Home News ಗೃಹ ಪ್ರವೇಶದ ಸಮಯದಲ್ಲಿ ನಡೆದ ದುರಂತ | ಪ್ರಾಣಿ ಬಲಿ ಕೊಡಲು ಹೋದ ವ್ಯಕ್ತಿ ಸಾವು,...

ಗೃಹ ಪ್ರವೇಶದ ಸಮಯದಲ್ಲಿ ನಡೆದ ದುರಂತ | ಪ್ರಾಣಿ ಬಲಿ ಕೊಡಲು ಹೋದ ವ್ಯಕ್ತಿ ಸಾವು, ಕೋಳಿ ಬಚಾವ್ !!!

Hindu neighbor gifts plot of land

Hindu neighbour gifts land to Muslim journalist

ವಿಧಿಯಾಟನೋ ಏನೋ ಎಂಬುದಕ್ಕೆ ಉತ್ತರ ಕೊಡಬೇಕೋ ಅಥವಾ ಕೊಡಬಾರದೋ ಎಂಬುದು ಈ ಘಟನೆಯ ಮೂಲಕ ಅರ್ಥ ಆಗ್ತಿಲ್ಲ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಆತ ಹೊಸಮನೆ ಕಟ್ಟಿಸಿದ ಖುಷಿಯಲ್ಲಿದ್ದ. ಹಾಗಾಗಿ ಮನೆಯನ್ನು ದುಷ್ಟಶಕ್ತಿಗಳಿಂದ  ದೂರವಿಡಲು ಬಯಸಿದ ಆತ ಗಂಡು ಕೋಳಿ ( ಹುಂಜ) ವನ್ನು  ಬಲಿ ಕೊಡಲು ನಿರ್ಧಾರ ಮಾಡಿದ್ದಾರೆ. ಆದರೆ ಹುಂಜದ ಬಲಿಕೊಡಲು ಹೋದ ವ್ಯಕ್ತಿಯೇ ಸಾವು ಕಂಡು ದಾರುಣವಾಗಿ ಮೃತಪಟ್ಟಿದ್ದಾರೆ. ಹೌದು 70 ವರ್ಷದ ಮುದುಕರೊಬ್ಬರು ಈ ರೀತಿಯಾಗಿ ದುರಂತ ಸಾವು ಕಂಡಿದ್ದಾರೆ. ಮನೆಯ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಆದರೆ ಬಲಿ ತೆಗೆದುಕೊಡಲು ಕೊಂಡು ಹೋದ ಹುಂಜ  ಮಾತ್ರ ಸ್ವಲ್ಪವೂ ಗಾಯವಿಲ್ಲದೆ ಬದುಕುಳಿದಿದೆ. 

ಪಲ್ಲವರಂ ಬಳಿಯ ಪೊಜಿಚಲೂರ್ ಪ್ರದೇಶದಲ್ಲಿ ಟಿ. ಲೋಕೇಶ್ ಎಂಬುವರು ಹೊಸ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಪೂಜಾ ವಿಧಾನಗಳನ್ನು ನಡೆಸಿಕೊಡಲು ರಾಜೇಂದ್ರನ್ ಎಂಬುವರನ್ನು ಸಹಾಯಕರನ್ನಾಗಿ ನೇಮಿಸಿಕೊಂಡಿದ್ದರು.

ಆದರೆ ಪೂಜೆ ನೆರವೇರಿಸಲೆಂದು ಹೋದ ರಾಜೇಂದ್ರನ್ ತುಂಬಾ ಹೊತ್ತಿನವರೆಗೆ ವಾಪಸ್ ಬಂದಿಲ್ಲ. ಹಾಗಾಗಿ ಮನೆಮಂದಿ ಲೋಕೇಶ್ ಅವರನ್ನು ಹುಡುಕಿಕೊಂಡು ಹೋಗಿದ್ದಾರೆ. ಆದರೆ ಈ ವೇಳೆ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ತೋಡಿದ್ದ ಗುಂಡಿಯಲ್ಲಿ ರಕ್ತದ ಮಡುವಿನಲ್ಲಿ ರಾಜೇಂದ್ರನ್ ಬಿದ್ದಿರುವುದನ್ನು ಮನೆಮಂದಿ ದಿಗ್ಭ್ರಾಂತರಾಗಿದ್ದಾರೆ. ಹುಂಜವನ್ನು ಬಲಿ ಕೊಡಲು ಮೂರನೇ ಮಹಡಿಗೆ ಹೋದ ಸಂದರ್ಭದಲ್ಲಿ ಅಲ್ಲಿಂದ ಹಳ್ಳಕ್ಕೆ ಬಿದ್ದು ರಾಜೇಂದ್ರನ್ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಹುಂಜ ಬದುಕುಳಿದಿದೆ. ರಾಜೇಂದ್ರನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.