Home News ಗಂಡನಿಗೆ ತಿಳಿಯದಂತೆ 50 ಜನರೊಂದಿಗೆ ಹೆಂಡತಿಯ ರಾಸಲೀಲೆ! ಪತ್ನಿಯ ಅಸಲಿ ಮುಖ ತೆರೆದಿಟ್ಟ ಮೊಬೈಲ್! ನಂತರ...

ಗಂಡನಿಗೆ ತಿಳಿಯದಂತೆ 50 ಜನರೊಂದಿಗೆ ಹೆಂಡತಿಯ ರಾಸಲೀಲೆ! ಪತ್ನಿಯ ಅಸಲಿ ಮುಖ ತೆರೆದಿಟ್ಟ ಮೊಬೈಲ್! ನಂತರ ಗಂಡ ಮಾಡಿದ್ದೇನು ಗೊತ್ತಾ!

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣಗಳು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಕೆಲವೊಮ್ಮೆ ಯಾರು ಎಷ್ಟೇ ಸಭ್ಯರಾಗಿದ್ದರೂ ಅವರನ್ನು ಆಸೆ, ಆಮೀಷಗಳಿಂದ ಅಸಭ್ಯರನ್ನಾಗಿ ಮಾರ್ಪಡಿಸುತ್ತವೆ. ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಆದ ಪರಿಚಯವು ಸುಂದರ ಬದುಕನ್ನು ಕಟ್ಟಿಕೊಳ್ಳಲು ನಾಂದಿಯಾದರೆ, ಇನ್ನು ಕೆಲವು ಪರಿಚಯಗಳು ಬದುಕನ್ನೇ ಸರ್ವನಾಶ ಮಾಡಿ ಬಿಡುತ್ತವೆ. ಸರಿಪಡಿಸೋಣ ಎಂದರೆ ಕಾಲ ಮಿಂಚಿಹೋಗಿರುತ್ತದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚಿಗುರೊಡೆದ ಪ್ರೇಮಾಂಕುರವೊಂದು ಇಂತಹದೇ ಅನಾಹುತವನ್ನು ತಂದೊಡ್ಡಿರುವಂತಹ ಘಟನೆ ಸದ್ಯ ಬೆಳಕಿಗೆ ಬಂದಿದೆ.

ಹೌದು, ಫೇಸ್ ಬುಕ್ ಮೂಲಕ ಅನ್ಯ ಕೋಮಿನ ಹುಡುಗ ಮತ್ತು ಹುಡುಗಿ ಇಬ್ಪಬರಿಗೆ ಪರಿಚಯವಾಗಿದೆ. ಹುಡುಗನದ್ದು ಸರ್ಕಾರಿ ಕೆಲಸ. ಆರಂಭದಲ್ಲಿ ಚಾಟ್ ಮಾಡುತ್ತಿದ್ದ ಇಬ್ಬರೂ ನಂತರ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದರು. ನಂತರ ಪರಿಚಯ ಪ್ರೇಮವಾಗಿದೆ. ಆದರೆ ಮನೆಯಲ್ಲಿ ತಮ್ಮ ಪ್ರೇಮದ ಕುರಿತು ತಿಳಿಸಿದಾಗ ಅನ್ಯ ಧರ್ಮವಾದ ಕಾರಣ ಮದುವೆಗೆ ವಿರೋಧ ಎದುರಾಗಿದೆ. ಆದರೂ ತಮ್ಮ ಪ್ರೀತಿಯನ್ನು ಮುರಿಯದ ಈ ಜೋಡಿಗಳು ಮದುವೆಯಾಗಿ ಬೇರೆ ಮನೆ ಮಾಡಿ ಸುಖವಾಗಿ ಸಂಸಾರ ಮಾಡುತ್ತಿದ್ದರು. ಆದರೆ ದಿನ ಕಳೆದಂತೆ ಪತಿಗೆ ತನ್ನ ಪತ್ನಿಯ ಅಸಲಿ ಮುಖವನ್ನು ಆಕೆಯ ಮೊಬೈಲ್ ತಿಳಿಸಿಕೊಟ್ಟಿದೆ.

ಹೌದು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಿರುವತ್ತರ್‌ನಲ್ಲಿ ಮುತ್ತುರಾಮ್ ಎಂಬ ವ್ಯಕ್ತಿ ರಾಮನಾಥಪುರಂ ಜಿಲ್ಲೆಯ ಕೇಜಲಕರೈ ಅರಣ್ಯ ಕಚೇರಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಮುತ್ತುರಾಮ್‌ಗೆ ಫೇಸ್‌ಬುಕ್‌ನಲ್ಲಿ ನಜೀನಾ ಪರ್ವೀನ್ ಅಲಿಯಾಸ್ ನಾಜಿನಾ ಎಂಬ ಮಹಿಳೆ ಪರಿಚಯವಾಗಿದೆ. ಮುಂದೆ ಇಬ್ಬರೂ ಪ್ರೇಮ ನೀವೇದನೆ ಮಾಡಿಕೊಂಡು ಪ್ರೇಮಿಗಳಾಗಿ ಡೇಟಿಂಗ್ ಕೂಡ ಶುರು ಮಾಡಿದ್ದರು.

8 ತಿಂಗಳ ಡೇಟಿಂಗ್ ಮುಗಿದ ಬಳಿಕ ಇಬ್ಬರೂ ಮನೆಯವರ ಒಪ್ಪಿಗೆಯೊಂದಿಗೆ ಮದುವೆಯಾಗಲು ಮುಂದಾಗಿದ್ದಾರೆ. ಆದರೆ ಹುಡುಗಿ ಮುಸ್ಲಿಂ ಆದ ಕಾರಣ ಮುತ್ತುರಾಮ್ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆ. ಕುಟುಂಬ ಸದಸ್ಯರ ವಿರುದ್ಧದ ನಡುವೆಯೇ ನಾಜಿನಾ ಮತ್ತು ಮುತ್ತುರಾಮ್ ಮನೆಯಿಂದ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಈ ನಡುವೆ ನಜೀನಾಳು ನಾನು ದಂತವೈದ್ಯೆ, ಮುಂದೆ ರಾಮನಾಥಪುರದಲ್ಲಿ ಕ್ಲಿನಿಕ್ ಆರಂಭಿಸಿ ನೆಮ್ಮದಿಯಿಂದ ಬದುಕಬಹುದು ಎಂದು ಮುತ್ತುರಾಮ್ ಗೆ ಹೇಳಿದ್ದಳು. ಸುಂದರ ಬದುಕಿನ ಕನಸು ಕಂಡ ಮುತ್ತುರಾಮ್ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾನೆ.

ನಜೀನಾ ಮಾತನ್ನು ನಂಬಿದ ಮುತ್ತುರಾಮ್ ಮನೆಯಿಂದ ಓಡಿಹೋಗಿ ರಾಮನಾಥಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಹೆಂಡತಿ ಜೊತೆ ವಾಸವಾಗಿದ್ದನು. ನಂತರ ಮುತ್ತುರಾಮ್ ತನ್ನ ಪತ್ನಿ ನಜೀನಾಳ ಒತ್ತಡದಿಂದ ಇಸ್ಲಾಂಗೆ ಮತಾಂತರಗೊಂಡನು. ಮುತ್ತುರಾಮ್ ತನ್ನ ಹೆಸರನ್ನೂ ಜವಾಹರ್ ಬದಲಾಯಿಸಿದನು. ದಿನ ಕಳೆದಂತೆ ನಮ್ಮ ಧರ್ಮದಲ್ಲಿ ಗಂಡಸು, ಹೆಂಡತಿಗೆ ವರದಕ್ಷಿಣೆ ಕೊಡುತ್ತಾನೆ, ನೀನು ನನಗೆ ವರದಕ್ಷಿಣೆ ಕೊಡಬೇಕು ಎಂದು ನಜೀನಾ ತನ್ನ ಪತಿ ಮುತ್ತುರಾಮ್‌ಗೆ ಕೇಳಿದಳು.

ಹೆಂಡತಿ ಪ್ರೀತಿಯಿಂದ ಹೀಗೆ ಕೇಳುತ್ತಾಳೆ ಎಂದು ಮುತ್ತುರಾಮನು ಭಾವಿಸಿದ್ದನು. ಆದರೆ ಬರ ಬರುತ್ತ ನಜೀನಾಳ ಒತ್ತಾಯ ಹೆಚ್ಚಾಯಿತು. ವರದಕ್ಷಿಣೆಯಾಗಿ ಹುಂಡೈ ಕಾರು, 40 ಗ್ರಾಂ ಚಿನ್ನಾಭರಣ ಮತ್ತು 3 ಲಕ್ಷ ನಗದು ನೀಡುವಂತೆ ಯಾವಾಗಲೂ ಪೀಡಿಸುತ್ತಿದ್ದಳು. ಮುತ್ತುರಾಮ್ ಕೂಡ ನಜೀನಾಗೆ ಎಲ್ಲವನ್ನೂ ಕೊಟ್ಟು ಬಿಟ್ಟನು. 2022ರಲ್ಲಿ ಮದುವೆಯಾದ ಈ ಇಬ್ಬರ ದಂಪತಿಗಳ ಇಷ್ಟು ದಿನ ಅವರ ಜೀವನ ಚೆನ್ನಾಗಿಯೇ ಸಾಗಿತ್ತು. ಆದರೆ ಇದೀಗ ಪತ್ನಿಯ ಅಸಲಿ ಮುಖ ಹೊರ ಬಂದಿದ್ದು ಪತಿಗೆ ತಲೆಯೇ ಕೆಟ್ಟಂತಾಗಿದೆ.

ಅಂದಹಾಗೆ, ಒಂದು ದಿನ ಮುತ್ತುರಾಮ್ ಮೊಬೈಲ್ ನೀರಿಗೆ ಬಿದ್ದಿದೆ. ಹೀಗಾಗಿ ಕೆಲ ದಿನ ನಜೀನಳ ಮೊಬೈಲ್ ಬಳಸಿದ್ದ. ಆದರೆ ಈ ಸಂದರ್ಭದಲ್ಲಿ ಮುತ್ತುರಾಮ್ ಗೆ ತನ್ನ ಹೆಂಡತಿಯ ಅಸಲಿ ಮುಖ ಕಂಡು ಮೈಂಡ್ ಬ್ಲಾಕ್ ಆದಂತಾಗಿದೆ. ಯಾಕೆಂದರೆ ತನ್ನ ಪತ್ನಿಗೆ ಸುಮಾರು 50ಕ್ಕೂ ಹೆಚ್ಚು ಬಾಯ್‌ಫ್ರೆಂಡ್‌ಗಳಿದ್ದ ವಿಚಾರ ಮೊಬೈಲ್ ಮೂಲಕ ತಿಳಿದಿದೆ. ಆಕೆ ಪ್ರತಿಯೊಬ್ಬರೊಂದಿಗೂ ಸಂಬಂಧ ಇಟ್ಟುಕೊಂಡು, ಎಲ್ಲರೊಂದಿಗೂ ಫ್ಲರ್ಟ್ ಮಾಡುವ ವಿಚಾರ ಬೆಳಕಿಗೆ ಬಂದಿದೆ. ಮದುವೆಯಾದ ಬಳಿಕವೂ ಇದೆಲ್ಲವೂ ಮುಂದುವರೆದು ಎಲ್ಲರೊಂದಿಗೂ ಅಶ್ಲೀಲವಾಗಿ, ಅಸಭ್ಯವಾಗಿ ಮೆಸೇಜ್ ಮಾಡಿರುವುದು ಕಂಡು ಬಂದಿದೆ.

ಸದ್ಯ ಹುಚ್ಚನಂತಾಗಿರುವ ಮುತ್ತುರಾಮ್ ಗೆ ಏನು ಮಾಡಬೇಕೆಂದು ತಿಳಿಯದೆ ಮೋಸ ಹೋದೆನೆಂದು, ಇವಳಿಗೋಸ್ಕರ ಮನೆಯವರನ್ನೆಲ್ಲ ಬಿಟ್ಟು ಬಂದೆನೆಂದು ಕೊರಗುತ್ತಿದ್ದಾನೆ. ಅಲ್ಲದೆ ನನಗೆ ನ್ಯಾಯ ಕೊಡಿಸಬೇಕು ಎಂದು ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ. ಜೊತೆಗೆ ನಜೀನಾಳಿಂದ ವಿಚ್ಛೇಧನ ಪಡೆಯಲು ಮುಂದಾಗಿದ್ದಾನೆ.
ಆಕೆಯನ್ನು ನಂಬಿ ತನ್ನ ಎಲ್ಲವನ್ನು ಕೊಟ್ಟು, ಈಗ ನ್ಯಾಯ ಬೇಕು ಎಂದು ಕೇಳುತ್ತಿರುವ ಈತನನ್ನು ನೋಡಿದರೆ ಅಯ್ಯೋ ಎನಿಸುತ್ತದೆ.