Home News Kalburgi: ನಾಯಿ ಉಳಿಸುವ ಪ್ರಯತ್ನದಲ್ಲಿ ಕಾರಲ್ಲಿ ದರ್ಗಾಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಸಾವು!

Kalburgi: ನಾಯಿ ಉಳಿಸುವ ಪ್ರಯತ್ನದಲ್ಲಿ ಕಾರಲ್ಲಿ ದರ್ಗಾಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಸಾವು!

Hindu neighbor gifts plot of land

Hindu neighbour gifts land to Muslim journalist

Kalburgi: ನಾಯಿಯ ಜೀವ ಉಳಿಸುವ ಪ್ರಯತ್ನದಲ್ಲಿ ಟವೆರಾ ಕಾರು ರಸ್ತೆ ಬದಿಯ ಕಲ್ಲಿನ ಕಂಬಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವಿಗೀಡಾದ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರು ಗ್ರಾಮದ ಬಳಿ ನಡೆದಿದೆ.

ಕಲಬುರಗಿಯ ಮಿಲ್ಲತ್‌ ನಗರದ ಆಯೇಷಾ (70), ಅಜ್ಮೇರಾ (30), ಜೈನಬ್‌ (2) ಮೃತರು.

ಮಹಾರಾಷ್ಟ್ರದ ಗಡಿಭಾಗದ ಹೈದ್ರಾ ದರ್ಗಾದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮಗುವಿನ ಜಾವಳ ಕಾರ್ಯಕ್ರಮಕ್ಕೆ ಟವೆರಾ ಕಾರಿನಲ್ಲಿ ಕುಟುಂಬ ಸಮೇತರಾಗಿ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಮಿಲ್ಲತ್‌ ನಗರದಿಂದ ಹೊರಟ ಕಾರು ಗೊಬ್ಬೂರು ಬಳಿ ಬರುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ನಾಯಿಯ ಪ್ರಾಣ ಕಾಪಾಡಲು ಹೋದ ಚಾಲಕ ರಸ್ತೆ ಬದಿಗೆ ಕಾರು ಇಳಿಸಿದ್ದು, ಕಾರು ನಿಯಂತ್ರಣ ತಪ್ಪಿ ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಕಂಬಳಿಗೆ ರಭಸವಾಗಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ನಜ್ಜುಗುಜ್ಜಾಗಿದೆ.

ಘಟನಾ ಸ್ಥಳಕ್ಕೆ ದೇವಲಗಾಣಗಾಪುರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.