Home News ಇಲ್ಲಿನ ಜನ ಬೆಳಕಿನ ಹಬ್ಬ ದೀಪಾವಳಿಯನ್ನು ಸ್ಮಶಾನದಲ್ಲಿ ಆಚರಿಸುತ್ತಾರೆ !!!

ಇಲ್ಲಿನ ಜನ ಬೆಳಕಿನ ಹಬ್ಬ ದೀಪಾವಳಿಯನ್ನು ಸ್ಮಶಾನದಲ್ಲಿ ಆಚರಿಸುತ್ತಾರೆ !!!

Hindu neighbor gifts plot of land

Hindu neighbour gifts land to Muslim journalist

ದೀಪಾವಳಿ ಎಂದರೆ ಅಂಧಕಾರವ ದೂರ ಮಾಡಿ ಬೆಳಕನ್ನು ಹಂಚುವ ಶುಭಕರವಾದ ಹಬ್ಬ. ಇದೊಂದು ಶುಭ ಸೂಚಕ ಹಬ್ಬವಾಗಿದ್ದು ಜನರು ದೀಪ ಬೆಳಗಿ, ಪಟಾಕಿ ಹಚ್ಚಿ, ಗೋಪೂಜೆ ಮುಂತಾದ ನಾನ ವಿಧವಾದ ಆಚರಣೆಯನ್ನು ಆಚರಿಸುತ್ತಾರೆ. ಕೆಲವರು ತಮ್ಮ ತಮ್ಮ ಮನೆಗಳಲ್ಲಿ, ಸಾಮೂಹಿಕ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲಿ ಆಚರಿಸುತ್ತಾರೆ. ಆದರೆ ಕೆಲವರು ಎಲ್ಲರೂ ಸೂತಕ ಪ್ರದೇಶ ಎಂದು ಭಾವಿಸುವ ಸ್ಮಶಾನದಲ್ಲೂ ದೀಪಾವಳಿ ಹಬ್ಬ ಆಚರಿಸುತ್ತಾರೆ!

ಅರೇ! ಇದೇನಪ್ಪಾ ಮಸಣದಲ್ಲಿ ಈ ಪವಿತ್ರವಾದ ಹಬ್ಬವನ್ನು ಆಚರಿಸುತ್ತಾರಾ ಎಂದು ಅಚ್ಚರಿಯಾಗಬೇಡಿ. ಹೌದು, ತೆಲಂಗಾಣದ ಕರೀಂ ನಗರದಲ್ಲಿ ಈ ಆಚರಣೆಯಿದೆಯಂತೆ. ಅಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗದಲ್ಲೂ ಆಚರಿಸುತ್ತಾರೆ.

ಹಿಂದೂ ದಲಿತ ಕುಟುಂಬಗಳು ಕರೀಂ ನಗರದ ಕರ್ಜನ ಗಡ್ಡಾದಲ್ಲಿರುವ ಸಮಾಧಿಯನ್ನು ದೀಪಾವಳಿಯ ಒಂದು ವಾರದ ಮುಂಚೆಯೆ ಶುಚಿ ಮಾಡಿ, ಬಣ್ಣ ಬಳಿಯುತ್ತಾರೆ. ತಮ್ಮ ಪೂರ್ವಜರ ಸಮಾಧಿಯನ್ನು ಹೂವುಗಳಿಂದ ಅಲಂಕಾರ ಮಾಡಿ, ದೀಪಗಳನ್ನು ಬೆಳಗುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಸಂಜೆ ಅಲ್ಲೇ ಕಳೆಯುತ್ತಾರೆ. ಹಿರಿಯರಿಗೆ ನೈವೇದ್ಯ ಅರ್ಪಿಸಿ ಅವರನ್ನು ಸ್ಮರಿಸುತ್ತಾ ದೀಪಾವಳಿ ಆಚರಿಸುತ್ತಾರೆ.

ಇದೊಂದು ವಿಚಿತ್ರವಾದ ಸಂಪ್ರದಾಯವಾದರೂ, ಸ್ಮಶಾನದಲ್ಲಿ ಆಚರಿಸಿದರೂ, ಹಿರಿಯರನ್ನು ನೆನಿಸಿಕೊಂಡು ಆಚರಿಸುವ ಪುಣ್ಯಕಾರ್ಯವೆಂದೆ ಹೇಳಬಹುದು.