Home News Fast Tag: ಫಾಸ್ಟ್ ಟ್ಯಾಗ್ ಇಲ್ಲದವರು ಇನ್ನು ದುಪ್ಪಟ್ಟು ಹಣ ಪಾವತಿಸಬೇಕಿಲ್ಲ – ನ.15ರಿಂದ ಈ...

Fast Tag: ಫಾಸ್ಟ್ ಟ್ಯಾಗ್ ಇಲ್ಲದವರು ಇನ್ನು ದುಪ್ಪಟ್ಟು ಹಣ ಪಾವತಿಸಬೇಕಿಲ್ಲ – ನ.15ರಿಂದ ಈ ಹೊಸ ಟೋಲ್ ನಿಯಮ ಜಾರಿ

Hindu neighbor gifts plot of land

Hindu neighbour gifts land to Muslim journalist

Fast Tag: ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಇಲ್ಲದವರಿಗೆ ಗುಡ್ ನ್ಯೂಸ್ ನೀಡಿದ್ದು, ನವೆಂಬರ್ 15ರಿಂದ, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಮಾಲೀ ಕರು ದುಪ್ಪಟ್ಟು ಹಣ ಪಾವತಿಸಬೇಕಾಗಿಲ್ಲ. ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್ ಇಲ್ಲದವರು ದುಪ್ಪಟ್ಟು ಹಣ ಪಾವತಿಸಬೇಕು ಎಂಬ ನಿಯಮವನ್ನು ಸಡಿಲಿಸಿದ್ದು, ನಗದು ರೂಪದಲ್ಲಿ ಪಾವತಿ ಆಯ್ಕೆ ಮಾಡಿಕೊಂಡರೆ ಟೋಲ್ ಶುಲ್ಕವನ್ನು ದುಪ್ಪಟ್ಟು ಪಾವತಿಸಬೇಕಾಗುತ್ತದೆ.

ಆದರೆ UPI ಮೂಲಕ ಪಾವತಿ ಮಾಡಿದರೆ ಶುಲ್ಕದ 1.25 ಪಟ್ಟು ಟೋಲ್ ಪಾವತಿಸ ಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಶುಲ್ಕ(ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿದ್ದು, FASTag ಇಲ್ಲದ ಬಳಕೆದಾರರಿಗೆ ಅವರ ಪಾವತಿ ವಿಧಾನ ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಿದೆ.

ಇದನ್ನೂ ಓದಿ:Mahindra SUV: GST ಹಾಗೂ ನವರಾತ್ರಿ ಎಫೆಕ್ಟ್ – ಶೇ. 60 ರಷ್ಟು ಏರಿಕೆ ಕಂಡ ಮಹೀಂದ್ರಾ SUV ಮಾರಾಟ!!

ಈ ಕ್ರಮವು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮತ್ತು ಟೋಲ್ ಪ್ಲಾಜಾಗಳಲ್ಲಿ ನಗದು ಬಳಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಹೊಸ ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ ಇಲ್ಲದ ಅಥವಾ ದೋಷಯುಕ್ತ ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳು ಈಗ UPI ಬಳಸಿ ಪಾವತಿಸಿದರೆ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಬದಲು 1.25 ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ.