದಕ್ಷಿಣೆ ರೂಪದಲ್ಲಿ 15 ಲಕ್ಷ ರೂ. ವನ್ನು ಸಂತ್ರಸ್ತೆಯ ತಂದೆ ನೀಡಿದ್ದರು. ನಂತರ ಪತಿ ಮತ್ತು ಐವರು ಸೋದರ ಮಾವಂದಿರು ಸೇರಿ ಇತರರು ವರದಕ್ಷಿಣೆಗಾಗಿ ಇನ್ನಷ್ಟು ಬೇಡಿಕೆ ಇಡುತ್ತಿದ್ದರು. ಆದರೆ ಆ ಬೇಡಿಕೆ ಪೂರೈಸಲು ಆಗದಿದ್ದಾಗ ತನಗೆ ದೈಹಿಕ, ಮಾನಸಿಕ ಕಿರುಕುಳ, ಎರಡನೇ ಮದುವೆಯ ಬೆದರಿಕೆಗಳನ್ನು ಹಾಕಿರುವುದಾಗಿ, ಕಳೆದ ವರ್ಷ ಜುಲೈನಲ್ಲಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನು ಓದಿ: Pakistan: ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಭಿಷೇಕಕ್ಕೆ ಪಾಕಿಸ್ತಾನದ ಶಕ್ತಿಪೀಠದ ನೀರು!!!

ತವರು ಮನೆಯಲ್ಲಿದ್ದ ಮಹಿಳೆಯ ಮನೆಗೆ ಪತಿ ಬಂದು ವರದಕ್ಷಿಣೆಯಾಗಿ ಸ್ಕಾರ್ಪಿಯೋ ಕಾರನ್ನು ನೀಡಲು ಒತ್ತಾಯ ಮಾಡಿದ್ದು, ಗಲಾಟೆ ನಡೆಸಿದ್ದು, ಬೇಡಿಕೆ ತಿರಸ್ಕರಿಸಿದಾಗ ಮೂರು ಬಾರಿ ತಲಾಖ್‌ ಎಂದು ಹೇಳಿರುವುದಾಗಿ ವರದಿಯಾಗಿದೆ.

ಸಂತ್ರಸ್ತ ಮಹಿಳೆಯು ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್‌ ಘಟನೆಗೆ ಸಂಬಂಧಪಟ್ಟಂತೆ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದಾರೆ. ಈ ಕುರಿತು ಪೊಲೀಸರು ಆರೋಪಿಗಳನ್ನು ಬಂಧಿಸುವ ಎಲ್ಲಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.