Home News ರವಿಕೆ ಕಳಚಿ, ಎದೆಯ ಅದುಮಿ ಹಿಡಿದು ಜಾರುವ ಸೀರೆಯುಟ್ಟ ನಟಿ ; ಬಳುಕುವ ಸೊಂಟಕ್ಕೆ ಜಡಿದರು...

ರವಿಕೆ ಕಳಚಿ, ಎದೆಯ ಅದುಮಿ ಹಿಡಿದು ಜಾರುವ ಸೀರೆಯುಟ್ಟ ನಟಿ ; ಬಳುಕುವ ಸೊಂಟಕ್ಕೆ ಜಡಿದರು ಕೇಸ್ !

Hindu neighbor gifts plot of land

Hindu neighbour gifts land to Muslim journalist

ತನ್ನ ಚಿತ್ರ-ವಿಚಿತ್ರವಾದ ಉಡುಗೆಗಳನ್ನು ತೊಟ್ಟು ಜನರ ಕಣ್ಮನ ಸೆಳೆದು ಫೇಮಸ್ ಆಗಿರುವ ಉರ್ಫಿ ಜಾವೇದ್ . ಈ ಬಾರಿ ಸೀರೆ ಉಟ್ಟ ಕಾರಣಕ್ಕಾಗಿ ಈಕೆಯ ಮೇಲೆ ಕೇಸು ದಾಖಲಾಗಿದೆ. ಜಾರುವ ಸೊಂಟದ, ಕಾಣೆಯಾಗಿ ಹೋಗುವ ಕುಬುಸ ಬಳಸಿ ಸೀರೆ ಉಡುವ ಉರ್ಫಿ ಜಾವೇದ್ ನ ಮೇಲೆ ಅಶ್ಲೀಲತೆಯ ಕಾರಣದಿಂದ ದೂರು ನೀಡಲಾಗಿದೆ.

ಇಲ್ಲಿಯ ತನಕ ಆಕೆ ಹಾಕದೆ ಉಳಿದ ಡ್ರೆಸ್ ಗಳು ಇರಲಿಕ್ಕಿಲ್ಲ. ಆಕೆ ಪೇಪರ್, ಒಡೆದ ಗಾಜಿನ ಪೀಸ್‌, ಹರಿದ ಗೋಣಿ ಚೀಲ ಹೀಗೇ..ಕೈಗೆ ಸಿಕ್ಕ ವಸ್ತುಗಳನ್ನೇ ಸುತ್ತಿಕೊಂಡು ಅದನ್ನೇ ದೇಹದ ಆಯ್ದ ಇಂಚು – ಅಂಚುಗಳಿಗೆ ಸೀಮಿತ ಮಾಡಿಕೊಂಡು ಧರಿಸಿದ ವಸ್ತ್ರ ವಿನ್ಯಾಸದಲ್ಲಿ ಪ್ರತಿ ಬಾರಿ ಕೂಡ ಪ್ರತ್ಯಕ್ಷಳಾಗುತ್ತಾಳೆ . ಎಷ್ಟೋ ಬಾರಿ ಜನರ ಕೆಂಗಣ್ಣಿಗೆ ಕಾರಣಳಾಗಿ ಟ್ರೋಲ್ ಕೂಡ ಆಗಿದ್ದಾಳೆ.

ಕಳೆದ ಬಾರಿ ಇದೇ ದೀಪಾವಳಿಯ ಆರಂಭದಲ್ಲಿ , ಇಂಟರ್ನೆಟ್ ಸೆನ್ಸೇಷನ್ ಲೇಡಿ, ಬಾಲಿವುಡ್ ನಟಿ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ದೀಪಾವಳಿಯ ಶುಭಾಶಯಗಳನ್ನು ಕಳುಹಿಸಿದ್ದಾರೆ. ಅಷ್ಟೇ ಅಲ್ಲದೆ ಭಿನ್ನವಾದ ಶೈಲಿಯಲ್ಲಿ , ವಿಭಿನ್ನವಾದ ಬಟ್ಟೆ ಧರಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾಳೆ. ಉರ್ಫಿಯು ಅರೆಬೆತ್ತಲಾಗಿ ಕೇವಲ ಮೆರೂನ್ ವೆಲ್ವೆಟ್ ಲೆಹೆಂಗಾವನ್ನು ಧರಿಸಿ ,ದೇಹದ ಮೇಲಿನ ಭಾಗದಲ್ಲಿ ಒಂದು ದಾರವೂ ಇಲ್ಲದೆ ,ತನ್ನ ಎದೆಯ ಭಾಗವನ್ನು ತನ್ನ ಒಂದು ಕೈಯಿಂದ ಪೂರ್ತಿಯಾಗಿ ಮುಚ್ಚಿಕೊಂಡು, ಮತ್ತೊಂದು ಕೈಯಿಂದ ಲಡ್ಡು ತಿನ್ನುತ್ತಿದ್ದು, ಮ್ಯಾಚಿಂಗ್​ ಕಿವಿಯೋಲೆ ಹಾಕಿ ಲೂಸ್​ ಹೇರ್​​ ಬಿಟ್ಟಿದ್ದಳು. ಈ ದ್ರಶ್ಯವನ್ನು ಆಕೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಳು.

ಇವಳ ಈ ಅವತಾರಕ್ಕೆ ಪೋಲಿ ಹುಡುಗರು ಧಾರಕಾರವಾಗಿ ಜೊಲ್ಲು ಸುರಿಸಿದ್ದಾರೆ. ಲಡ್ಡು ತಿಂದದ್ದೂ ಅವಳಾದರು ತಿಂದಷ್ಟೇ ಖುಷಿ ಪಟ್ಟದ್ದು ಮಾತ್ರ ಹುಡುಗರು. ಇದು ಕೆಲ ಜನರಾದರೆ, ಇನ್ನು ಕೆಲವರ್ಗದವರು ಆಕೆಯ ಮೇಲೆ ಕಿಡಿಕಾರಿದ್ದಾರೆ. ದೀಪಾವಳಿ ಹಿಂದುಗಳಿಗೆ ವಿಶೇಷ ಹಬ್ಬ. ಆದರೆ, ಅದಕ್ಕೆ ಉರ್ಫಿ ಅಗೌರವ ತೋರಿಸಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಅನೇಕರು ಟೀಕೆಯ ಮಳೆ ಸುರಿಸಿದ್ದಾರೆ.

ಇತ್ತೀಚೆಗೆ ಉರ್ಫಿ ಜಾವೇದ್ ಒಂದು ಮ್ಯೂಸಿಕ್ ವೀಡಿಯೋದಲ್ಲಿ ನಟಿಸಿದ್ದಾರೆ. ‘ಹಾಯ್ ಹಾಯ್ ಯೇ ಮಜ್ಬೂರಿ..’ ಗೀತೆಯ ರಿಮಿಕ್ಸ್ ಆಗಿರುವ ಈ ಹಾಡಿನಲ್ಲಿ ಉರ್ಫಿ ಜಾವೇದ್ ಕೆಂಬಣ್ಣದ ಜಾರುವ ಸೊಂಟದ, ಕಾಣೆಯಾಗಿ ಹೋಗುವ ಕುಬುಸ ಬಳಸಿ ಸೀರೆ ಉಟ್ಟು , ಹೂವಿನಿಂದ ಅಲಂಕೃತವಾದ ಉಯ್ಯಾಲೆ ಹಿಡಿದು ಹುಡುಗರ ಜೊತೆ ಮಳೆಯಲ್ಲಿ ಜಾಲಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಬಾರಿ ಅವರು ಸೀರೆ ಉಟ್ಟ ರೀತಿಗೆ ಕೇಸ್ ಬಿದ್ದಿದೆ. ‘ ಹಾಯ್ ಹಾಯ್ ಯೇ ಮಜ್ಬೂರಿ ‘ ಆಲ್ಬಮ್ ಹಾಡಿಗೆ ಉರ್ಫಿ ನೃತ್ಯ ಮಾಡಿದ್ದು, ಇದು ಅಶ್ಲೀಲವಾಗಿದೆ ಎಂದು ಹೇಳಿ ಕೇಸ್ ದಾಖಲಾಗಿದೆ . ಈ ಬಗ್ಗೆ ಉರ್ಫಿ ಜಾವೇದ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.