Home latest ಬ್ರಹ್ಮಾವರ : ದೇಗುಲದಲ್ಲಿ ಕಳ್ಳತನಕ್ಕೆ ಯತ್ನ | ಕಾವಲುಗಾರನನ್ನು ಕಂಡು ಹಿಂಬದಿ ಬಾಗಿಲಿನಿಂದ ಓಡಿದ ಕಳ್ಳರು

ಬ್ರಹ್ಮಾವರ : ದೇಗುಲದಲ್ಲಿ ಕಳ್ಳತನಕ್ಕೆ ಯತ್ನ | ಕಾವಲುಗಾರನನ್ನು ಕಂಡು ಹಿಂಬದಿ ಬಾಗಿಲಿನಿಂದ ಓಡಿದ ಕಳ್ಳರು

Hindu neighbor gifts plot of land

Hindu neighbour gifts land to Muslim journalist

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಹೆಗ್ಗುಂಜೆ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಿನ್ನೆ ತಡ ರಾತ್ರಿ ಮೂರು ಜನ ಕಳ್ಳರು ಹಣವನ್ನು ಕಳ್ಳತನ ನಡೆಸಲು ಯತ್ನಿಸಿದ ಘಟನೆಯೊಂದು ನಡೆದಿದೆ.

ಫೆ.26 ರಂದು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾತ್ರಿ 10.50 ರ ಹೊತ್ತಿಗೆ ಚಾಮುಂಡೇಶ್ವರಿ ದೇವಾಲಯದ ಬಾಗಿಲು ಮುಚ್ಚಿರುವುದನ್ನು ಕಂಡು ಕಾವಲುಗಾರ ಕಿರಣ್ ಒಳಗೆ ಬಂದು ನೋಡಿದಾಗ ಎರಡರಿಂದ ಮೂರು ಜನ ಅಪರಿಚಿತ ವ್ಯಕ್ತಿಗಳು ಕಾಣಿಕೆ ಡಬ್ಬಿಯನ್ನು ಒಡೆದು ಅದರಿಂದ ಹಣವನ್ನು ಗೋಣಿ ಚೀಲದಲ್ಲಿ ತುಂಬಿಸುತ್ತಿದ್ದು, ಕಾವಲುಗಾರನನ್ನು ಕಂಡು ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹಿಂದಿನ‌ ಬಾಗಿಲಿನಿಂದ ಓಡಿ ಹೋಗಿದ್ದಾರೆ. ನೋಟುಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಆಡಳಿತ ಮೊಕ್ತೇಸರರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.