Home News WHO : ಗಮನಿಸಿ : 2023 ರ ವೇಳೆ ಈ ರೋಗ ಹೆಚ್ಚಾಗಲಿದೆ| ಈಗ್ಲೇ ಇದರ...

WHO : ಗಮನಿಸಿ : 2023 ರ ವೇಳೆ ಈ ರೋಗ ಹೆಚ್ಚಾಗಲಿದೆ| ಈಗ್ಲೇ ಇದರ ಬಗ್ಗೆ ತಿಳಿದುಕೊಂಡರೆ ಉತ್ತಮ- WHO ಎಚ್ಚರಿಕೆ

Hindu neighbor gifts plot of land

Hindu neighbour gifts land to Muslim journalist

ಹಣವನ್ನು ಮನುಷ್ಯ ಸಾವಿರಾರು ವಿಧಾನಗಳ ಮೂಲಕ ಖರ್ಚು ಮಾಡಬಹುದು, ಸಂಪಾದಿಸಬಹುದು, ಕಳ್ಳತನ ಮಾಡಲೂ ಬಹುದು, ಆದರೆ ಈ ಆಧುನಿಕ ಯುಗದಲ್ಲಿ ಹಣಕ್ಕಿಂತ ಆರೋಗ್ಯ ದೊಡ್ಡದು ಅನ್ನೋದು ಜನರಿಗೆ ಅರಿವಾಗುವ ಸಮಯ ಬಂದಿದೆ. ಈಗಾಗಲೇ ಜನರು ಒಂದಲ್ಲ ಒಂದು ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಇಲ್ಲವೇ ಅನ್ನೋ ಚಿಂತೆ ಕಾಡಿದೆ.

ಮನುಷ್ಯ ತಂತ್ರಜ್ಞಾನದ ಮೂಲಕ ಎಷ್ಟೇ ಮುಂದುವರಿಯಬಹುದು. ಆದರೆ ಆರೋಗ್ಯ ವೃದ್ಧಿ ಅನ್ನೋದು ಬಹುಷಃ ದೇವರೇ ಕರುಣಿಸಬೇಕು ಅನ್ನಿಸುತ್ತೆ. ಹೌದು ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ, ಖಿನ್ನತೆ ಸೇರಿದಂತೆ ಅನೇಕ ಗಂಭೀರ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದೆ. ಆದ್ರೆ ಈ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ದೈಹಿಕ ಚಟುವಟಿಕೆಯ ಮೇಲಿನ ಜಾಗತಿಕ ಕ್ರಿಯಾ ಯೋಜನೆ 2018-2030 (GAPPA)ಯನ್ನು ವಿಶ್ವ ಆರೋಗ್ಯ ಸಂಸ್ಥೆ ಯು ಈಗಾಗಲೇ ಬಿಡುಗಡೆ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆ ನಿಯಮಿತ ದೈಹಿಕ ಚಟುವಟಿಕೆ ಅಗತ್ಯವನ್ನು ಎತ್ತಿ ಹಿಡಿದಿದೆ. ಸೈಕ್ಲಿಂಗ್ , ಕ್ರೀಡೆ, ವಾಕಿಂಗ್ ಮತ್ತು ಇತರ ದೈಹಿಕ ಚಟುವಟಿಕೆಗಳು ಕೇವಲ ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ವನ್ನು ಮಾತ್ರ ಸುಧಾರಿಸುವುದಿಲ್ಲ. ಈ ದೈಹಿಕ ಚಟುವಟಿಕೆಗಳು ಸಮಾಜ, ಪರಿಸರ ಮತ್ತು ಆರ್ಥಿಕತೆಗೂ ಹೆಚ್ಚು ಪ್ರಯೋಜನಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಟ್ರೊಸ್ ಅಧಾನಮ್ ಫೆಬ್ರಿಯೆಸಸ್ ಹೇಳಿದ್ದಾರೆ.

ಜಡತೆಯ ಜೀವನಶೈಲಿ ಸಾಂಕ್ರಾಮಿಕವಲ್ಲದ ರೋಗವನ್ನು ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.

2020 ಮತ್ತು 2030 ರ ನಡುವೆ ಸುಮಾರು 500 ಮಿಲಿಯನ್ ಹೊಸ ಎನ್‌ಸಿಡಿ ಪ್ರಕರಣಗಳು ವರದಿಯಾಗಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದರಲ್ಲಿ ಸುಮಾರು ಶೇಕಡಾ 47ರಷ್ಟು ಅಧಿಕ ರಕ್ತದೊತ್ತಡದಿಂದ ಉಂಟಾಗುವ ಕಾಯಿಲೆಗಳಾಗಿರುತ್ತದೆ. ಶೇಕಡಾ 43ರಷ್ಟು ಖಿನ್ನತೆಯಿಂದ ಉಂಟಾಗುವ ಖಾಯಿಲೆಗಳಾಗಿರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈಗಿನ ಯುವಕರು ದೈಹಿಕವಾಗಿ ಕ್ರೀಯಾಶೀಲರಾಗಿಲ್ಲ. ನಾಲ್ಕರಲ್ಲಿ ಒಬ್ಬರು ಯಾವುದೇ ದೈಹಿಕ ಚಟುವಟಿಕೆ ಮಾಡುವುದಿಲ್ಲ. ವಿಶ್ವದಾದ್ಯಂತ ಶೇಕಡಾ 80ರಷ್ಟು ಯುವಕರು ದೈಹಿಕ ಚಟುವಟಿಕೆಯಿಂದ ದೂರವುಳಿದಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದ್ರಲ್ಲೂ ದೈಹಿಕ ಚಟುವಟಿಕೆ ಹುಡುಗಿಯರಲ್ಲಿ ಕಡಿಮೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೈಹಿಕ ಚಟುವಟಿಕೆ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂದು ವಿಶ್ವಸಂಸ್ಥೆಯ ಅನೇಕ ಅಧ್ಯಯನಗಳಿಂದ ಪತ್ತೆಯಾಗಿದೆ.

ಧೂಮಪಾನ ಹಾಗೂ ಮದ್ಯಪಾನ ದಿಂದ ಗಂಭೀರ ಖಾಯಿಲೆ ಬರುವಂತೆ ನಿಷ್ಕ್ರಿಯ ದೈಹಿಕ ಚಟುವಟಿಕೆಯಿಂದ ಕೂಡ ಅನೇಕ ಅಪಾಯಕಾರಿ ರೋಗ ಬರುತ್ತದೆ. ದಿನದಲ್ಲಿ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡರೂ ಅನೇಕ ರೋಗಗಳಿಂದ ದೂರವಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು ದೈಹಿಕ ಚಟುವಟಿಕೆ ದೈಹಿಕ ನಿಷ್ಕ್ರಿಯತೆ ಖಿನ್ನತೆ, ಆತಂಕ ಮತ್ತು ಮಕ್ಕಳ ಮೆದುಳಿನ ಬೆಳವಣಿಗೆಯನ್ನು ತಡೆಯುತ್ತದೆ. ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗುವ ಜನರು ಅಕಾಲಿಕ ಮರಣ ಹೊಂದುವುದು ಶೇಕಡಾ 20ರಷ್ಟು ಕಡಿಮೆಯಿರುತ್ತದೆ. ಇಂಥವರಿಗೆ ಹೃದಯರೋಗ, ಖಿನ್ನತೆ, ಬುದ್ಧಿಮಾಂದ್ಯತೆ
ಅಪಾಯ ಶೇಕಡಾ 7ರಿಂದ 8ರಷ್ಟು ಕಡಿಮೆಯಿರುತ್ತದೆ.

ಟೈಪ್ 2 ಮಧುಮೇಹ ಶೇಕಡಾ 5ರ ರಷ್ಟು ಕಡಿಮೆ ಇರುತ್ತದೆ. ದೈಹಿಕ ಚಟುವಟಿಕೆಯಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತದೆ.

ಮುಂದಿನ ವರ್ಷಗಳಲ್ಲಿ ಸಾಂಕ್ರಾಮಿಕವಲ್ಲದ ಖಾಯಿಲೆ ಹೆಚ್ಚಾಗುತ್ತದೆ. ಪಾರ್ಶ್ವವಾಯು, ಹೃದಯ ರೋಗ , ಮಧುಮೇಹ, ಮಾನಸಿಕ ಆರೋಗ್ಯ, ಕ್ಯಾನ್ಸರ್‌ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೊಸ ಪ್ರಕರಣಗಳ ಚಿಕಿತ್ಸೆಯ ವೆಚ್ಚವು 2030 ರ ವೇಳೆಗೆ 300 ಡಾಲರ್ ತಲುಪಲಿದೆ. ಇದ್ರಿಂದ ಎಲ್ಲ ದೇಶದ ಮೇಲೆ ಆರ್ಥಿಕ ಹೊಣೆ ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ನೀವು ಸ್ಪರ್ಧಾತ್ಮಕ ಜೀವನದಲ್ಲಿ ಮಾಡೋ ತಪ್ಪಿಗೆ ನಿಮ್ಮ ಮಕ್ಕಳು ಶಿಕ್ಷೆ ಅನುಭವಿಸಬೇಕು ಜೋಪಾನ. ಮೇಲಿನ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗೆ ಪರಿಹಾರ ನಮ್ಮ ಕೈನಲ್ಲೇ ಇದೆ. ದೈಹಿಕ ಚಟುವಟಿಕೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಜನರಿಗೆ ಇದರ ಬಗ್ಗೆ ಪ್ರೋತ್ಸಾಹ ನೀಡಬೇಕು. ಜನರನ್ನು ಜಾಗೃತಗೊಳಿಸಬೇಕು ವಿಶ್ವಸಂಸ್ಥೆ ಕರೆ ನೀಡಿದೆ.