Home latest ಸರ್ಕಾರಿ ಉದ್ಯೋಗಿಗಳೇ ನಿಮಗೊಂದು ಮಹತ್ವದ ಮಾಹಿತಿ | ಸಂಬಳ ಬಾಕಿಗಿದೆ ತೆರಿಗೆ ಪರಿಹಾರ

ಸರ್ಕಾರಿ ಉದ್ಯೋಗಿಗಳೇ ನಿಮಗೊಂದು ಮಹತ್ವದ ಮಾಹಿತಿ | ಸಂಬಳ ಬಾಕಿಗಿದೆ ತೆರಿಗೆ ಪರಿಹಾರ

Hindu neighbor gifts plot of land

Hindu neighbour gifts land to Muslim journalist

ಕೇಂದ್ರ ಸರ್ಕಾರದ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಏಳನೇ ವೇತನ ಆಯೋಗದ ಅನ್ವಯ ವೇತನ ಹಾಗೂ ಪಿಂಚಣಿಗಳನ್ನು ಪಡೆಯುತ್ತಿದ್ದಾರೆ. ತೆರಿಗೆ ಸ್ಲ್ಯಾಬ್ ಗಳಲ್ಲಿನ ಬದಲಾವಣೆಗೆ ಅನುಗುಣವಾಗಿ ಈ ವರ್ಷ ಪಾವತಿಸಲಾಗಿರುವ ಬಾಕಿ ವೇತನ ಹಾಗೂ ಪಿಂಚಣಿಗಳ ಮೊತ್ತದ ಮೇಲೆ ಹೆಚ್ಚಿನ ತೆರಿಗೆ ಬೀಳುವ ಸಾಧ್ಯತೆಯಿದೆ. ಆದರೆ, ಬಾಕಿ ವೇತನ ಪಡೆದಿರುವ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 89 ರ ಅಡಿಯಲ್ಲಿ ಕ್ಲೈಮ್ ಮಾಡಿಕೊಳ್ಳಲು ಅವಕಾಶವಿದೆ.

ಬಾಕಿ ವೇತನ ಅಥವಾ ಮುಂಗಡ ವೇತನ ಅಥವಾ ಕುಟುಂಬ ಪಿಂಚಣಿ ಬಾಕಿ ಪಡೆದಿರುವ ವ್ಯಕ್ತಿ ತೆರಿಗೆ ಪರಿಹಾರ ಅಥವಾ ಟ್ಯಾಕ್ಸ್ ರಿಲೀಫ್ ಕ್ಲೈಮ್ ಮಾಡಬಹುದು. ಇದಕ್ಕಾಗಿ ಸರ್ಕಾರಿ ಉದ್ಯೋಗಿಗಳು ಅರ್ಜಿ ನಮೂನೆ 10E ಅನ್ನು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಫೈಲ್ ಮಾಡಬೇಕು. ತೆರಿಗೆದಾರರು ಸೆಕ್ಷನ್ 89ರ ಅಡಿಯಲ್ಲಿ ಅರ್ಜಿ ನಮೂನೆ 10ಇ ಸಲ್ಲಿಕೆ ಮಾಡದೆ ತೆರಿಗೆ ಪರಿಹಾರಕ್ಕೆ ಕ್ಲೈಮ್ ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯಲಿದ್ದಾರೆ.

ಇಷ್ಟು ಮಾತ್ರವಲ್ಲದೇ, ಅರ್ಜಿ ನಮೂನೆ 10ಇ ಸಲ್ಲಿಕೆ ಮಾಡಿದ ಬಳಿಕ ನಿಮ್ಮ ಐಟಿಆರ್ ಅಡಿಯಲ್ಲಿ ಕ್ಲೈಮ್ ಮಾಡಿಕೊಳ್ಳಲು ಅವಕಾಶವಿದೆ. ಇನ್ನು ಅರ್ಜಿ ನಮೂನೆ 10ಇ ಸಲ್ಲಿಕೆ ಮಾಡಿದ ಬಳಿಕ ನಿಮ್ಮ ಐಟಿಆರ್ ಫೈಲಿಂಗ್ ನಲ್ಲಿ ತೆರಿಗೆ ಪರಿಹಾರ ಕಾಲಂ ಅಡಿಯಲ್ಲಿ ಮಾಹಿತಿಗಳನ್ನು ನಮೂದಿಸೋದು ಕಡ್ಡಾಯ. ಹೀಗೆ ಮಾಡಿದ್ರೆ ಮಾತ್ರ ನಿಮಗೆ ತೆರಿಗೆ ಹಣ ಮರುಪಾವತಿಯಾಗುತ್ತದೆ.

ಆನ್ ಲೈನ್ ನಲ್ಲಿ 10ಇ ಅರ್ಜಿ ಸಲ್ಲಿಕೆ ಹೇಗೆ?

ಮೊದಲಿಗೆ www.incometax.gov.in ಈ ವೆಬ್ ಸೈಟ್ ಗೆ ಲಾಗಿ ಇನ್ ಆಗಿ. ಅನಂತರ  ಇ-ಫೈಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿರುವ ಅರ್ಜಿಗಳ ಪಟ್ಟಿಯಲ್ಲಿ ‘ತೆರಿಗೆ ವಿನಾಯ್ತಿ ಹಾಗೂ ಪರಿಹಾರಗಳು/ಫಾರ್ಮ್ 10ಇ’ ಆಯ್ಕೆ ಮಾಡಿ.

ಮೌಲ್ಯಮಾಪನ ವರ್ಷ ಆಯ್ಕೆ ಮಾಡಿ ಹಾಗೂ ಮುಂದುವರಿಕೆ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಫಾರ್ಮ್ 10ಇ ವಿವಿಧ ಬಾಕಿಗಳಿಗೆ ಸಂಬಂಧಿಸಿ 5 ಅನುಬಂಧಗಳನ್ನು ಹೊಂದಿದೆ. ಇದರಲ್ಲಿ ಅನುಬಂಧ-1 ಆಯ್ಕೆ ಮಾಡಬೇಕು. ಇದು ಮುಂಗಡವಾಗಿ ವೇತನ ಅಥವಾ ಬಾಕಿ ಪಡೆದಿರೋದಕ್ಕೆ ಮೌಲ್ಯಮಾಪನ ವರ್ಷ ಆಯ್ಕೆ ಮಾಡಿ ಹಾಗೂ ಮುಂದುವರಿಕೆ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಅರ್ಜಿ ನಮೂನೆ ಸೆಕ್ಷನ್ 89ರ ಅಡಿಯಲ್ಲಿ ಲಭಿಸುವ ತೆರಿಗೆ ಪರಿಹಾರದ ಹಣವನ್ನು ಲೆಕ್ಕ ಮಾಡುತ್ತದೆ.

ಒಮ್ಮೆ ನೀವು ಅರ್ಜಿ ನಮೂನೆ 10ಇ ಫೈಲ್ ಮಾಡಿದ ನಂತರ ನೀವು ಅದನ್ನು ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ನಲ್ಲಿ ಕ್ಲೈಮ್ ಮಾಡಬೇಕು. ಆಗ ಮಾತ್ರ ನಿಮಗೆ ಆ ಹಣ ಸಿಗುತ್ತದೆ. ಈ ಮಾಹಿತಿಗಳನ್ನು ನಿಮ್ಮ ಐಟಿಆರ್ ತೆರಿಗೆ ಪರಿಹಾರ ಕಾಲಂ ಅಡಿಯಲ್ಲಿ ನಮೂದಿಸಿ.