Home News Mango-Tomato: ತೋತಾಪುರಿ ಮಾವು ಮತ್ತು ಟೊಮೇಟೊ ಸಾಗಾಣಿಕೆ ಆಂಧ್ರದಿಂದ ತಡೆ – ಬೆಂಬಲಕ್ಕೆ ನಿಂತ...

Mango-Tomato: ತೋತಾಪುರಿ ಮಾವು ಮತ್ತು ಟೊಮೇಟೊ ಸಾಗಾಣಿಕೆ ಆಂಧ್ರದಿಂದ ತಡೆ – ಬೆಂಬಲಕ್ಕೆ ನಿಂತ ರಾಜ್ಯ ಸರ್ಕಾರ

Hindu neighbor gifts plot of land

Hindu neighbour gifts land to Muslim journalist

Mango-Tomato: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಾರುಕಟ್ಟೆ ಹಾಗೂ ಸಂಸ್ಕರಣ ಘಟಕಗಳಿಗೆ ರಾಜ್ಯದ ತೋತಾಪುರಿ ಮಾವು ಸಾಗಾಣಿಕೆ ತಡೆಗಟ್ಟುವ ಚಿತ್ತೂರು ಜಿಲ್ಲಾಡಳಿತದ ಆದೇಶ ಹಿಂಪಡೆಯುವಂತೆ ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ. ಸಿಎಂ ಅವಗಾಹನೆಗೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಇ-ಮಾರುಕಟ್ಟೆ ಸೇವಾ ಪೋರ್ಟಲ್ ಬಳಸಲು ಸಂಬಂಧಪಟ್ಟ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

ಮಾವು ಮತ್ತು ಟೊಮೇಟೋ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮಾವು ಮತ್ತು ಟೊಮೇಟೊ ಬೆಳೆಗಾರರ ಬೆಂಬಲಕ್ಕೆ ನಿಂತಿದೆ. ಈ ದಿಢೀರ್ ಮತ್ತು ಏಕಪಕ್ಷೀಯ ನಿರ್ಬಂಧದ ನಿರ್ಧಾರವು ರಾಜ್ಯದ ಮಾವಿನ ಹಾಗೂ ಟೊಮೇಟೋ ಬೆಳೆಯೋ ರೈತರಿಗೆ, ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ತೋತಾಪುರಿ ಮಾವಿನ ಹಣ್ಣುಗಳನ್ನು ಬೆಳೆಯುವ ಮತ್ತು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಾಗಿದೆ. ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳನ್ನು ಹೆಚ್ಚು ಅವಲಂಬಿಸಿರುವ ಗಡಿ ಜಿಲ್ಲೆಗಳ ರೈತರಿಗೆ ಭಾರಿ ಸಮಸವ್ಯೆಯನ್ನುಂಟು ಮಾಡಿದೆ. ದೀರ್ಘಕಾಲದಿಂದ ನಡೆಯುತ್ತಿರುವ ಅಂತಾರಾಜ್ಯ ವ್ಯಾಪಾರಕ್ಕೆ ಅಡಚಣೆ ಆಗಿರುವುದರಿಂದ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.

 

ರೈತರಿಗೆ ಆರ್ಥಿಕ ಸಂಕಷ್ಟದ ಜೊತೆಗೆ, ಇಂತಹ ಕ್ರಮವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಹಾಳು ಮಾಡುತ್ತದೆ. ಇದರಿಂದ ಕರ್ನಾಟಕದ ರೈತರು, ಆಂಧ್ರಪ್ರದೇಶದಿಂದ ಬರುವ ತರಕಾರಿಗಳ ಪೂರೈಕೆಗೆ ವಿರೋಧಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಪ್ರಯತ್ನಿಸಬೇಕು.