Home latest ಇಬ್ಬರನ್ನೂ ಏಕಕಾಲದಲ್ಲಿ ಪ್ರೀತಿಸಿದ ಯುವತಿ | ಈ ತ್ರಿಕೋನ ಪ್ರೇಮಕಥೆಯಲ್ಲಿ ಒಂದು ಬಿಗ್ ಟ್ವಿಸ್ಟ್ !!!

ಇಬ್ಬರನ್ನೂ ಏಕಕಾಲದಲ್ಲಿ ಪ್ರೀತಿಸಿದ ಯುವತಿ | ಈ ತ್ರಿಕೋನ ಪ್ರೇಮಕಥೆಯಲ್ಲಿ ಒಂದು ಬಿಗ್ ಟ್ವಿಸ್ಟ್ !!!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಕುರುಡು ಎನ್ನುವುದು ನಿಜವಾದ ಮಾತು ಎನ್ನುವುದು ಈ ಘಟನೆಯ ಮೂಲಕ ತಿಳಿಯುತ್ತೆ. ಯಾರೋ ಬರೆದ ಸಾಲೊಂದು ಇಲ್ಲಿ ನೆನಪಿಗೆ ಬರುತ್ತೆ. ಪ್ರೀತಿ ಯಾರಿಗೂ ಮೋಸ ಮಾಡಲ್ಲ ಆದರೆ ಪ್ರೀತಿಸುವವರು ಮೋಸ ಮಾಡುತ್ತಾರೆ ಎಂದು. ಈ ಘಟನೆಯಲ್ಲಿ ನಡೆದಿದ್ದು ತ್ರಿಕೋನ ಪ್ರೇಮಕಥೆ. ಆದರೆ ಕ್ಲೈಮ್ಯಾಕ್ಸ್ ಮಾತ್ರ ಸೂಪರ್ಬ್ ಆಗಿದೆ.

ಘಟನೆ ಈ ರೀತಿ ಇದೆ : ಇಬ್ಬರು ಯುವಕರು ಜೀವಕ್ಕಿಂತ ಹೆಚ್ಚಾಗಿ ಒಂದು ಹುಡುಗಿಯನ್ನು ಪ್ರೀತಿಸಿದ್ದರು. ಹುಡುಗಿ ಕೂಡಾ ಇಬ್ಬರನ್ನೂ ಪ್ರೀತಿ ಮಾಡುತ್ತಿದ್ದಳು. ಈ ತ್ರಿಕೋನ ಪ್ರೇಮಕಥೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯುತ್ತಾ ಇರುತ್ತದೆ. ಆದರೆ ಪೊಲೀಸ್ ಮೆಟ್ಟಿಲೇರುವುದಿಲ್ಲ. ಆದರೆ ಈ ಘಟನೆ ಪೊಲೀಸ್ ಠಾಣೆ ಮೆಟ್ಟೇರಿದೆ. ಈ ಮೂಲಕ ಎಲ್ಲರ ಗಮನ ಸೆಳೆದಿದೆ.

ಇಲ್ಲಿ ಇಬ್ಬರು ಯುವಕರು ಯುವತಿಯೊಬ್ಬಳನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇಬ್ಬರಿಗೂ ಆಕೆಗೆ ಬೇರೊಬ್ಬ ಬಾಯ್‌ಫ್ರೆಂಡ್ ಇರುವ ವಿಚಾರ ಮಾತ್ರ ಗೊತ್ತಿರಲಿಲ್ಲ‌. ಯುವತಿಯು ಇಬ್ಬರೊಂದಿಗೂ ದೈಹಿಕ ಸಂಬಂಧವನ್ನೂ ಸಹ ಹೊಂದಿದ್ದಳು ಇದು ಇನ್ನೊಂದು ಅಚ್ಚರಿಯ ವಿಷಯ.

ಎರಡು ವರ್ಷದಿಂದ ಯುವತಿ ಹೀಗೆ ಇಬ್ಬರಿಗೂ ಮೋಸ ಮಾಡುತ್ತಾ ಇಬ್ಬರ ಪ್ರೇಯಸಿಯಾಗಿ ಮೋಜು ಮಸ್ತಿ ಮಾಡಿದ್ದಾಳೆ. ಆದರೆ ಈ ತ್ರಿಕೋನ ಪ್ರೇಮಕಥೆಯ ವಿಚಾರ ಶುಕ್ರವಾರ ಬೆಳಕಿಗೆ ಬಂದಿದೆ. ಅವತ್ತು ಪ್ರೇಯಸಿಯ ಜೊತೆ ಯುವಕನೊಬ್ಬನನ್ನು ನೋಡಿದ ಗೆಳೆಯನೋರ್ವ ಓರ್ವ ಪ್ರೇಮಿಗೆ ತಿಳಿಸಿದ್ದ. ಕೂಡಲೇ ಆತನ ವಿಳಾಸ ಪತ್ತೆ ಹಚ್ಚಿ ಓರ್ವ ಪ್ರೇಮಿ ಪ್ರಶ್ನಿಸಲು ಹೋದಾಗ ಯುವಕನಿಗೆ ಮತ್ತೊಬ್ಬ ಆಕೆಗೆ ನೀನು ಯಾರು ಎಂಬಲ್ಲಿಂದ ಗಲಾಟೆ ಶುರು ಆಗಿ ಕೊನೆಗೆ ಬೀದಿಯಲ್ಲೇ ಜಗಳಕ್ಕಿಳಿದಿದ್ದಾರೆ. ಈ ಇಬ್ಬರ ನಡುವಿನ ಜಗಳದಲ್ಲಿ ಕೇಳಿ ಬಂದಿದ್ದು ಒಂದೇ ಡೈಲಾಗ್ ಅವಳು ನನ್ನವಳು…ಎಂದು. ನಂತರ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋದರು.

ಅಲ್ಲಿ ಇಬ್ಬರನ್ನು ವಿಚಾರಿಸಿದಾಗ ಇಬ್ಬರ ಡೈಲಾಗ್ ಒಂದೇ ಅವಳು ನನ್ನ ಗರ್ಲ್ ಫ್ರೆಂಡ್ ಎಂಬುದು. ಇನ್ನು ಫೋಟೋಗಳನ್ನು ಪರಿಶೀಲಿಸಿದಾಗ ಇಬ್ಬರಿಗೂ ಒಬ್ಬಳೇ ಗರ್ಲ್ ಫ್ರೆಂಡ್ ಇರುವುದು ಗೊತ್ತಾಗಿದೆ. ಇದೇ ವೇಳೆ ನಮ್ಮಿಬ್ಬರ ನಡುವೆ ಲಿವಿಂಗ್ ರಿಲೇಷನ್‌ ಶಿಪ್ ಇರುವ ವಿಚಾರವನ್ನು ಯುವಕ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ. ಇದನ್ನು ಕೇಳಿದ ಮತ್ತೊರ್ವ ಪ್ರೇಮಿ ಕೂಡ ನನಗೂ ಸಂಬಂಧವಿದೆ ಎಂದಿದ್ದಾನೆ. ಈ ತ್ರಿಕೋನ ಪ್ರೇಮಕಥೆಯನ್ನು ಕೇಳಿ ಕಂಗಲಾದ ಪೊಲೀಸರು ಯುವತಿಯನ್ನು ಠಾಣೆಗೆ ಬರಲು ಹೇಳಿದ್ದಾರೆ. ಆದರೆ ಅದಾಗಲೇ ವಿಷಯ ಗೊತ್ತಾದ ಯುವತಿಯು ನಾಪತ್ತೆಯಾಗಿದ್ದಾಳೆ. ಅಂದರೆ ಇಬ್ಬರ ಪ್ರೇಮಿಗಳ ಮುದ್ದಿನ ಪ್ರೇಯಸಿ ಎಸ್ಕೇಪ್ ಆಗಿದ್ದಾಳೆ.

ಈ ಯುವಕರಿಬ್ಬರೂ ಜೈಪುರದ ಜಗತ್ಪುರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಬಂದಿದ್ದರು. ಈ ಸಂದರ್ಭದಲ್ಲಿ ಅದೇ ಪ್ರದೇಶದಲ್ಲಿ ಓದುತ್ತಿದ್ದ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಲಿವಿಂಗ್ ರಿಲೇಷನ್‌ಶಿಪ್ ತನಕ ಹೋಗಿದೆ. ಆದರೆ ಯುವತಿ ಇಬ್ಬರಿಗೂ ಗೊತ್ತಾಗದಂತೆ ಏಮಾರಿಸಿದ್ದಾಳೆ ಎಂದು ಜಗತ್ಪುರ ಪೊಲೀಸರು ತಿಳಿಸಿದ್ದಾರೆ. ಅದಕ್ಕೇ ಮೊದಲೇ ಹೇಳಿದ್ದು, ಪ್ರೀತಿಯಲ್ಲಿ ಬಿದ್ದವರಿಗೆ ಕಣ್ಣು ಕುರುಡು ಅವರಿಗೆ ಏನೂ ಕಾಣಿಸಲ್ಲ. ಹಾಗಾಗಿ ಪ್ರೀತಿ ಮಾಡಿ ಆದರೆ ಬ್ಲೈಂಡ್ ಪ್ರೀತಿ ಮಾಡಬೇಡಿ. ಇಲ್ಲದಿದ್ದರೆ ಈ ಯುವಕರಿಗೆ ಆದ ಗತಿಯೇ ನಿಮಗೂ ಆಗಬಹುದು.