Home News ಇಬ್ಬರ ಪ್ರೀತಿಯ ಹಾಯಿ ದೋಣಿಗೆ ಏಕಕಾಲದಲ್ಲಿ ಕಾಲಿಟ್ಟ ಯುವಕ | ಕೊನೆಗೆ ಲಾಟರಿ ಎತ್ತುವ ಮೂಲಕ...

ಇಬ್ಬರ ಪ್ರೀತಿಯ ಹಾಯಿ ದೋಣಿಗೆ ಏಕಕಾಲದಲ್ಲಿ ಕಾಲಿಟ್ಟ ಯುವಕ | ಕೊನೆಗೆ ಲಾಟರಿ ಎತ್ತುವ ಮೂಲಕ ಅವರಿಬ್ಬರಲ್ಲಿ ಒಬ್ಬಳ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ಹಾಸನ: ಹಾಸನದಲ್ಲೊಂದು ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಯುವತಿಯರನ್ನು ಏಕಕಾಲಕ್ಕೆ ಪ್ರೀತಿಸಿದ್ದ ಯುವಕ ಕೊನೆಗೆ ಲಾಟರಿ ಮೂಲಕ ಹುಡುಗಿಯರಲ್ಲೊಬ್ಬಳನ್ನು ಆಯ್ಕೆ ಮಾಡಿದ ಅಪೂರ್ವ ಘಟನೆ ಸಕಲೇಶಪುರದಲ್ಲಿ ನಡೆದಿದೆ.

ಕೊನೆಗೆ ಇಬ್ಬರ ಕೈಗೂ ಸಿಕ್ಕಿಬಿದ್ದು ಪೆಚಾಟಕ್ಕೆ ಸಿಲುಕಿದ್ದಲ್ಲದೆ, ಪ್ರೇಯಸಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿ ಕೊನೆಗೆ ಇನ್ನೇನೋ ಆಗಿ, ಅಂತೂ ಇಂತೂ ಒಬ್ಬಳ ಜೊತೆ ಸಪ್ತಪದಿ ತುಳಿದಿರುವ ವಿಚಿತ್ರ ಘಟನೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ ಎನ್ನಲಾಗಿದೆ.

ಸಕಲೇಶಪುರ ಮೂಲದ ಯುವಕ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಆಕೆಗೆ ತಿಳಿಯದಂತೆ ಇವಳ ಜತೆ ಹಾಗೂ ಈಕೆಗೆ ತಿಳಿಯದಂತೆ ಇನ್ನೊಬ್ಬಳ ಜೊತೆ ಹುಡುಗ ಡಬ್ಬಲ್ ಆಕ್ಟ್
ಶುರುವಿಟ್ಟುಕೊಂಡಿದ್ದ. ಅದರೆ ಒಂದು ದಿನ ಆತ ಸಿಕ್ಕಿಬಿದ್ದಿದ್ದ. ಎರಡು ಹಾಯಿ ದೋಣಿಗಳ ಮೇಲೆ ಕಾಲಿಟ್ಟ ಆತ ನೀರಿಗೆ ಬೀಳುವ ಬದಲು, ವಿಚಿತ್ರವೆಂಬಂತೆ ಆತನ ಮೇಲೆ ಇನ್ನಿಲ್ಲದ ಪ್ರೀತಿ ಬೆಳೆಸಿಕೊಂಡಿದ್ದ ಆ ಇಬ್ಬರೂ ಕನ್ನಿಕೆಯರು
ಆತನನ್ನು ಬಿಟ್ಟು ಕೊಡಲು ಒಪ್ಪಲಿಲ್ಲ. ಇಬ್ಬರೂ ಯುವತಿಯರೂ ತನ್ನನ್ನೇ ಮದುವೆಯಾಗುವಂತೆ ದುಂಬಾಲು ಬಿದ್ದಿದರು. ಇದರ ನಡುವೆ ಓರ್ವ ಯುವತಿ ಅತಿರೇಕಕ್ಕೆ ಹೋಗಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೊನೆಗೆ ಕಗ್ಗಾಂಟಾಗಿದ್ದ ತ್ರಿಕೋನ ಪ್ರೇಮ ಕಥೆಯನ್ನು ಕುಟುಂಬಸ್ಥರು ಹಾಗೂ ಪರಿಚಯಸ್ಥರು ಜಾಣ್ಮೆಯಿಂದ ಬಗೆಹರಿಸಿಕೊಂಡಿದ್ದಾರೆ.

ಮೊದಲು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಅವರು ನಿರ್ಧರಿಸಿದ್ದಾರೆ. ಆದರೆ ಯಾವುದೇ ರೀತಿಯ ಮಾತುಕತೆಗೆ ಫಲ ಸಿಗದಿದ್ದಾಗ ಕೊನೆಗೆ ಸಿಕ್ಕಿದ್ದು ಆ ತಂತ್ರ. ಎಲ್ಲರೂ ನಿರ್ಧರಿಸಿ ಲಾಟರಿ ಎತ್ತುವ ಮೂಲಕ ಯುವತಿ ಆಯ್ಕೆಗೆ ಮುಂದಾದರು. ಇಬ್ಬರು ಹುಡುಗಿಯರಲ್ಲಿ ಯಾರ ಹೆಸರು ಬರುತ್ತದೋ ಅವರ ಮದುವೆ ಎಂದು ನಿರ್ಧಾರ ಮಾಡಿದರು. ನಂತರ ನಡೆದದ್ದು ನಾಟಕೀಯ ಬೆಳವಣಿಗೆ. ಲಾಟರಿ ಎತ್ತಲು ಮುಂದಾಗುತ್ತಿದ್ದಂತೆ ಹುಡುಗ ಎಚ್ಚೆತ್ತುಕೊಂಡಿದ್ದಾನೆ. ಲಾಟರಿ ಆಯ್ಕೆ ಬೇಡ ಎಂದವನೇ ವಿಷ ಸೇವಿಸಿದ್ದ ಯುವತಿಯನ್ನು ಮದುವೆಯಾಗುವುದಾಗಿ ತನ್ನ ನಿರ್ಧಾರ ತಿಳಿಸಿದ್ದಾನೆ.

ಯುವಕನ ಈ ಹೇಳಿಕೆಯಿಂದ ಸಿಟ್ಟಿಗೆದ್ದ ಮತ್ತೊರ್ವ ಯುವತಿ, ಆತನ ಕೆನ್ನೆಗೆ ಒಂದು ಬಾರಿಸಿದ್ದಾಳೆ. ಅಲ್ಲದೆ ಆತ ಮೂರ್ಛೆ ಹೋದ ಪ್ರಸಂಗ ಕೂಡ ನಡೆದಿದೆ. ಇದೀಗ ಹಾಸನ ಜಿಲ್ಲೆಯಾದ್ಯಂತ ಈ ವಿಚಿತ್ರ ಪ್ರೇಮ ಕಥೆಯದ್ದೇ ಸುದ್ದಿ.